ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿ ಸೌಂದರ್ಯ ಶೆಟ್ಟಿ ವಿರುದ್ಧ ಕೆಟ್ಟ ಪದ ಬಳಸಿದ ಮಾಡರ್ನ್ ಮಹಾಕವಿ ಮಂಜನ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಕುಶಲ ಕಲಾವೃಂದದ ಅಧ್ಯಕ್ಷೆ ಕುಶಾಲಾ ಅವರು ಈ ದೂರು ದಾಖಲಿಸಿದ್ದು, ಶೋ ನೀಡುತ್ತಿರುವ ಸಂದೇಶದ ಬಗ್ಗೆ ಪ್ರಶ್ನಿಸಿದ್ದಾರೆ.
ಬಿಗ್‌ಬಾಸ್ ಕನ್ನಡ (Bigg Boss Kannada)ದಲ್ಲಿ ಮತ್ತೊಮ್ಮೆ ರಾಜ್ಯ ಮಹಿಳಾ ಆಯೋಗದ ಎಂಟ್ರಿಯಾಗಿದೆ. 2024ರಲ್ಲಿ 11ನೇ ಸೀಸನ್ ವಿರುದ್ಧ ಮಹಿಳಾ ಆಯೋಗ ಗರಂ ಆಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆಯನ್ನೂ ನೀಡಿಲ್ಲ. ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದರಿಂದ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಅದು ತಿಳಿಸಿತ್ತು. ಆದರೆ ಇದೀಗ ಬೇರೆ ವಿವಾದದ ಕಾರಣದಿಂದ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ.
26
ಈ ಹಿಂದೆ ಕೂಡ ದೂರು
ಇಲ್ಲಿ, ಬಿಗ್‌ಬಾಸ್ ಸ್ಪರ್ಧಿ ಸೌಂದರ್ಯ ಶೆಟ್ಟಿ ಅವರ ವಿರುದ್ಧ ಕೆಟ್ಟ ಪದ ಬಳಿಸಿರುವ ಮಾಡರ್ನ್ ಮಹಾಕವಿ ಮಂಜ ವಿರುದ್ಧ ಕುಶಲ ಕಲಾವೃಂದದ ಅಧ್ಯಕ್ಷೆ ಕುಶಾಲಾ ಎಂಬುವವರು ದೂರು ದಾಖಲಿಸಿದ್ದಾರೆ. ಇದೀಗ “ಬಿಗ್ ಬಾಸ್ ತಂಡ ಸಮಾಜಕ್ಕೆ ಏನು ಸಂದೇಶ ನೀಡುತ್ತಿದೆ” ಎಂದು ಪ್ರಶ್ನಿಸಿರುವ ಕುಶಾಲಾ ಅವರು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
36
ಗಿಲ್ಲಿಯ ವಿರುದ್ಧವೂ ದೂರು
ಬಿಗ್ ಬಾಸ್ ಸೀಸನ್-12’ರ ಸಮಯದಲ್ಲಿ ‘ಗಿಲ್ಲಿ ನಟ’ನ ವಿರುದ್ಧ ಕೂಡ ಕುಶಾಲಾ ಅವರು ದೂರು ನೀಡಿದ್ದರು. ‘ಹೆಣ್ಮಕ್ಕಳ ಬಟ್ಟೆ ಎತ್ತಿದ್ದರು, ಕೆಟ್ಟ ಕಾಮಿಡಿ’ ಎಂದು ಉಲ್ಲೇಖಿಸಿ ದೂರು ಕೊಟ್ಟಿದ್ದರು. ಅದೇ ರೀತಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ‘ಗೆಜ್ಜೆ ಗಲಾಟೆ’ ಆದಾಗಲು ಧ್ವನಿ ಎತ್ತಿದ್ದರು ಇವರು.
