ರೂಲ್ಸ್ ಬ್ರೇಕ್ ಮಾಡಿ ಕ್ಯಾಪ್ಟನ್ ಆದ್ರಾ ಸಂಗೀತಾ? ಇಂದಿನ ವಾರದ ಕಥೆಯಲ್ಲಿ ಯಾರಿಗೆ ಕಿಚ್ಚನ ಕ್ಲಾಸ್?

Published : Sep 19, 2026, 01:16 PM IST

Sangeetha captaincy controversy: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾದ ಸಂಗೀತಾ ಅವರ ಗೆಲುವಿನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಸಂಗೀತಾ ಕ್ಯಾಪ್ಟನ್ಸಿ ರದ್ದಾಗುತ್ತಾ? ಇಲ್ಲಿದೆ ಮಾಹಿತಿ.

PREV
14
ನಿಯಮ ಉಲ್ಲಂಘಿಸಿದ್ರಾ ಸಂಗೀತಾ?

ನಿಯಮ ಉಲ್ಲಂಘಿಸಿದ್ರಾ ಸಂಗೀತಾ?
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಮುಗಿದು ಸಂಗೀತಾ ಆಯ್ಕೆಯಾಗಿದ್ದಾರೆ ನಿಜ. ಆದರೆ, ಸಂಗೀತಾ ಅವರ ಈ ಗೆಲುವಿನ ಬೆನ್ನಲ್ಲೇ ಈಗ ಬಿಗ್ ಬಾಸ್ ಮನೆಯೊಳಗೂ ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆರಂಭವಾಗಿದೆ. ಸಂಗೀತಾ ಟಾಸ್ಕ್‌ನ ನಿಯಮಗಳನ್ನು ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ವೀಕ್ಷಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

24
ಟಾಸ್ಕ್‌ನಲ್ಲಿ ನಡೆದಿದ್ದೇನು? ಎಡವಟ್ಟು ಎಲ್ಲಿ ಆಯ್ತು?

ಟಾಸ್ಕ್‌ನಲ್ಲಿ ನಡೆದಿದ್ದೇನು? ಎಡವಟ್ಟು ಎಲ್ಲಿ ಆಯ್ತು?
ಕ್ಯಾಪ್ಟನ್ಸಿ ಟಾಸ್ಕ್‌ನ ನಿಯಮದ ಪ್ರಕಾರ, ಮರದ ತುಂಡುಗಳನ್ನು (ವುಡನ್ ಬ್ಲಾಕ್ಸ್) ಒಂದರ ಹಿಂದೆ ಒಂದರಂತೆ ಜೋಡಿಸಿ, ಡಾಮಿನೋ ಎಫೆಕ್ಟ್ (Domino Effect) ಮಾದರಿಯಲ್ಲಿ ಒಂದಾದ ಮೇಲೊಂದು ಬೀಳುವಂತೆ ತಳ್ಳಬೇಕಿತ್ತು. ಆ ಸರಣಿ ಹೊಡೆತಕ್ಕೆ ಕೊನೆಯಲ್ಲಿದ್ದ ಎದುರಾಳಿಯ ಫೋಟೋ ನೀರಿನೊಳಗೆ ಬೀಳಬೇಕಿತ್ತು. ಆದರೆ, ಸಂಗೀತಾ ಆಟ ಆಡಿದಾಗ ಒಂದು ವುಡನ್ ಬ್ಲಾಕ್ ಸರಪಳಿಯಿಂದ ಹೊರಗೆ ಬಿದ್ದಿತ್ತು. ನಿಯಮದ ಪ್ರಕಾರ ಸರಪಳಿ ಮುರಿದುಬಿದ್ದಾಗ ಅದು ಅಸಿಂಧು ಆಗಬೇಕಿತ್ತು. ಆದರೆ ಗೆಲುವಿನ ಸಂಭ್ರಮದಲ್ಲಿ ಇದನ್ನು ಯಾರೂ ಸರಿಯಾಗಿ ಗಮನಿಸಲಿಲ್ಲ.

34
ಲಿಖಿತ್ ಆಕ್ಷೇಪ

ಲಿಖಿತ್ ಆಕ್ಷೇಪ
ಸಂಗೀತಾ ನಿಯಮ ಪಾಲಿಸಿಲ್ಲ ಎಂಬುದನ್ನು ಲಿಖಿತ್ ತಕ್ಷಣವೇ ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸಂಗೀತಾ ತಂಡದವರು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಯಶಸ್, ನೀನು ಆಟವಾಡು ಪರವಾಗಿಲ್ಲ ಎಂದು ಆಸಿಯಾಗೆ ಹೇಳಿದರು. ಆಗ ಆಸಿಯಾ ಪ್ರತಿಯೊಂದು ವುಡನ್ ಬ್ಲಾಕ್ ಒಂದರ ಮೇಲೊಂದು ಬೀಳುವಂತೆ ನಿಯಮಬದ್ಧವಾಗಿ ತಳ್ಳಿದರು. ಆಗಲೇ ಸಂಗೀತಾ ಆಟದಲ್ಲಿ ಲೋಪವಾಗಿರುವುದು ಸ್ಪಷ್ಟವಾಗಿ ಕಾಣಿಸಿತು. ಆದರೂ, ಅಷ್ಟರಲ್ಲಾಗಲೇ ಸಂಗೀತಾ ಅವರನ್ನು ವಿಜೇತೆ ಎಂದು ಘೋಷಿಸಿ ಕ್ಯಾಪ್ಟನ್ ಪಟ್ಟ ಕಟ್ಟಿಯಾಗಿತ್ತು!

44
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ, ಕಿಚ್ಚನ ತೀರ್ಪು ಏನು?

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ, ಕಿಚ್ಚನ ತೀರ್ಪು ಏನು?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕ್ಲಿಪ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, "ಸಂಗೀತಾ ಗೆದ್ದಿರುವುದು ಸಂಪೂರ್ಣ ರಾಂಗ್, ಅವರು ನಿಯಮಗಳನ್ನೇ ಅರ್ಥ ಮಾಡಿಕೊಂಡಿಲ್ಲ" ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಇಂದು ರಾತ್ರಿ ಬಹುನಿರೀಕ್ಷಿತ 'ಕಿಚ್ಚನ ಪಂಚಾಯಿತಿ' ಪ್ರಸಾರವಾಗಲಿದ್ದು, ಸುದೀಪ್ ಈ ವಿಚಾರವನ್ನು ಪ್ರಸ್ತಾಪಿಸುತ್ತಾರಾ? ಫೂಟೇಜ್ ಪರಿಶೀಲಿಸಿ ಸಂಗೀತಾ ಅವರ ಕ್ಯಾಪ್ಟನ್ಸಿಯನ್ನು ರದ್ದು ಮಾಡುತ್ತಾರಾ? ಅಥವಾ ಎಚ್ಚರಿಕೆ ನೀಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories