ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಯೋಜನೆಯಂತೆ ಗೌತಮ್ ಇರುವ ವಠಾರಕ್ಕೇ ಭೂಮಿಕಾ ಬಂದಿದ್ದಾಳೆ. ಅಪ್ಪ-ಮಗ ಗೌತಮ್ ಮತ್ತು ಆಕಾಶ್ ಭೇಟಿಯಾಗಿದ್ದು, ಇಬ್ಬರ ಸಂತೋಷದ ನಡುವೆಯೂ, ಭೂಮಿಕಾ ಮತ್ತೆ ಮನೆ ಖಾಲಿ ಮಾಡಬಹುದೆಂಬ ಆತಂಕ ಶುರುವಾಗಿದೆ.
ಅಮೃತಧಾರೆ (Amruthadhaare) ಸೀರಿಯಲ್ ಮತ್ತು ಟ್ರ್ಯಾಕ್ಗೆ ಬಂದಿದೆ. ಮಲ್ಲಿಯ ಪ್ಲ್ಯಾನ್ ಸಕ್ಸಸ್ ಆಗೋ ಥರ ಕಾಣಿಸ್ತಿದೆ. ಗೌತಮ್ ಇರೋ ವಠಾರಕ್ಕೇನೇ ಭೂಮಿಕಾಳನ್ನು ಕರೆದುಕೊಂಡು ಬಂದಿದ್ದಾಳೆ. ಆದರೆ ಭೂಮಿಕಾಗೆ ಇದೆಲ್ಲಾ ಗೊತ್ತೇ ಇಲ್ಲ.
27
ಗೌತಮ್- ಭೂಮಿಕಾ ಎದುರು ಬದುರು
ಅದೇ ಇನ್ನೊಂದೆಡೆ, ನೆರೆಮನೆಗೆ ಯಾರೋ ಹೊಸಬರು ಬಂದರು ಎಂದು ಗೌತಮ್ ಕಾಫಿ ತೆಗೆದುಕೊಂಡು ಹೋಗಿ ಕೊಟ್ಟು ಬಾಗಿಲು ಓಪನ್ ಮಾಡಿದ್ರೆ ಎದುರಿಗೆ ಭೂಮಿಕಾ! ಇಬ್ಬರಿಗೂ ಖುಷಿ, ನೋವು, ದುಃಖ ಎಲ್ಲವೂ ಒಟ್ಟಿಗೇ ಆದರೂ ಅಕ್ಕ-ಪಕ್ಕದ ಮನೆಯವರು ನೋಡುತ್ತಿದ್ದಾರೆ ಎನ್ನೋ ಕಾರಣಕ್ಕೆ ಏನೂ ಆಗದವರ ರೀತಿ ಇದ್ದಾರೆ.
37
ಮಗಳ ರೂಪದಲ್ಲಿ ಬಾಲಕಿ
ಅದೇ ಇನ್ನೊಂದೆಡೆ, ಗೌತಮ್ ಬಾಳಲ್ಲಿ ಮಗಳ ರೂಪದ ಬಾಲಕಿ ಎಂಟ್ರಿ ಕೊಟ್ಟಿದ್ದಾಳೆ. ಇನ್ನು ಅದೇ ವಠಾರದಲ್ಲಿ ಮಗ ಬೇರೆ ಇದ್ದಾನೆ. ಇನ್ನು ಕೇಳಬೇಕೆ ಅವನ ಖುಷಿ?
ಅಪ್ಪು ಒಬ್ಬನೇ ಕುಳಿತು ಚಿಪ್ಸ್ ತಿನ್ನೋದನ್ನು ನೋಡಿದ ಗೌತಮ್ ಓಡಿ ಹೋಗಿ ಅವನನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾನೆ. ಆಗ ಆಕಾಶ್, ಅವನನ್ನು ನೋಡಿ ಆಶ್ಚರ್ಯಗೊಂಡಿದ್ದಾನೆ. ಫ್ರೆಂಡ್ ಅಂತ ಕರಿಯೋಕೆ ಹೋದೋನು ಕಡೆಗೆ ಸರ್ ಅಂತ ಕರೆದಿದ್ದಾನೆ.
57
ಕಷ್ಟ ಹೇಳಿಕೊಂಡ ಆಕಾಶ್
ಆಕಾಶ್, ಅಪ್ಪನ ಎದುರು ತನ್ನ ಕಷ್ಟ ಹೇಳಿಕೊಂಡಿದ್ದಾನೆ. ನಿಮ್ಮ ಸಹವಾಸ ಮಾಡಿ ಊರು ಬಿಟ್ಟು ಬರಬೇಕಾಯಿತು. ಫ್ರೆಂಡ್ಸ್ ಎಲ್ಲಾ ದೂರವಾದ್ರು. ಈಗ ನೋಡಿದ್ರೆ ಇಲ್ಲಿ ಮತ್ತೆ ಇದ್ದೀರಾ. ಅಮ್ಮ ನೋಡಿದ್ರೆ ಇಲ್ಲಿಂದಲೂ ಜಾಗ ಖಾಲಿ ಮಾಡ್ತಾಳೆ ಎಂದಿದ್ದಾನೆ.
67
ಗೌತಮ್ ಮೊಗದಲ್ಲಿ ಖುಷಿ
ಆದರೂ ನಿಮ್ಮನ್ನು ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಾಗ ಗೌತಮ್ ಮುಖದಲ್ಲಿ ನಗು ಅರಳಿದೆ. ಆಕಾಶ್, ನನಗೆ ನೀವೂ ಬೇಕು, ಅಮ್ಮನೂ ಬೇಕು. ಅದಕ್ಕಾಗಿ ಇಬ್ಬರೂ ನಮ್ಮ ಪಾಡಿಗೆ ನಾವು ಇದ್ದು ಬಿಡೋಣ. ಮಾತನಾಡುವುದು ಬೇಡ ಎಂದು ಹೇಳಿ ಹೊರಟು ಹೋಗಿದ್ದಾನೆ. ಮಗ ಹೋಗಿದ್ದು ನೋಡಿ ಗೌತಮ್ಗೆ ಬೇಸರವಾಗಿದೆ.
77
ಲಕ್ಕಿ ಗರ್ಲ್ ಎಂಟ್ರಿ
ಒಟ್ಟಿನಲ್ಲಿ ಲಕ್ಕಿ ಗರ್ಲ್ ಎಂಟ್ರಿ ಕೊಟ್ಟ ಬೆನ್ನಲ್ಲೇ ಗೌತಮ್ಗೆ ಭೂಮಿಕಾ, ಮಗ ಎಲ್ಲಾ ಸಿಕ್ಕಿದ್ದಾರೆ. ಮಲ್ಲಿಯ ಪ್ಲ್ಯಾನ್ನಿಂದ ಭೂಮಿಕಾ ಮತ್ತು ಗೌತಮ್ ಒಂದಾಗೊದೊಂದೇ ಬಾಕಿ ಇರೋದು. ಆದರೆ ಗೌತಮ್ ಮತ್ತು ಆಕಾಶ್ ಕ್ಲೋಸ್ ಆಗ್ತಿರೋದನ್ನು ನೋಡಿ ಭೂಮಿಕಾ ಮತ್ತೆ ಎಲ್ಲಿ ಮನೆ ಖಾಲಿ ಮಾಡ್ತಾಳೋ ಎನ್ನೋ ಚಿಂತೆ ವೀಕ್ಷಕರಿಗೆ.