Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!

Published : Dec 08, 2025, 10:59 PM IST

ಕಲರ್ಸ್ ಕನ್ನಡದ ಬಿಗ್ ಬಾಸ್ 12 ರಿಂದ ಹೊರಬಂದಿರುವ ನಟ ಅಭಿಷೇಕ್ ಶ್ರೀಕಾಂತ್, ತಮಗೆ ಸಿಕ್ಕ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದರ ಬಗ್ಗೆ ನಟ ಹೇಳಿದ್ದೇನು? ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದ್ದೇಕೆ? 

PREV
17
ಹಲವು ಸೀರಿಯಲ್​ಗಳಲ್ಲಿ ನಟನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಲಕ್ಷಣ ಧಾರಾವಾಹಿಯಲ್ಲಿ ಮೌರ್ಯ ಪಾತ್ರದ ಮೂಲಕ ಮನೆಮಾತಾಗಿರೋ ನಟ ಅಭಿಷೇಕ್​ ಶ್ರೀಕಾಂತ್​ ಕ್ಯಾಪ್ಟನ್​ ಆಗಿರುವಾಗಲೇ ಬಿಗ್​ಬಾಸ್​ (Bigg Boss 12) ಮನೆಯಿಂದ ಹೊರಕ್ಕೆ ಬಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.

27
ಸಿನಿಮಾದಲ್ಲಿಯೂ ಪಾತ್ರ

ವಧು , ಶಾಂತಂ ಪಾಪಂ , ಯಜಮಾನಿ , ಲಕ್ಷಣ , ನನ್ನ ದೇವರು , ವಧು ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾದವರು ಅಭಿಷೇಕ್ ಶ್ರೀಕಾಂತ್. ಮಾತ್ರವಲ್ಲದೇ ಪರಮೇಶ್ವರ್ ಗುಂಡ್ಕಲ್ ಅವರ ಕೋಟಿ ಸಿನಿಮಾದಲ್ಲೂ ಅಭಿಷೇಕ್ ಶ್ರೀಕಾಂತ್ ನಟಿಸಿದ್ದಾರೆ.

37
ಸಹಜವಾದ ಸೆಲೆಬ್ರಿಟಿಗಳು

ಇದೀಗ ಅವರು ಬಿಗ್​ಬಾಸ್​ 12 ಮನೆಯಿಂದ ಎರಡೂವರೆ ತಿಂಗಳ ಬಳಿಕ ಹೊರಕ್ಕೆ ಬಂದಿದ್ದಾರೆ. ಸಹಜವಾಗಿ ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬಂದ ಮೇಲೆ ಮುಂದಿನ ಸೀಸನ್​ ಬರುವವರೆಗೂ ಸೆಲೆಬ್ರಿಟಿಗಳಾಗಿಯೇ ಇರುತ್ತಾರೆ. ಅವರಿಗೆ ಎಲ್ಲಾ ಕಡೆಗಳಲ್ಲಿಯೂ ಡಿಮಾಂಡ್​ ಹೆಚ್ಚಿರುತ್ತದೆ.

47
ಕೇಳುವ ಪ್ರಶ್ನೆ ಒಂದೇ

ಅದೇ ರೀತಿ ಸದ್ಯ ಅಭಿಷೇಕ್​ ಶ್ರೀಕಾಂತ್​ (Bigg Boss Abhishek Shrikanth) ಹಲವು ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಸಾಧಾರಣವಾಗಿ ಎಲ್ಲಿಯೇ ಹೋದರೂ ಮೊದಲು ಕೇಳುವ ಪ್ರಶ್ನೆ ಸಂಭಾವನೆ ಕುರಿತಾಗಿ. ಅದೇ ರೀತಿ ಅಭಿಷೇಕ್​ ಅವರಿಗೂ ಕೇಳಲಾಗಿದೆ.

57
ಒಂದೇ ರೀತಿ ಸಿಗಲ್ಲ

ಅಷ್ಟಕ್ಕೂ ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವಾಗ ಎಲ್ಲಾ ಸ್ಪರ್ಧಿಗಳಿಗೂ ಒಂದೇ ರೀತಿಯ ಸಂಭಾವನೆ ನೀಡುವುದಿಲ್ಲ. ಅವರ ದುಡಿಮೆ, ದಿನದ ಸಂಬಳ, ಬಿಗ್​ಬಾಸ್​ ಮನೆಗೆ ಹೋದರೆ ಅವರಿಗೆ ಆಗಬಹುದಾದ ಹಣದ ನಷ್ಟ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕಿ ದಿನವೊಂದಕ್ಕೆ ಒಂದಿಷ್ಟು ಸಾವಿರದಿಂದ ಲಕ್ಷದ ಹತ್ತಿರ ಹತ್ತಿರ ನೀಡುವುದು ಇದೆ. ಇದು ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ನಲ್ಲಿ ಬೇರೆ ಬೇರೆ ಸಂಭಾವನೆಗಳೂ ಇರುತ್ತವೆ.

67
ಸಿಕ್ಕಿರೋ ಹಣ ಎಷ್ಟು?

ಅಂದಹಾಗೆ ಅಭಿಷೇಕ್​ ಶ್ರೀಕಾಂತ್​ ಅವರಿಗೆ ಈ ಎರಡೂವರೆ ತಿಂಗಳಿನಲ್ಲಿ ಸಿಕ್ಕಿರುವ ಸಂಭಾವನೆ ಎಷ್ಟಿರಬಹುದು ಎಂದು ತಿಳಿಯುವ ಆಸೆ ಹಲವರದ್ದು. ಆದರೆ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿರಲಾಗುತ್ತದೆ. ಅವರು ಕೆಲವೊಂದು ಸೀಕ್ರೇಟ್​ಗಳನ್ನು ಹೇಳುವಂತಿಲ್ಲ. ಅದರಲ್ಲಿ ಒಂದು ಸಂಭಾವನೆ ವಿಷ್ಯ.

77
ತೃಪ್ತಿಯಾಗುವ ಸಂಭಾವನೆ

ಅದೇ ರೀತಿ ಅಭಿಷೇಕ್​ ಅವರೂ, ನಾನು ನನಗೆ ಸಾಕಾಗುವಷ್ಟು ಸಂಭಾವನೆ ಪಡೆದಿದ್ದೇನೆ. ಕೈತುಂಬ ಹಣ ಸಿಕ್ಕಿದೆ. ನಾನು ಕೇಳಿದ್ದಷ್ಟು ಸಿಕ್ಕಿದೆ ಎನ್ನುವ ಮೂಲಕ ಸಂಭಾವನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ರಿವೀಲ್​ ಮಾಡಲಿಲ್ಲ.ಆದ್ದರಿಂದ ಇವರಿಗೆ ಎಷ್ಟು ಸಂಭಾವನೆ ಸಿಗಬಹುದು ಎನ್ನುವ ಲೆಕ್ಕಾಚಾರ ಹಾಕಿದ್ದ ವೀಕ್ಷಕರ ಲೆಕ್ಕಾಚಾರ ಸುಳ್ಳಾಗೋಯ್ತು.

Read more Photos on
click me!

Recommended Stories