ಹುಚ್ಚ ವೆಂಕಟ್​.. ಈ ಹೆಸರನ್ನ ಕಿಚ್ಚನ ಬಿಗ್​​ಬಾಸ್​ ಮನೆ ಎಂದೂ ಮರೆಯೋದಿಲ್ಲ. ಅತಿ ಹೆಚ್ಚು ಟಿಆರ್​ಪಿ ತಂದುಕೊಟ್ಟ ಸೀಸನ್ ಅಂದ್ರೆ ಅದು ಹುಚ್ಚ ವೆಂಕಟ್​ ಇದ್ದ ಬಿಗ್​ಬಾಸ್​​​ ಸೀಸನ್-3, ವ್ಯಕ್ತಿತ್ವದ ಆಟ ಆಡೋಕೆ ಒಂಟಿ ಮನೆಗೆ ಹೋಗಿದ್ದ ಹುಚ್ಚ ವೆಂಕಟ್​ ಹಿಂದೆ ಮುಂದೆ ಯೋಚನೆ ಮಾಡದೇ ಹೊಡೆದಾಡಿದ್ರು..

ಎಂದೂ ಮರೆಯದ ಆ ಕಾಂಟ್ರವರ್ಸಿಗಳು! 

ಬಿಗ್​ಬಾಸ್​ ಅನ್ನೋದು ಕಾಂಟ್ರವರ್ಸಿಗಳ ಹಬ್.. ಸಾಕಷ್ಟು ಜನ ಆಗಿದ್ದು ಆಗ್ಲಿ ಒಂಟಿ ಮನೆಗೆ ಒಮ್ಮೆ ಆದ್ರು ಹೋಗೋಣ ಅಂತ ಆಸೆ ಪಟ್ರೆ, ಇನ್ ಕೆಲವರು ಈ ಬಿಗ್​ ಬಾಸ್ ಸಹವಾಸವೇ ಬೇಡ ಅಂತ ಹೇಳ್ತಾರೆ. ಯಾಕಂದ್ರೆ ಕನ್ನಡದ ಬಿಗ್​​​ಬಾಸ್​ ಶೋನಲ್ಲಿ ಅಂತಹ ದೊಡ್ಡ ದೊಡ್ಡ ವಿವಾದಗಳು ನಡೆದು ಹೋಗಿದೆ. ಹಾಗಾದ್ರೆ ಎಂದೂ ಮರೆಯದ ಆ ಕಾಂಟ್ರವರ್ಸಿಗಳನ್ನ ನೋಡ್ಬಿಡೋಣ ಬನ್ನಿ...

ಬಿಗ್​ಬಾಸ್​... ಫುಲ್​ ಆಫ್​ ಎಂಟರ್​ಟೈನ್ಮೆಂಟ್.. ಮೋಜು ಮಸ್ತಿಯ ರಿಯಾಲಿಟಿ ಶೋ.. ಕಿತ್ತಾಟ ಕಿರಿಚಾಟದ ಆವಾಸ ಸ್ಥಳ. ವ್ಯಕ್ತಿತ್ವದ ಅನಾವರಣ ಮಾಡೋ ಈ ಮನೆಯಲ್ಲಿ ಮನೊರಂಜನೆ ಹೇಗೆ ಸಿಗುತ್ತೋ ಅಷ್ಟೇ ವಿವಾದಗಳ ಬೆಂಕಿಯಾಡುತ್ತೆ. ಕಿಚ್ಚನ ಒಂಟಿ ಮನೆಯಲ್ಲಿ ಸಿಗೋ ರಾದ್ಧಾಂತಗಳು ಒಂದೆರಡಲ್ಲ. ಹೀಗಾಗೆ ಈ ನಿಗೂಢ ಮನೆಯನ್ನ ಕಾಂಟ್ರವರ್ಸಿಗಳ ಹಬ್ ಅಂತ ಹೇಳೋದು...

(ಬೇರೆ ಬೇರೆ ಬಿಗ್ ಬಾಸ್ ಮನೆಯ ವಿಡಿಯೋಗಳನ್ನ ಫ್ಲೋ ಬಿಡಿ..)

ಹುಚ್ಚ ವೆಂಕಟ್​.. ಈ ಹೆಸರನ್ನ ಕಿಚ್ಚನ ಬಿಗ್​​ಬಾಸ್​ ಮನೆ ಎಂದೂ ಮರೆಯೋದಿಲ್ಲ. ಅತಿ ಹೆಚ್ಚು ಟಿಆರ್​ಪಿ ತಂದುಕೊಟ್ಟ ಸೀಸನ್ ಅಂದ್ರೆ ಅದು ಹುಚ್ಚ ವೆಂಕಟ್​ ಇದ್ದ ಬಿಗ್​ಬಾಸ್​​​ ಸೀಸನ್-3, ವ್ಯಕ್ತಿತ್ವದ ಆಟ ಆಡೋಕೆ ಒಂಟಿ ಮನೆಗೆ ಹೋಗಿದ್ದ ಹುಚ್ಚ ವೆಂಕಟ್​ ಹಿಂದೆ ಮುಂದೆ ಯೋಚನೆ ಮಾಡದೇ ಹೊಡೆದಾಡಿದ್ರು..

ಕನ್ನಡ ಬಿಗ್​ಬಾಸ್ ಇತಿಹಾಸದಲ್ಲಿ ಹುಚ್ಚ ವೆಂಕಟ್​ ಮಾಡಿದ ಅವಾಂತರ ಮರೆಯಲು ಸಾಧ್ಯವಿಲ್ಲ. ಮಾತಿನಲ್ಲಿ ಮಲ್ಲಯುದ್ಧ ಮಾಡಬೇಕಿದ್ದ ಈ ಫೈರಿಂಗ್ ಸ್ಟಾರ್ ಅದನ್ನ ಮರೆತು ಸಹ ಸ್ಪರ್ಧಿ ರವಿ ಮೂರೂರ್​ ಮೇಲೆ ಕೈ ಎತ್ತಿದ್ದ. ರವಿ ಮೂರೂರು ಮುಖಕ್ಕೆ ಹುಚ್ಚ ವೆಂಕಟ್ ಕೊಟ್ಟ ಪಂಚ್​​​​ನಿಂದ ರಕ್ತ ಸುರಿದಿತ್ತು. ಈ ದೊಡ್ಡ ಸೀನ್ ಆಗಿದ್ದು ಸ್ಪರ್ಧಿಗಳನ್ನ ತಿದ್ದಿ ತೀಡೋ ಕಿಚ್ಚ ಸುದೀಪ್​ ಎದುರೇ. ಕೊನೆಗೆ ಹುಚ್ಚ ವೆಂಕಟ್​​ ರನ್ನ ಒಂಟಿ ಮನೆಯಿಂದ ಓಡಿಸಿದ್ರು..

ಹುಚ್ಚ ವೆಂಕಟ್​​ರನ್ನ ಬಿಗ್​​​ಬಾಸ್ ವಿಷಯಕ್ಕೆ ಮಾತಾಡಿಸಿದ್ರೆ ನಾನೇ ಬಿಗ್​ಬಾಸ್ ಅಂತಾರೆ. ಅದು ನಿಜ.. ಈ ಬಿಗ್​ಬಾಸ್ ಮನೆ ವಿವಾದಗಳ ವಿಷಯದಲ್ಲಿ ಫೈರಿಂಗ್ ಸ್ಟಾರೇ ಬಾಸು​. ಸೀಸನ್​​ ಮೂರರಲ್ಲಿ ರವಿ ಮುರೂರ್​ಗೆ ಹೊಡೆದು ಮನೆಯಿಂದ ಆಚೆ ಬಂದಿದ್ದ ಈ ಕಿಲಾಡಿ, ಸೀಸನ್​ ನಾಲ್ಕಕ್ಕೆ ಅಥಿತಿಯಾಗಿ ಬಂದು ಪ್ರಥಮ್​​ಗೆ ತಿಥಿ ಮಾಡೋಕೆ ಮುಂದಾಗಿದ್ದ. ಒಳ್ಳೆ ಹುಡುಗ ಅಂತ ಹೇಳಿಕೊಂಡಿದ್ದ ಪ್ರಥಮ್​ ಮೇಲೆ ಫೈಯರ್ ಆಗಿದ್ದ ಹುಚ್ಚ ವೆಂಕಟ್​​ ಪ್ರಥಮ್​​​ಗೂ ಥಳಿಸಿದ್ದ.. ಕೊನೆಗೆ ತಕ್ಷಣ ಹುಚ್ಚ ವೆಂಕಟ್ ನನ್ನ ಮನೆಯಿಂದ ಹೊಸ ದಬ್ಬಲಾಗಿತ್ತು.

ಬಿಗ್​​ಬಾಸ್​ ಮನೆ ಹೊಡೆದಾಟದ ಮನೆ ಮಾಡಿದ್ದೇ ಹುಚ್ಚ ವೆಂಕಟ್.. ಈ ಆಚರಣೆಯನ್ನ ಮುಂದುವರೆಸಿದ್ದು ಕಿರಿಕ್​ ಪಾರ್ಟಿ ಸಿನಿಮಾ ನಟಿ ಸಂಯುಕ್ತಾ ಹೆಗ್ಡೆ. ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​-5ಕ್ಕೆ ಬಂದಿದ್ದ ಸಂಯುಕ್ತಾ, ಸಹ ಸ್ಪರ್ಧಿ ಸಮೀರ್​​​ ಆಚಾರ್ಯ ಮೇಲೆ ಹಲ್ಲೆ ಮಾಡಿದ್ರು. ಸಮೀರ್​​ ಕೆನ್ನೆಗೆ ಹೊಡೆದಿದ್ದಕ್ಕೆ ಸಂಯುಕ್ತಾ ಹೆಗ್ಡೆಗೆ ಬಿಗ್​​​ಬಾಸ್ ಮನೆಯಿಂದ ಗೇಟ್​ ಪಾಸ್​ ಕೊಡಲಾಗಿತ್ತು..

ಮಹಿಳಾ ಸ್ಪರ್ಧಿಗಳ ಬಗ್ಗೆ ಅಶ್ಲೀಲ ಪದಗಳ ಬಳಕೆ ಮಾಡಿದ್ದಕ್ಕೆ ಬಿಗ್​ಬಾಸ್​ ಲಾಯರ್​ ಜಗದೀಶ್​​ಗೆ ಮಂಗಳಾರತಿ ಮಾಡಿತ್ತು. ಕೊನೆಗೆ ಈ ಜಗಳಗಂಟ ಜಗದೀಶ್​​ ಮನೆಯಲ್ಲಿದ್ದ ಸಹ ಸ್ಪರ್ಧಿ ರಂಜಿತ್​ ಜೊತೆ ಕೈ ಮಿಲಾಯಿಸಿದ್ರು. ತಕ್ಷಣ ಎಂಟ್ರಿ ಕೊಟ್ಟ ಬಿಗ್​ಬಾಸ್​ ಜಗದೀಶ್​​​ಗೆ ಉಗಿದು ಮನೆಯಿಂದ ಹೊರ ಹಾಕಿತ್ತು. ಅಷ್ಟೆ ಅಲ್ಲ ಗಲಾಟೆಯಲ್ಲಿ ಭಾಗಿ ಆಗಿದ್ದಕ್ಕೆ ರಂಜಿತ್​ಗೂ ಗೇಟ್​​ಪಾಸ್ ಕೊಟ್ಟಿತ್ತು.

ಹಳ್ಳಿಕಾರ್‌ ಹಸುಗಳ ರಕ್ಷಣೆ ಮಾಡಿ ಗುರುತಿಸಿಕೊಂಡಿದ್ದ ಸಂತೋಷ್‌!

ಹಳ್ಳಿಕಾರ್‌ ಹಸುಗಳ ರಕ್ಷಣೆ ಮಾಡಿ ಗುರುತಿಸಿಕೊಂಡಿದ್ದ ಸಂತೋಷ್‌ 10ನೇ ಅವೃತ್ತಿಯ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿದ್ರು. ಆದ್ರೆ ಕುತ್ತಿಗೆಯಲ್ಲಿ ಸಂತೋಷ್‌ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದಕ್ಕೆ ಬಿಗ್ ಬಾಸ್ ಮನೆಯಿಂದಲೇ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್‌ ರನ್ನ ಬಂಧಿಸಿದ್ರು.

ಚೈತ್ರಾ ಕುಂದಾಪುರ ಒಂಟಿ ಮನೆಯ ಚಂಡಿ!

ಬಿಗ್​ಬಾಸ್ ಸೀಸನ್​ 11ರಲ್ಲಿ ಚಟ ಪಟ ಅಂತ ಹಾರಾಡ್ಕೊಂಡು ಎಲ್ಲರ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಒಂಟಿ ಮನೆಯ ಚಂಡಿಯಂತೆ ಕಾಣಿಸುತ್ತಿದ್ರು. ಆದ್ರೆ 5 ಕೋಟಿ ವಂಚನೆ ಪ್ರಕರಣ ಚೈತ್ರಾ ಕುಂದಾಪುರಗೆ ಕಂಟಕವಾಗಿತ್ತು. ವಾರೆಂಟ್ ಜಾರಿಯಾಗಿದ್ದಕ್ಕೆ ಬಿಗ್​ಬಾಸ್ ಮನೆಯಿಂದ ಆಚೆ ಬಂದಿದ್ದ ಚೈತ್ರಾ ಕೋರ್ಟ್​ ಮುಂದೆ ಹಾಜರಾಗಿ ಮತ್ತೆ ಮನೆ ಒಳಗೆ ಹೋಗಿದ್ರು.

ಈಗ ಬಿಗ್​ಬಾಸ್ ಸೀಸನ್​ 12ರಲ್ಲಿ ಒಂಟಿ ಮನೆಗೆ ಮನೆಯೇ ಕಾಲಿ ಆದ ಘಟನೆ ನಡೆದಿದೆ. ಇನೋವೇಟಿವಿ ಫಿಲ್ಮ್ ಸಿಟಿಗೆ ಬೀಗ ಜಡಿದಿದ್ದಕ್ಕೆ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಹೊರ ಬಂದು ಮತ್ತೆ ಮನೆ ಒಳಗೆ ಹೋಗಿದ್ದಾರೆ. ಹೀಗಾಗಿ ಕನ್ನಡ ಬಿಗ್​ಬಾಸ್ ಮನೆ ವಿವಾದದ ಗೂಡು ಅನ್ನೋದ್ರಲ್ಲಿ ನೋ ಡೌಟ್..