‘ಶ್ರೀ ಗಂಧದ ಗುಡಿ’ ಮುತ್ತು ಬಾಳಿಗೆ ನಾಯಕಿಯಾಗಿ ಎಂಟ್ರಿಕೊಟ್ಟ 'Miss Uttar Kannada' ದೃಷ್ಟಿ ನಾಯಕ್

Published : Mar 30, 2026, 04:52 PM IST

Drasti Naik: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಂಧದ ಗುಡಿ’ ಧಾರಾವಾಹಿಯ ಎರಡನೇ ನಾಯಕಿಯಾಗಿ, ಮುತ್ತು ಬಾಳಿಗೆ ಒಡತಿಯಾಗಿ ಹೊಸ ನಟಿ ಎಂಟ್ರಿ ಕೊಡುತ್ತಿದ್ದು, ಈಕೆ ಮಿಸ್ ಉತ್ತರ ಕನ್ನಡ 2026 ಕಿರೀಟ ಧರಿಸಿದ ಸುಂದರಿ ಕೂಡ ಹೌದು ಯಾರೀಕೆ ನೋಡೋಣ. 

PREV
16
ಶ್ರೀಗಂಧದ ಗುಡಿ ಧಾರಾವಾಹಿ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಲ್ಕು ಜನ ಅಣ್ಣ ತಮ್ಮಂದಿರ ಕಥೆಯನ್ನು ಹೊಂದಿರುವ ಧಾರಾವಾಹಿ ‘ಶ್ರೀಗಂಧದಗುಡಿ’. ಈ ಧಾರಾವಾಹಿಯಲ್ಲಿ ಮುತ್ತು ಮತ್ತು ಭಾರತಿ ಮದುವೆ ಆಗುತ್ತೆ ಎಂದೇ ಎಲ್ಲರೂ ತಿಳಿದಿದ್ದರು, ಆದರೆ ಅದು ಆಗಲಿಲ್ಲ. ಇದೀಗ ಮುತ್ತುರಾಜ್ ಬಾಳಿಗೆ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾರೆ ಯಾರೀಕೆ ಇಲ್ಲಿದೆ ಮಾಹಿತಿ.

26
ದೃಷ್ಟಿ ನಾಯಕ್

ಹೌದು, ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ. ಈಗಾಗಲೇ ಮುತ್ತು ಜೊತೆ ಒಂದು ರೊಮ್ಯಾಂಟಿ ಇಂಟರ್ಯಾಕ್ಷನ್ ಕೂಡ ಆಗಿದೆ. ಅಣ್ಣನ ಜೊತೆ ಕೆಲಸಕ್ಕಾಗಿ ಊರಿಗೆ ಬಂದ ಉತ್ತರ ಭಾರತದ, ಕನ್ನಡ ಬಾರದ ಹಿಂದಿ ಹುಡುಗಿ ಮಹಿಮಾ ಆಗಿ ದೃಷ್ಟಿ ನಾಯಕ್ ನಟಿಸುತ್ತಿದ್ದಾರೆ.

36
ಯಾರೀ ದೃಷ್ಟಿ ನಾಯಕ್

ದೃಷ್ಟಿ ನಾಯಕ್ ಗೆ ಇದು ಮೊದಲ ಸೀರಿಯಲ್. ಆದರೆ ಈಗಾಗಲೇ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ ಈ ಸುಂದರಿ. ಈಗಾಗಲೇ ಮಿಸ್ ಶಿರಸಿ 2025 ರನ್ನರ್ ಅಪ್ ಹಾಗೂ ಮಿಸ್ ಉತ್ತರ ಕನ್ನಡ 2026 ಕಿರೀಟವನ್ನ ಈಕೆ ಮುಡಿಗೇರಿಸಿಕೊಂಡಿದ್ದಾರೆ.

46
ಸಿನಿಮಾದಲ್ಲೂ ನಟಿಸಿದ್ದಾರೆ ದೃಷ್ಟಿ

ಅಷ್ಟೇ ಅಲ್ಲ ಈಗಾಗಲೇ ಸಿನಿಮಾದಲ್ಲಿ ದೃಷ್ಟಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ‘ದೇವಸಸ್ಯ’ ಎನ್ನುವ ಸಿನಿಮಾದಲ್ಲಿ, ನೆನಪಿರಲಿ ಪ್ರೇಮ್ ಅಭಿನಯದ ‘ಸ್ಪಾರ್ಕ್’ ಸಿನಿಮಾದಲ್ಲಿ ನಟಿ ಭಾವನಾ ಅವರ ಬಾಲ್ಯದ ಪಾತ್ರವನ್ನು ದೃಷ್ಟಿ ನಟಿಸಿದ್ದರು. ಇದು ನೆಗೆಟಿವ್ ಪಾತ್ರವಾಗಿತ್ತು ಎಂದು ದೃಷ್ಟಿ ತಿಳಿಸಿದ್ದಾರೆ.

56
ಸ್ಪಾರ್ಕ್ ಸಿನಿಮಾ ಪೋಸ್ಟರ್

‘ಸ್ಪಾರ್ಕ್’ ಸಿನಿಮಾದಲ್ಲಿ ದೃಷ್ಟಿ ವರ್ಷಗಳ ಹಿಂದೆ ನಟಿಸಿದ್ದು, ಸಿನಿಮಾ ಶೂಟಿಂಗ್, ಭಾವನಾ, ಉಪೇಂದ್ರ, ಪ್ರಿಯಾಂಕಾ, ನಿರಂಜನ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ ದೃಷ್ಟಿ. ಆ ಮೂಲಕ ತಾವು ಸಿನಿಮಾ ರಂಗದೊಂದಿಗೆ ಕನೆಕ್ಟ್ ಆಗಿರುವುದಾಗಿ ತೋರಿಸಿದ್ದಾರೆ.

66
ಸೀರಿಯಲ್ ಕುರಿತು ನಟಿ ಏನಂದ್ರು?

ತಮ್ಮ ಹೊಸ ಪಾತ್ರದ ಬಗ್ಗೆ ಸಂಭ್ರಮ ಹಂಚಿಕೊಂಡಿರುವ ದೃಷ್ಟಿ, ಸೋಶಿಯಲ್ ಮೀಡಿಯಾದಲ್ಲಿ ‘ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೃದಯಪೂರ್ವಕವಾಗಿ ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಈ ಪ್ರಯಾಣದಲ್ಲಿ ನೀವು ನೀಡಿದ ಪ್ರೋತ್ಸಾಹ ನನಗೆ ಬಹಳ ಮಹತ್ವದ್ದಾಗಿದೆ. ‘ಶ್ರೀ ಗಂಧದಗುಡಿ’ಯ ಮಹಿಮಾ ಪಾತ್ರಕ್ಕೂ ಇದೇ ರೀತಿಯ ಪ್ರೀತಿ ಮತ್ತು ಬೆಂಬಲ ಸಿಗಲಿ ಎಂದು ಆಶಿಸುತ್ತೇನೆ. ಇಂದು ನನ್ನ ಮೇಲೆ ನನಗೆ ತುಂಬಾ ಹೆಮ್ಮೆ ಇದೆ. ಈ ಧಾರಾಬಾಹಿಯನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 8:30ಕ್ಕೆ ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories