ಶೀಘ್ರದಲ್ಲಿ ‘ಅಮೃತಧಾರೆ’ ಮುಗಿಯೋದು ಖಚಿತಾ! ರೋಚಕ ಟ್ವಿಸ್ಟ್ ಜೊತೆ ಧಾರಾವಾಹಿ ದಿ ಎಂಡ್?

Published : Jul 04, 2026, 06:46 PM IST

ಅಮೃತಧಾರೆ ಧಾರಾವಾಹಿ ಶೀಘ್ರದಲ್ಲಿ ಮುಕ್ತಾಯವಾಗುತ್ತೆ ಎನ್ನುವ ಮಾಹಿತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ‘ಜಗದ್ಧಾತ್ರಿ’ ಸೀರಿಯಲ್ ಗಾಗಿ ನಿಜವಾಗಿಯೂ ಅಮೃತಧಾರೆ ಧಾರಾವಾಹಿ ತನ್ನ ಕಥೆಯನ್ನು ಎಂಡ್ ಮಾಡುತ್ತಾ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

PREV
15
ಅಮೃತಧಾರೆ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ಅಮೃತಧಾರೆ’. ಭೂಮಿಕಾ ಮತ್ತು ಗೌತಮ್ ದಿವಾನ್ ಅವರ ಮಧುರ ಪ್ರೇಮದ ಒಲವೇ ‘ಅಮೃತಧಾರೆ’ಯಾಗಿ ಹರಿದು ಬಂದಿತ್ತು. ವೀಕ್ಷಕರು ಸಹ ಈ ಧಾರಾವಾಹಿಯನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ಇದೀಗ ಧಾರಾವಾಹಿ ಮುಕ್ತಾಯದ ಹಂತಹದಲ್ಲಿದೆ.

25
1000 ಸಂಚಿಕೆ ಕಂಡಿದ್ದ ಅಮೃತಧಾರೆ

ಅಂದ ಹಾಗೇ ಅಮೃತಧಾರೆ ಧಾರಾವಾಹಿ ಇತ್ತೀಚೆಗಷ್ಟೆ 1000 ಸಂಚಿಕೆ ಪೂರ್ಣಗೊಳಿಸಿದ್ದು. ಸದ್ಯಕ್ಕಂತೂ ಗೌತಮ್-ಭೂಮಿಕಾ ಮತ್ತು ಮಿಂಚು, ಆಕಾಶ್ ಹಾಗೂ ತುಂಬು ಕುಟುಂಬ ಸಂತೋಷದಿಂದ ಬಾಳುತ್ತಿರುವ ಎಪಿಸೋಡ್ ಗಳು ಪ್ರಸಾರವಾಗುತ್ತಿದೆ. ಆದರೆ ಅದರ ಜೊತೆಗೊಂದು ಟ್ವಿಸ್ಟ್ ಕೂಡ ಸಿಕ್ಕಿದೆ.

35
ಶಾಕುಂತಲಾ ನಿಜ ಬಣ್ಣ ಬಯಲು

ಎಲ್ಲಾ ಸರಿಯಾಗುತ್ತಿದೆ, ಜೈದೇವ್ ಜೈಲಿಗೆ ಹೋಗಿದ್ದಾನೆ ಎಂದುಕೊಳ್ಳುತ್ತಿರುವಾಗಲೇ ಇದೀಗ, ಶಾಕುಂತಲಾ ಜೈಲಿನಿಂದ ಮಗನನ್ನು ಬಿಡಿಸಿದ್ದಾಳೆ. ಅಷ್ಟೇ ಅಲ್ಲ, ನೀನು ಇಷ್ಟು ದಿನ ನೋಡಿದ್ದೆಲ್ಲಾ ನಾಟಕ, ನನ್ನ ಅಸಲಿ ಮುಖ ಏನು ಅನ್ನೋದನ್ನು ಇನ್ನು ಮುಂದೆ ತೋರಿಸುತ್ತೇನೆ ಎನ್ನುತ್ತಾ, ಮಗನನ್ನು ಅಪ್ಪಿ ಮುದ್ದಾಡಿದ್ದಾಳೆ ಶಾಕುಂತಲಾ.

45
ಮುಂದೇನಾಗುತ್ತೇ ಅಮೃತಧಾರೆಯಲ್ಲಿ?

ಅಮ್ಮನ ನಿಜ ಮುಖವನ್ನು ಗೌತಮ್ ಶೀಘ್ರದಲ್ಲಿ ಪತ್ತೆ ಹಚ್ಚುತ್ತಾನ? ಅಥವಾ ಅಮ್ಮ -ಮಗ ಸೇರಿ ಮತ್ತೊಂದು ಖತರ್’ನಾಕ್ ಐಡಿಯಾ ಮಾಡಿ, ಮತ್ತೆ ಭೂಮಿಕಾ- ಗೌತಮ್ ಜೀವನದಲ್ಲಿ ಬೆಂಕಿ ಹಚ್ಚುತ್ತಾರೆಯೇ ಅನ್ನೋದು ಗೊತ್ತಿಲ್ಲ.. ಆದರೆ ಧಾರಾವಾಹಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎನ್ನುವ ಮಾಹಿತಿ ಮಾತ್ರ ಕನ್ಫರ್ಮ್ ಆಗಿದೆ.

55
ಜಗದ್ಧಾತ್ರಿಗಾಗಿ ಅಮೃತಧಾರೆ ಎಂಡ್?

ಶೀಘ್ರದಲ್ಲಿ ‘ಜಗದ್ಧಾತ್ರಿ’ ಧಾರಾವಾಹಿ ಪ್ರಸಾರವಾಗಲಿದ್ದು, ಆ ಧಾರಾವಾಹಿಗಾಗಿ ಅಮೃತಧಾರೆ ಧಾರಾವಾಹಿಯನ್ನು ಮುಗಿಸಲಾಗುತ್ತಿದೆ ಎನ್ನಲಾಗಿದೆ. ಟ್ವಿಸ್ಟ್ ಮತ್ತು ಟರ್ನ್ ಗಳನ್ನು ಹೊಂದಿರುವ ಕ್ಲೈಮಾಕ್ಸ್ ಕೊಡುವ ಮೂಲಕ ಮುದ್ದು ಜೋಡಿಗಳ ಒಲವ ಅಮೃಅತಧಾರೆಗೆ ದಿ ಎಂಡ್ ಹೇಳಲಾಗುತ್ತಿದೆ ಎನ್ನುವ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮುಂದೆ ಏನು ಆಗುತ್ತೆ ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories