Na Ninna Bidalaare: ನದಿಯ ಆಳಕ್ಕೆ ಹೋದ್ರೂ ಒದ್ದೆಯಾಗದ ಈ ಸೀರೆ ಎಲ್ಲಿ ತಗೊಂಡೆ ಹೇಳು ದುರ್ಗಾ ಪ್ಲೀಸ್

Published : Oct 16, 2025, 10:25 PM IST

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ಬಾಲಕಿಯ ಗೆಜ್ಜೆಗಾಗಿ ದುರ್ಗಾ ಹುಡುಕಾಟ ನಡೆಸುತ್ತಾಳೆ. ಈ ವೇಳೆ ನದಿಗೆ ಹಾರಿದರೂ ಆಕೆಯ ಸೀರೆ ಒದ್ದೆಯಾಗದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಕಾರಣವಾಗಿದ್ದು, ನೆಟ್ಟಿಗರು ಈ ಸೀರೆ ಎಲ್ಲಿ ಸಿಗುತ್ತದೆ ಎಂದು ತಮಾಷೆಯಾಗಿ ಪ್ರಶ್ನಿಸುತ್ತಿದ್ದಾರೆ.

PREV
17
ಸಾವು ಬದುಕಿನ ನಡುವೆ ಹಿತಾ

​ನಾ ನಿನ್ನ ಬಿಡಲಾರೆ (Na Ninna Bidalaare Serial) ಸದ್ಯ ಈ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಸಿಕ್ಕಿದ್ದು, ಮಾಳವಿಕಾಳ ತಾಂತ್ರಿಕ ಬುದ್ಧಿಯಿಂದಾಗಿ ಹಿತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಅವಳನ್ನು ಕಾಪಾಡುವುದು ಸದ್ಯ ದುರ್ಗಾಳ ಕೈಯಲ್ಲಿ ಇದೆ. ಇದೇ ಕಾರಣಕ್ಕೆ ಆಕೆ ದೊಡ್ಡ ಹೋರಾಟವನ್ನೇ ನಡೆಸಿದ್ದಾಳೆ.

27
ದೇವಿ ರೂಪದ ಅಜ್ಜಿ

ಅಲ್ಲಿ ದೇವಿ ರೂಪದ ಅಜ್ಜಿ ದುರ್ಗಾಳಿಗೆ ಎದುರಾಗುತ್ತಾಳೆ. ಆಗ ಆಕೆ ದುರ್ಗಾಪುರದ ಕಥೆ ಹೇಳುತ್ತಾಳೆ. ಸಾವಿರಾರು ವರ್ಷಗಳ ಹಿಂದಿನ ಕಥೆ ಅದು. ರಾಕ್ಷಸಿ ದುರ್ಗಾಪುರದ ಮೇಲೆ ದಾಳಿ ಮಾಡಿದ್ದಳು. ಆ ರಾಕ್ಷಸಿಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ದುರ್ಗಾಪುರ ನಾಶ ಮಾಡುವ ಉದ್ದೇಶ ಹೊಂದಿದ್ದಳು. ದೇವಿ ರಕ್ಷಕರೂ ಇದ್ದರು. ಅವರು ಇಲ್ಲಿಯ ರಾಜ ಮತ್ತು ಇಬ್ಬರು ಹೆಣ್ಣುಮಕ್ಕಳು. ಅವರ ದುರ್ಗಾಪುರದ ರಕ್ಷಣೆ ಮಾಡುತ್ತಾ ಜೀವ ಬಿಟ್ಟರು. ದೇವಿಯ ಮೂರ್ತಿಯನ್ನು ರಾಕ್ಷಸಿ ಕೊಂಡೊಯ್ದಳು ಎನ್ನುತ್ತ ಆ ಘಟನೆಯನ್ನುಹೇಳಿದ್ದಾಳೆ ಅಜ್ಜಿ.

37
ಹಿತಾ ಪ್ರಾಣ ಕಾಪಾಡಲು ಹೊರಟ ದುರ್ಗಾ

ಕೊನೆಗೆ, ಆ ರಾಕ್ಷಸಿ ದೇವಿಯ ಮೂರ್ತಿ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟಳು. ಆದರೆ ದೇವಿಯ ಬಳೆ ಮತ್ತು ಗೆಜ್ಜೆ ಎಲ್ಲಿದೆ ಎಂದು ತಿಳಿದಿಲ್ಲ. ದೇವಾಲಯದ ಪಕ್ಕದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂರ್ತಿ ಇದೆ. ಆದರೆ ಆ ಕಾಣೆಯಾದ ಬಳೆ ಮತ್ತು ಗೆಜ್ಜೆಯನ್ನು ತಂದರೆ ಮಾತ್ರ ಆ ಬಾಗಿಲು ತೆರೆಯುತ್ತದೆ. ಅವುಗಳನ್ನು ದೇವಿಯ ಹತ್ತಿರ ಇಟ್ಟರೆ, ಹಿತಾಳಿಗೆ ಎಚ್ಚರ ಆಗುತ್ತದೆ ಎಂದಿದ್ದಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವ ಗೊಂದಲ ದುರ್ಗಾಳಿಗೆ ಇದ್ದರೂ, ಹಿತಾಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ರೆಡಿಯಾಗಿದ್ದಾಳೆ.

47
ಬಳೆ ಪಡೆಯುವಲ್ಲಿ ಯಶಸ್ಸು

ಮೊದಲಿಗೆ ಬಳೆ ಹುಡುಕಿ ಹೊರಟ ದುರ್ಗಾಳಿಗೆ ಅಂಬಿಕಾ ಸಹಾಯ ಮಾಡುತ್ತಾಳೆ. ಬೆಟ್ಟ ಗುಡ್ಡ ಎಲ್ಲಾ ಅಲೆದ ಮೇಲೆ ದೇವಿಯ ಬಳೆ ಆಕೆಗೆ ಸಿಗುತ್ತದೆ. ಇನ್ನು ಏನಿದ್ದರೂ ಗೆಜ್ಜೆ ಹುಡುಕುವ ಕೆಲಸ. ಆ ಸಮಯದಲ್ಲಿ ಬಾಲಕಿಯೊಬ್ಬಳು ಅಳುತ್ತಾ ಕುಳಿತುಕೊಂಡಿರುತ್ತಾಳೆ. ಕೊನೆಗೆ ದುರ್ಗಾ ಬಂದಾಗ ನನಗೆ ಸಹಾಯ ಮಾಡು ಎನ್ನುತ್ತಾಳೆ. ಏನೆಂದು ಕೇಳಿದಾಗ, ಇಲ್ಲಿ ನದಿಯ ಒಳಗೆ ಗೆಜ್ಜೆ ಬಿದ್ದು ಹೋಗಿದೆ ಎನ್ನುತ್ತಾಳೆ. ಅವಳಿಗೆ ಸಹಾಯ ಮಾಡಲು ದುರ್ಗಾ ಮುಂದಾಗಿ ಅಲ್ಲಿ ಹಾರುತ್ತಾಳೆ.

57
ಬಾಲಕಿಯೇ ದೇವಿ

ಕೊನೆಗೆ ಆ ಬಾಲಕಿಯೇ ದೇವಿ ಎನ್ನುವುದು ತಿಳಿಯುತ್ತದೆ. ದುರ್ಗಾಳ ರಕ್ಷಣೆಗೆ ನಾಗರಾಜನನ್ನು ಕಳುಹಿಸುತ್ತಾಳೆ. ದುರ್ಗಾ, ನದಿಯ ಆಳಕ್ಕೆ ಹೋಗಿ ಎರಡೂ ಗೆಜ್ಜೆಗಳನ್ನು ತರುತ್ತಾಳೆ. ಅದನ್ನು ನೋಡಿದ ಆಕೆಯ ಅಪ್ಪನಿಗೆ ಇದು ದೇವಿಯ ಗೆಜ್ಜೆ ಎಂದು ತಿಳಿಯುತ್ತದೆ.

67
ಎಲ್ಲರ ಚಿತ್ತ ಸೀರೆಯತ್ತ

ಇದು ಸೀರಿಯಲ್​ ಸ್ಟೋರಿ ಆದ್ರೆ, ಇನ್ನು ಎಲ್ಲರ ಚಿತ್ತ ದುರ್ಗಾಳ ಸೀರೆಯ ಮೇಲೆ ಬಿದ್ದಿದೆ. ನದಿಯ ಆಳಕ್ಕೆ ಹೋಗಿ ಗೆಜ್ಜೆ ತಂದರೂ ಸ್ವಲ್ಪವೂ ಸೀರೆ ಒದ್ದೆ ಆಗದೇ ಇರುವುದಕ್ಕೆ ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. ನಾವು ಸ್ವಲ್ಪ ಮಳೆಯಲ್ಲಿ ತೋಯ್ದರೂ ಸೀರೆ ಒದ್ದೆಯಾಗಿ ಮುದ್ದೆಯಾಗುತ್ತದೆ. ಆದರೆ ದುರ್ಗಾಳ ಸೀರೆ ನದಿಯಲ್ಲಿ ಮುಳುಗಿದ್ರೂ ಏನೂ ಆಗಲಿಲ್ಲ. ಸ್ವಲ್ಪವೂ ಒದ್ದೆ ಆಗಲಿಲ್ಲ ಎಂತಿರೋ ನೆಟ್ಟಿಗರು, ಪ್ಲೀಸ್​ ದುರ್ಗಾ ಈ ಸೀರೆ ಎಲ್ಲಿ ಖರೀದಿ ಮಾಡಿದ್ದಿ ಎಂದು ಹೇಳಮ್ಮಾ ಎನ್ನುತ್ತಿದ್ದಾರೆ.

77
ಕೂದಲೂ ಒದ್ದೆಯಾಗಿಲ್ಲ

ಇದೇ ವೇಳೆ ಆಕೆಯ ಕೂದಲು ಮುಂದೆ ಸ್ವಲ್ಪ ಒದ್ದೆಯಾದಂತೆ ತೋರಿಸಲಾಗಿದೆ. ಇದನ್ನೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್​ ಬಿಟ್ಟು ತಮಾಷೆ ಮಾಡುವುದಕ್ಕಾಗಿಯೇ ಒಂದಷ್ಟು ಮಂದಿ ಕಾಯುತ್ತಿರುತ್ತಾರೆ.

Read more Photos on
click me!

Recommended Stories