BBK 12: ಐದು ಸಾವಿರ ಸೀರೆ, ವಾಚ್‌, ದುಬಾರಿ ಕಾರ್‌ ಕಲೆಕ್ಷನ್‌; ಅಶ್ವಿನಿ ಗೌಡ ಹಿನ್ನಲೆ ಗೊತ್ತಾ?

Published : Sep 30, 2025, 10:36 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಭಾಗಿಯಾಗಿದ್ದಾರೆ. 25 ಧಾರಾವಾಹಿ, 100 ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ, ಕನ್ನಡಪರ ಹೋರಾಟಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಇವರ ಮನೆ, ಸೀರೆ ಕಲೆಕ್ಷನ್‌, ವಾಚ್‌ ಕಲೆಕ್ಷನ್‌ ಮುಂತಾದ ವಿಷಯಗಳ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ. 

PREV
16
ಒಂದು ವರ್ಷ ದೇವರಪೂಜೆ ಮಾಡಲಿಲ್ಲ

ತಂದೆ ತೀರಿಕೊಂಡರು ಎಂದು ಬೇಸರದಲ್ಲಿ ಅಶ್ವಿನಿ ಅವರು ದೇವರಮನೆಗೆ ಹೋಗೋದು, ಪೂಜೆ ಮಾಡೋದು ಬಿಟ್ಟಿದ್ದರು. ತಂದೆಗೋಸ್ಕರ ಅವರು ದೇವಸ್ಥಾನವನ್ನೇ ಕಟ್ಟಿಸಿದ್ದಾರಂತೆ.

26
ಸೀರೆ, ವಾಚ್‌ ಕಲೆಕ್ಷನ್‌

ಅಶ್ವಿನಿ ಅವರ ಬಳಿ 5000 ಸೀರೆ ಇವೆಯಂತೆ. ವಾಚ್‌ಗಳು ಅಂದರೆ ತುಂಬ ಇಷ್ಟ. “ನಾನು ಎಲ್ಲ ಸೀರೆಗೆ 2000 ರೂಪಾಯಿ ಕೊಟ್ಟು, ತಗೋತೀನಿ ಅಂತ ಅಂದುಕೊಳ್ಳಲಿಲ್ಲ. ಕೆಲವೊಂದು ಸೀರೆಗೆ 200 ರೂಪಾಯಿ ಕೂಡ ಕೊಟ್ಟಿದ್ದುಂಟು. ನನ್ನ ಬಳಿ ಅತಿ ಹೆಚ್ಚು ಅಂದರೆ 50000 ರೂಪಾಯಿ ಬೆಲೆಯ ಸೀರೆ ಇರಬಹುದು” ಎಂದು ಅಶ್ವಿನಿ ಹೇಳಿದ್ದರು.

36
ವಾಚ್‌ಗಳ ಬೆಲೆ ಎಷ್ಟು?

“30000, 25000 ರೂಪಾಯಿ ಎಂದು ಒಂದಿಷ್ಟು ವಾಚ್‌ಗಳ ಕಲೆಕ್ಷನ್‌ ಇದೆ. ತಂದೆಯ ನೆನಪಿಗೆ ಅವರ ವಾಚ್‌ ಇಟ್ಕೊಂಡಿರುವೆ. ಅದನ್ನು ಇತ್ತೀಚೆಗೆ ಸರಿಮಾಡಿಸಿಕೊಂಡು ಬಂದೆ” ಎಂದು ಅಶ್ವಿನಿ ಹೇಳಿದ್ದರು.

46
3 ಎಕರೆ ಜಾಗದ ಪಾರ್ಕಿಂಗ್‌

ಅಶ್ವಿನಿ ಅವರು 3 ಎಕರೆ ಜಾಗದಲ್ಲಿ ಕಾರ್‌ಗಳ ಪಾರ್ಕಿಂಗ್‌ ಮಾಡುತ್ತಾರೆ, ಅವರ ತಮ್ಮ ಕೂಡ ನೀಟ್‌ ಆಗಿ ಕಾರ್‌ಗಳನ್ನು ಮೆಂಟೇನ್‌ ಮಾಡುತ್ತಾರೆ.

56
150 ಮನೆ ಬಾಡಿಗೆ ಕೊಡ್ತಾರೆ

ಅಶ್ವಿನಿ ಅವರ ತಂದೆಯ ಆಸ್ತಿ ಇದೆ. 150 ಮನೆಯನ್ನು ಬಾಡಿಗೆಗೆ ನೀಡಿದ್ದಾರಂತೆ. ಆಸ್ತಿ ಇದ್ದ ಹಾಗೆ, ಕೇಸ್‌ಗಳು ಇವೆಯಂತೆ. ಕನ್ನಡಪರ ಹೋರಾಟಗಾರ್ತಿ ಆಗಿರೋ ಅಶ್ವಿನಿ ವಿರುದ್ಧ ಒಟ್ಟೂ 25 ಕೇಸ್‌ಗಳು ಇವೆಯಂತೆ.

66
ಮಗನಿಗೆ ಮನೆ ಕಟ್ಟಿಸುವ ಆಸೆ

ಅಶ್ವಿನಿ ಅವರು ನಾಲ್ಕು ಬೆಡ್‌ ರೂಮ್‌, ವಿಶಾಲವಾದ ಹಾಲ್‌ ಇರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮಗನ ಇಷ್ಟದಂತೆ ಮನೆ ಕಟ್ಟಿಸುವ ಆಲೋಚನೆಯನ್ನು ಕೂಡ ಹೊಂದಿದ್ದಾರೆ.

Read more Photos on
click me!

Recommended Stories