ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸಂಜನಾ ಬುರ್ಲಿ ಅವರು ಮಾರ್ಚ್ 25ನೇ ತಾರೀಖಿನಂದು ಸಮರ್ಥ್ ಚೆನ್ನಗಿರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 'ಪುಟ್ಟಕ್ಕನ ಮಕ್ಕಳು' ಹಾಗೂ 'ಶ್ರೀಗಂಧದಗುಡಿ' ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಂಜನಾ, ಈಗ ಹೊಸ ಜೀವನದ ಆರಂಭ ಮಾಡಿದ್ದಾರೆ.
27
ನಾವು ಎಂಬ ಸತ್ಯ
ಇದೀಗ ಸಂಜನಾ ಬುರ್ಲಿ ಅವರು ತಮ್ಮ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಬ್ಯೂಟಿಫುಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಜೊತೆಗೆ 'ಅಲಂಕಾರ ಮಾಸುತ್ತದೆ, ಆಚರಣೆಗಳು ಮಾಯವಾಗುತ್ತವೆ. ಉಳಿದಿರುವುದು ನಾವು ಎಂಬ ಸತ್ಯ' ಎಂಬ ವಿಶೇಷವಾದ ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಸಂಜನಾ ಸೀರೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
37
ಓದುವಾಗಲೇ ನಟನೆ ಆಫರ್
ಸಂಜನಾ ಬುರ್ಲಿ ಅವರ ಕೈ ಹಿಡಿದಿರುವ ಸಮರ್ಥ್ ಚೆನ್ನಗಿರಿ ಅವರು ವೃತ್ತಿಯಲ್ಲಿ ವೈದ್ಯರು. ಸಂಜನಾ ಅವರು ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದವರು. ಸಂಜನಾ ಅವರು ಇನ್ನೂ ಡಿಗ್ರಿ ಓದುವಾಗಲೇ ನಟನೆ ಆಫರ್ ಬಂದಿತ್ತು.
ಸಂಜನಾ ಬುರ್ಲಿ ಮೊದಲ ಧಾರಾವಾಹಿ ‘ಲಗ್ನಪತ್ರಿಕೆ’ ನಂತರ ‘ಪುಟ್ಟಕ್ಕನ ಮಕ್ಕಳು’ ಇದಾದ ಮೇಲೆ ಸಿಕ್ಕ ಆಫರ್ ‘ಶ್ರೀಗಂಧದ ಗುಡಿ’.ಈ ಜೋಡಿ ಮದುವೆ ಅದ್ದೂರಿಯಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದಿತ್ತು. ಮಾರ್ಚ್ 24ರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.
57
ಬಹುಕಾಲದ ಗೆಳೆಯ
ಸಮರ್ಥ್ ಅವರು ಸಂಜನಾ ಅವರ ಬಹುಕಾಲದ ಗೆಳೆಯ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಂಜನಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಸಂಜನಾ ಕಂಗೊಳಿಸುತ್ತಿದ್ದರೆ, ಸಮರ್ಥ್ ಕೂಡ ಅಷ್ಟೇ ಮಿಂಚಿದ್ದರು.
67
ಕಿರುತೆರೆಗೆ ರೀಎಂಟ್ರಿ
ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಎಂಬ ಐಎಎಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಓದಿನ ಕಾರಣ ನೀಡಿ ಅವರು ಈ ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು. ನಂತರ ಕಲರ್ಸ್ ಕನ್ನಡದ 'ಶ್ರೀಗಂಧದಗುಡಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ರೀಎಂಟ್ರಿ ಕೊಟ್ಟರು.
77
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ
ಇನ್ನು ಸಂಜನಾ ಅವರ ಪತಿ ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.