ಅಷ್ಟಕ್ಕೂ ಆಗಿದ್ದೇನೆಂದರೆ, ಕ್ಯಾಪ್ಟನ್ಸಿ ಆಟದ ಆರಂಭದಲ್ಲಿ ಸ್ಪರ್ಧಿಗಳಿಗೆ ‘ಕಣ್ಗಾವಲು’ ಎಂಬ ಟಾಸ್ಕ್ ನೀಡಲಾಗಿತ್ತು. ಈ ವೇಳೆ ಆಟದ ಭರದಲ್ಲಿ ಸೌಂದರ್ಯ ಶೆಟ್ಟಿ ಅವರು ಮಾಡ್ರನ್ ಮಹಾಕವಿ ಮಂಜನ ಕಪಾಳಕ್ಕೆ ಹೊಡೆದರು. ಇದರಿಂದ ಕೆರಳಿ ಕೆಂಡವಾದ ಮಂಜ, “ನಮ್ಮ ಅಪ್ಪ-ಅಮ್ಮನೇ ನನ್ನ ಮೇಲೆ ಒಂದು ಕೈ ಮಾಡಿಲ್ಲ. ನೀನ್ಯಾರು? ಎತ್ತಿ ಕುಕ್ಕಿಬಿಡ್ತೀನಿ, ಲೊಟ ಲೊಟ ಅಂತ ಮೂಳೆಗಳು ಮುರಿದುಹೋಗಿರೋದು” ಎಂದು ಕೂಗಾಡಿದ್ದರು. ಕೊನೆಗೆ ಬಿಗ್ ಬಾಸ್ ಪ್ರವೇಶಿಸಿ ಮಂಜನನ್ನ ಸಮಧಾನ ಮಾಡಿದ್ದರು.
56
ಸೌಂದರ್ಯ ಶೆಟ್ಟಿ ಕ್ಷಮೆ
ಸೌಂದರ್ಯ ಶೆಟ್ಟಿ ಕೂಡ ಆಟದ ಭರದಲ್ಲಿ ಇಂಥದ್ದೊಂದು ತಪ್ಪು ನಡೆದಿದೆ ಎಂದು ಕ್ಷಮೆ ಕೂಡ ಕೇಳಿದ್ದರು. ಆದರೆ ಮಹಿಳೆಯರ ವಿರುದ್ಧ ಈ ರೀತಿಯ ಪದ ಬಳಕೆ ಸರಿಯಲ್ಲ ಎಂದು ಆಯೋಗಕ್ಕೆ ದೂರು ದಾಖಲು ಮಾಡಲಾಗಿದೆ.
66
ಏನಿದೆ ದೂರಿನಲ್ಲಿ?
“2026ರ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ದೂರು, 3 ದಿನಗಳ ಹಿಂದೆ ನಡೆದ ಟಾಸ್ಕ್‌ನಲ್ಲಿ ಮಹಾಕವಿ ಮಂಜ ಎಂಬುವವರು ಸೌಂದರ್ಯ ಶೆಟ್ಟಿ ಎಂಬ ಹುಡುಗಿಗೆ ‘ನಿನ್ನ ಕುಕ್ಕುತ್ತೇನೆ’, ‘ಹೊಡೆಯುತ್ತೇನೆ’, ‘ಕೆಟ್ಟ ಸೈಕೋ’ ಎಂಬ ಪದಬಳಕೆ ಮಾಡಿದ್ದಾರೆ. ಲೇಡಿಸ್ ಕಲಾವಿದರ ಬಗ್ಗೆ ಸ್ವಲ್ಪ ಕೂಡ ಗೌರವವಿಲ್ಲ. ಇಂಥವರನ್ನ ಮೆಂಟಲ್ ಆಸ್ಪತ್ರೆಯಿಂದ ಕರೆದು ತಂದು ಷೋ ನಡೆಸುತ್ತಿರುವ ಕಲರ್ಸ್ ಕನ್ನಡ , ಷೋ ಹೋಸ್ಟ್ ಮಾಡುತ್ತಿರುವ ಸುದೀಪ್ ಅವರಿಗೆ ನಾನು ಕೇಳುವ ಪ್ರಶ್ನೆ ಅಂದ್ರೆ ಇದರ ಮೂಲಕ ಏನು ಮೆಸೇಜ್ ಕೊಡುತ್ತಿರಾ?” ಎಂದು ಕುಶಾಲಾ ಅವರು ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.