Colors Serial: ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ಅಜ್ಜಿಯರೇ ಇದೀಗ ಸೆಂಟರ್ ಆಫ್ ಅಟ್ರಾಕ್ಷನ್. ಅಜ್ಜಿಯರಿಂದಲೇ ಈಗ ಕಥೆಯಲ್ಲಿ ಸಖತ್ ಟ್ವಿಸ್ಟ್ ಮತ್ತು ಟರ್ನ್ ಬರುತ್ತಿದೆ. ಅಜ್ಜಿಯರಿಂದಲೇ ಸೀರಿಯಲ್ TRP ಹೆಚ್ಚಾಗುತ್ತಿದೆ ಎನ್ನಬಹುದೇನೋ?
ಕಲರ್ಸ್ ಕನ್ನಡದ ಪ್ರತಿಯೊಂದು ಧಾರಾವಾಹಿಗಳು ಸಹ ತಮ್ಮ ವಿಭಿನ್ನ ಕಥಾ ಹಂದರದಿಂದಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗಂತೂ ಧಾರಾವಾಹಿಗಳಲ್ಲಿ ಅಜ್ಜಿಯಂದಿರೇ ಮೇಲು ಗೈ ಸಾಧಿಸಿದ್ದಾರೆ. ಸದ್ಯ ಇಬ್ಬರು ಅಜ್ಜಿಯರ ಸುತ್ತಲೇ ಕಥೆ ನಡೆಯುತ್ತಿದ್ದು, ಸದ್ಯ ಇವರೇ TRP ಕ್ವೀನ್ ಆಗಿಬಿಟ್ಟಿದ್ದಾರೆ ಎಂದೂ ಹೇಳಬಹುದು.
26
ಅಜ್ಜಿಯರದ್ದೇ ಕಾರು ಬಾರು
ಹೌದು, ಕಲರ್ಸ್ ಕನ್ನಡದ ‘ನಂದಗೋಕುಲ’ ಮತ್ತು ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಅಜ್ಜಿಯರು ತಮ್ಮ ಮನೆ ಹಾಗೂ ಮನೆಮಂದಿಯನ್ನು ಉಳಿಸಿಕೊಳ್ಳೋದಕ್ಕೆ, ಒಂದು ಮಾಡೋದಕ್ಕೆ ಸಖತ್ ಆಗಿ ನಾಟಕ ಮಾಡುತ್ತಿದ್ದಾರೆ. ಹಾಗಾಗಿ ಸದ್ಯ ಧಾರಾವಾಹಿಗಳ ಸೆಂಟರ್ ಆಫ್ ಅಟ್ರಾಕ್ಷನ್ ಅಜ್ಜಿಯಂದಿರೇ ಆಗಿದ್ದಾರೆ.
36
ಮುದ್ದು ಸೊಸೆ
‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಭದ್ರನ ಮುದ್ದಿನ ಅಜ್ಜಿ ಇದ್ದಕ್ಕಿದ್ದಂತೆ, ಸಾವನ್ನಪ್ಪಿದ್ದರು. ಮನೆಯವರೆಲ್ಲಾ ಸೇರಿ, ಅತ್ತು ಕರೆದು, ಇನ್ನೇನು ಶವ ಮೆರವಣಿಗೆ ಮಾಡಬೇಕು ಎನ್ನುವಷ್ಟರಲ್ಲಿ, ಅಜ್ಜಿ ಸತ್ತಿಲ್ಲ ಅನ್ನೋದು ತಿಳಿದು ಬಂದಿದೆ. ಅಜ್ಜಿ ತಾನು ಸತ್ತಂತೆ ನಾಟಕ ಮಾಡಿದ್ದು, ಭದ್ರ ಮತ್ತು ವಿದ್ಯಾ ಒಂದಾಗಬೇಕು ಎನ್ನುವ ಕಾರಣದಿಂದ.
ಇನ್ನು ನಂದಗೋಕುಲದಲ್ಲಿ ಗಿರಿಜಾ ಅಮ್ಮ ಇದ್ದಕ್ಕಿದ್ದಂತೆ, ಎದೆ ಹಿಡಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇದರಿಂದ ಗಿರಿಜಾ ಗಾಬರಿಯಾಗಿದ್ದಾಳೆ. ಅಮ್ಮನನ್ನು ಹೇಗಾದರೂ ಮಾಡಿ ನೋಡಬೇಕು ಎನ್ನುವ ತವಕದಲ್ಲಿ ಇದ್ದಾರೆ. ಅಮ್ಮು ಕೂಡ ತನ್ನ ಅಜ್ಜಿಗೆ ಇನ್ನು ಏನೇನು ಆಗಿದೆಯೋ ಎಂದು ನೊಂದುಕೊಂಡು ಕಣ್ಣಿರಿಡುತ್ತಿದ್ದಾರೆ.
56
ಇಲ್ಲೂ ಕೂಡ ಅಜ್ಜಿಯ ನಾಟಕ
ಅಂದ ಹಾಗೇ ‘ನಂದಗೋಕುಲ’ ಧಾರಾವಾಹಿಯಲ್ಲೂ ಎದೆಹಿಡಿದು ಆಸ್ಪತ್ರೆ ಸೇರಿ, ಐಸಿಯುನಲ್ಲಿ ಸೇರ್ಪಡೆಯಾಗಿರುವ ಅಜ್ಜಿ, ಎಲ್ಲರೂ ಹೊರಗೆ ಹೋದಮೇಲೆ ಮಾಸ್ಕ್ ತೆಗೆದು ತಾನು ನಾಟಕ ಮಾಡುತ್ತಿರುವುದು ಎಂದಿದ್ದಾರೆ. ಇದು ಮಗಳು-ಮೊಮ್ಮಗಳನ್ನು ಕಾಣುವ ಹೊಸ ನಾಟಕ.
66
ಸೀರಿಯಲ್ ವೀಕ್ಷಕರು ಖುಷ್
ಧಾರಾವಾಹಿಗಳಲ್ಲಿ ಅಜ್ಜಿಯಂದಿರ ಪರ್ಫಾರ್ಮನ್ಸ್ ನೋಡಿ ಸೀರಿಯಲ್ ವೀಕ್ಷಕರು ಅಂತೂ ಫುಲ್ ಖುಷಿಯಾಗಿದ್ದಾರೆ. ಅಜ್ಜಿಯರ ನಟನೆ, ಕಥೆ ಎಲ್ಲವೂ ಸೂಪರ್, ಒಳ್ಳೆ ಟ್ವಿಸ್ಟ್ ಸಿಕ್ಕಿದೆ. ಚೆನ್ನಾಗಿದೆ ಸೀರಿಯಲ್ ಹೀಗೆ ಮುಂದುವರೆಸಿ ಎನ್ನುತ್ತಿದ್ದಾರೆ ವೀಕ್ಷಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.