ಭಾವಿ ಪತ್ನಿ ಜೊತೆ ಗಿಚ್ಚಿಗಿಲಿಗಿಲಿ ಪ್ರಶಾಂತ್​ ಕ್ಯೂಟ್​ ಫೋಟೋಶೂಟ್​- ಅಭಿಮಾನಿಗಳು ಫಿದಾ

Published : Jul 04, 2026, 08:16 PM IST

'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಹಾಸ್ಯನಟ ಪ್ರಶಾಂತ್, ತಮ್ಮ ಐದು ವರ್ಷಗಳ ಪ್ರೇಯಸಿ ಕೃತಿ ಗೌಡ ಅವರನ್ನು ಜುಲೈ 5 ರಂದು ವರಿಸಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಈ ಜೋಡಿಯ ಪ್ರಿ-ವೆಡ್ಡಿಂಗ್ ವಿಡಿಯೋಶೂಟ್ ವೈರಲ್ ಆಗಿದೆ.

PREV
16
ಗಿಚ್ಚಿ ಗಿಲಿಗಿಲಿ ಪ್ರಶಾಂತ್​ ಮದುವೆ

ಗಿಚ್ಚಿ ಗಿಲಿಗಿಲಿ ಸೇರಿದಂತೆ ಕೆಲವು ರಿಯಾಲಿಟಿ ಷೋಗಳ ಮೂಲಕ ಮನೆ ಮಾತಾಗಿರುವ ನಟ ಪ್ರಶಾಂತ್​ ಅವರ ಮದುವೆಯ ಶಾಸ್ತ್ರಗಳು ಇದಾಗಲೇ ಆರಂಭವಾಗಿವೆ. ನಾಳೆ ಅಂದ್ರೆ ಜುಲೈ 5 ಇವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರಶಾಂತ್‌ ಅವರು ಕೃತಿ ಗೌಡ ಅವರನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಗ್ತಿದೆ. "ನಮ್ಮದು ಐದು ವರ್ಷಗಳ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ನಾನೇ ಅವಳಿಗೆ ಮದುವೆಯಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದೆ" ಎಂದು ಪ್ರಶಾಂತ್ ಈ ಹಿಂದೆ ಹೇಳಿಕೊಂಡಿದ್ದರು.

26
ಫ್ಯಾನ್ಸ್ ಫಿದಾ

ಇದೀಗ ಈ ಜೋಡಿಯ ಸಕತ್​ ವಿಡಿಯೋಶೂಟ್​ ವೈರಲ್​ ಆಗಿದೆ. ಇದರಲ್ಲಿ ಜೋಡಿ ಮಿಂಚುತ್ತಿದ್ದಾರೆ. ಇದರ ವಿಡಿಯೋಶೂಟ್​ ಹಿನ್ನೆಲೆಯಲ್ಲಿ ನಟಿ ಸುಷ್ಮಾ ಕೆ. ರಾವ್​ ಅವರ ಧ್ವನಿ ಕೂಡ ಕೇಳಿಬರುತ್ತಿದ್ದು, ಶಾರುಖ್​ ಖಾನ್​ ರೀತಿ ಮಿಂಚುತ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ.

36
ಹಾಸ್ಯದ ಹೊಳೆ

ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದ ಮೂರೂ ಸೀಸನ್‌ಗಳಲ್ಲಿ ಹಾಸ್ಯದ ಹೊಳೆ ಹರಿಸಿದವರು ಪ್ರಶಾಂತ್ ಗೌಡ. ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದಲ್ಲಿ ವಿನ್ನರ್ ಆಗಿರುವ ಪ್ರಶಾಂತ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇದಾಗಲೇ ಚಪ್ಪರ ಪೂಜೆ, ಹಳದಿ ಶಾಸ್ತ್ರ ಸೇರಿದಂತೆ ವಿವಿಧ ಶಾಸ್ತ್ರಗಳು ನಡೆಯುತ್ತಿದ್ದು, ಅದರ ಫೋಟೋಗಳು ವೈರಲ್​ ಆಗಿವೆ. ಅವರ ಅಮ್ಮ ಚಪ್ಪರ ಶಾಸ್ತ್ರ ನೆರವೇರಿಸುತ್ತಿದ್ದು, ಮನೆಗೆ ಬಂದಿರುವ ಅತಿಥಿಗಳು ಅದರಲ್ಲಿ ಪಾಲ್ಗೊಂಡಿರುವುದನ್ನು ನೋಡಬಹುದಾಗಿದೆ.

46
ಕೃತಿ ಗೌಡ ಕುರಿತು

ಕೃತಿ ಗೌಡ ಕೇವಲ ಪ್ರಶಾಂತ್ ಭಾವಿ ಪತ್ನಿಯಷ್ಟೇ ಅಲ್ಲ, ಅವರು ಕೂಡ ಒಬ್ಬ ಕಲಾವಿದೆ. 'ಬ್ರೇಕ್ ಫೇಲ್ಯೂರ್', 'ದಶಗ್ರೀವ' ಸಿನಿಮಾಗಳಲ್ಲಿ ನಟಿಸಿದ್ದು, 'ರಾಮಾಚಾರಿ' ಮತ್ತು 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

56
ಟ್ರೋಲ್​ ಮಾಡಿದ್ದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ "ಕಪ್ಪಗಿರುವ ಪ್ರಶಾಂತ್‌ಗೆ ಇಷ್ಟು ಬೆಳ್ಳಗಿರುವ ಹುಡುಗಿ ಸಿಕ್ಕಿದ್ದಾಳೆ" ಅಥವಾ "ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾರೆ" ಎಂಬ ಕಮೆಂಟ್‌ ಬರುತ್ತಿವೆ. ಇದಕ್ಕೆ ಕೃತಿ ಈ ಹಿಂದೆ ತಿರುಗೇಟು ನೀಡಿದ್ದರು. "ಒಬ್ಬ ಹುಡುಗ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ಹುಡುಗಿ ಅವನನ್ನು ಮದುವೆಯಾದರೆ, ಅದು ಕೇವಲ ಹಣಕ್ಕೋಸ್ಕರ ಎಂದು ಜಡ್ಜ್ ಮಾಡುವುದು ತಪ್ಪು. ಅವನಲ್ಲಿರುವ ಮುಗ್ಧತೆ, ನನ್ನನ್ನು ಮಗುವಿನಂತೆ ನೋಡಿಕೊಳ್ಳುವ ಕೇರಿಂಗ್ ಮನೋಭಾವ ಇಷ್ಟವಾಯಿತು. ನನ್ನ ತಂದೆಯ ಸ್ಥಾನವನ್ನು ತುಂಬುವ ಶಕ್ತಿ ಅವನಲ್ಲಿದೆ" ಎಂದಿದ್ದರು.

66
ಪ್ರಶಾಂತ್‌ ಹೇಳಿದ್ದೇನು?

ಪ್ರಶಾಂತ್ ಅವರು, "ನಾವು ಬಿಸಿಲಿಗೆ ಹೋದರೆ ಟ್ಯಾನ್ ಆಗುತ್ತೇವೆ, ಬಣ್ಣ ಬದಲಾಗುತ್ತದೆ. ಆದರೆ ಮನಸ್ಸು ಬದಲಾಗಲ್ಲ. ನಾನು ಅವಳ ಬಣ್ಣ ನೋಡಿ ಪ್ರೀತಿಸಿಲ್ಲ, ಅವಳು ನನ್ನ ಶ್ರೀಮಂತಿಕೆ ನೋಡಿ ಬಂದಿಲ್ಲ. ನಮ್ಮಿಬ್ಬರ ನಡುವೆ ಭಾವನೆಗಳ ಬಂಧವಿದೆ" ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories