'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಹಿತಾ ಪಾತ್ರಧಾರಿ ಮಹಿತಾ, ತನ್ನ ಅದ್ಭುತ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾಳೆ. ತಾಯಿಯನ್ನು ಕಳೆದುಕೊಂಡ ತಬ್ಬಲಿ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ, ನಟನೆಯ ಜೊತೆಗೆ ಗಾಯಕಿಯಾಗಿಯೂ ಗಮನ ಸೆಳೆದಿದ್ದಾಳೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಬಾಲಕಿ ಎಂದರೆ ಹಿತಾ. ತನ್ನ ಅದ್ಭುತ ನಟನೆಯಿಂದ ಭೇಷ್ ಎನ್ನಿಸಿಕೊಂಡಿದ್ದಾಳೆ ಈ ಪುಟಾಣಿ. ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಅದ್ಭುತ ನಟನೆಯಿಂದ ಮೋಡಿ ಮಾಡ್ತಿರೋ ಬಾಲಕಿ ಅಷ್ಟೇ ಅದ್ಭುತ ಗಾಯಕಿ ಕೂಡ. ಅಂದಹಾಗೆ ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ.
27
ಹುಟ್ಟಿನಿಂದ ಬಂದ ಟ್ಯಾಲೆಂಟ್
ಅಷ್ಟಕ್ಕೂ, ಕೆಲವರಿಗೆ ಹಾಗೆನೇ. ಟ್ಯಾಲೆಂಟ್ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು.
37
ವಿಭಿನ್ನ ವಿಡಿಯೋ ಶೇರ್
ಚಿಕ್ಕ ವಯಸ್ಸಿನಿಂದಲೇ ಅವಳ ಟ್ಯಾಲೆಂಟ್ ನೋಡಬಹುದಾದ ವಿಡಿಯೋ ಒಂದನ್ನು ಖುದ್ದು ಪುಟಾಣಿಯೇ ಶೇರ್ ಮಾಡಿಕೊಂಡಿದ್ದಾಳೆ. ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಫ್ಯಾನ್ಸ್ ಗಳಿಸಿರೋ ಮಹಿತಾ, ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ.
ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವಾದರೂ, ಕೆಲವೊಮ್ಮೆ ಯಾವ ಹಿನ್ನೆಲೆಯೂ ಇಲ್ಲದ ಪುಟಾಣಿ ಮಕ್ಕಳು ನಡೆದುಕೊಳ್ಳುವ ರೀತಿ ಅಚ್ಚರಿ ಎನ್ನಿಸುವುದು ಉಂಟು. ಅಂಥವಳಲ್ಲಿ ಒಬ್ಬಳು ಈ ಪುಟಾಣಿ ಹಿತಾ. ಅಂದಹಾಗೆ ಈಕೆಯ ರಿಯಲ್ ಹೆಸರು ಮಹಿತಾ.
57
ಮನಸೋತ ವೀಕ್ಷಕರು
ನಾನಿನ್ನ ಬಿಡಲಾರೆ ಸೀರಿಯಲ್ ಸೀರಿಯಲ್ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ.
67
ತಬ್ಬಲಿ ಮಗು
ಇದರಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಮಗು. ತಾಯಿಯ ಪ್ರೀತಿಗಾಗಿ ಹಂಬಲಿಸುವ, ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ತಪ್ಪು ತಿಳಿದು ಆತನನ್ನು ದ್ವೇಷಿಸುವ ಕ್ಯಾರೆಕ್ಟರ್ ಈಕೆಯದ್ದು.
77
ನಟನೆಯಿಂದ ಮೋಡಿ
ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್ ಮಾಡು, ಪ್ಲೀಸ್ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿರುವುದು ಕಮೆಂಟ್ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು.