ಕನ್ನಡ ಬಿಗ್ ಬಾಸ್ ನ ಫೇವರಿಟ್ ಜೋಡಿಗಳು ಅಂದ್ರೆ ಅದು ದಿವ್ಯಾ ಉರುಡುಗ ಮತ್ತು ಅರವಿಂದ ಕೆಪಿ. ಇದೀಗ ಅರವಿಂದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಿವ್ಯಾ ಇಬ್ಬರ ಮುದ್ದಾದ ಡೂಡಲ್ ಫೋಟೊ ಶೇರ್ ಮಾಡಿ ತಮ್ಮ ಪ್ರೀತಿಯ ಅವಿಗೆ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಬಿಗ್ ಬಾಸ್ ಸೀಸನ್ 8ರ ಮೂಲಕ ಜನಪ್ರಿಯತೆ ಪಡೆದ ನಟಿ ದಿವ್ಯಾ ಉರುಡುಗ. ಈಗ ಎಲ್ಲೆಡೆ ಅರವಿಂದ್- ದಿವ್ಯಾ ಜೋಡಿಯಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
27
ಅರವಿಂದ್ ಕೆ.ಪಿ ಬರ್ತ್ ಡೇ
ಬಿಗ್ ಬಾಸ್ ಸೀಸನ್ 8ಮೂಲಕ ಕರ್ನಾಟಕದ ಮನೆಮನೆಗೂ ಪರಿಚಿತರಾದ ಇಂಟರ್’ನ್ಯಾಷನಲ್ ಲೆವೆಲ್ ಬೈಕರ್ ಅರವಿಂದ್ ಕೆ.ಪಿ. ಇವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ದಿವ್ಯಾ ತಮ್ಮ ಪ್ರೀತಿಯ ಅವಿಗೆ ಸ್ಪೆಷಲ್ ವಿಶಸ್ ತಿಳಿಸಿದ್ದಾರೆ.
37
ಅರ್ವಿಯಾ ಜೋಡಿ`
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಬಿಗ್ ಬಾಸ್ ಮನೆಯಲ್ಲಿ ಒಂದಾಗಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದು, ಈ ಜೋಡಿಯ ಹೆಸರಲ್ಲಿ ಸಾಕಷ್ಟು ಅರ್ವಿಯಾ ಫ್ಯಾನ್ಸ್ ಪೇಜ್ ಕೂಡ ಸೃಷ್ಟಿಯಾಗಿದೆ. ಈ ಮುದ್ದಾದ ಜೋಡಿಗೆ ಸಾಕಷ್ಟು ಅಭಿಮಾನಿಗಳು ಸಹ ಇದ್ದಾರೆ.
ಇದೀಗ ಅರವಿಂದ್ ಕೆಪಿ ಹುಟ್ಟುಹಬ್ಬಕ್ಕೆ ದಿವ್ಯಾ ಉರುಡುಗ, ಇಬ್ಬರ ಮುದ್ದಾದ ಡೂಡಲ್ ಫೋಟೊಗಳನ್ನು ಹಂಚಿಕೊಂಡು, ತಮ್ಮ ಪ್ರೀತಿಯ ಅವಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
57
ಏನ್ ಹೇಳಿದು ದಿವ್ಯಾ?
ಅರವಿಂದ್ ಕೆಪಿ! ಹುಟ್ಟಿದೇ ರೇಸ್ ಗಾಗಿ, ಸ್ಫೂರ್ತಿ ನೀಡಲು ಜನಿಸಿದವರು,. Have a birthday as thrilling as full throttle straight stretch! your grit fuels a generation! keep inspiring & conquering. ಜನ್ಮದಿನದ ಶುಭಾಶಯಗಳು AVI ಎಂದು ಬರೆದುಕೊಂಡಿದ್ದಾರೆ.
67
ಜೋಡಿಯನ್ನು ಮೆಚ್ಚಿಕೊಂಡ ಜನ
ದಿವ್ಯಾ ಉರುಡುಗ ಹಂಚಿಕೊಂಡಿರುವ ಫೋಟೊಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಬ್ಬರ ಜೋಡಿ ಯಾವಾಗಲೂ ಹೀಗೆ ಇರಲಿ. ಯಾರ ದೃಷ್ಟಿಯೂ ಬೀಳದಿರಲಿ. ನಿಮ್ಮ ಪ್ರೀತಿ ಶಾಶ್ವತವಾಗಿರಲಿ ಎಂದು ಪ್ಯಾನ್ಸ್ ಶುಭ ಹಾರೈಸಿದ್ದಾರೆ.
77
ಮದುವೆ ಯಾವಾಗ?
ಇನ್ನು ಅರವಿಂದ್ ಮತ್ತು ದಿವ್ಯಾ ಯಾವುದೇ ಫೋಟೊಗಳನ್ನು ಹಂಚಿಕೊಂಡರೂ ಸಹ ಜನ ಕೇಳೋದು ಒಂದೇ ಯಾವಾಗ ಮದುವೆ ಎಂದು? ಈವಾಗ್ಲೂ ಸಹ ಅದನ್ನೇ ಕೇಳ್ತಿದ್ದಾರೆ. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಗಂದ-ಹೆಂಡತಿಯಾಗಬೇಕು ಅನ್ನೋದನ್ನು ನೋಡೋದಕ್ಕೆ ಜನ ಕಾಯುತ್ತಿದ್ದಾರೆ.