Bigg Boss 13: ಅವಕಾಶ ಕೊಟ್ಟ ವೇದಿಕೆಗೇ ಗೌರವ ಕೊಡ್ತಿಲ್ವಾ? ಮಾನವೀಯತೆ ಮರೆತ್ರಾ? ಕಿಚ್ಚನ ಕೋಪ ಯಾರ ಮೇಲೆ

Published : Sep 19, 2026, 01:47 PM IST

ಬಿಗ್‌ಬಾಸ್ 13ರ ಮೊದಲ ವಾರಾಂತ್ಯದಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ವೇದಿಕೆಗೆ ಅಗೌರವ ತೋರಿದ ಮತ್ತು ಮಾನವೀಯತೆ ಮರೆತ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ಸಂಗೀತಾ ಭಟ್ ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ ಎಂಬ ಚರ್ಚೆ ಕೂಡ ಜೋರಾಗಿದೆ.

PREV
16
ವಾರದ ಕಥೆ ಕಿಚ್ಚನ ಜೊತೆ

ಬಿಗ್​ಬಾಸ್​ 13 (Bigg Boss 13) ಆರಂಭವಾಗಿ ವಾರ ಕಳೆದಿದೆ. ಇದೀಗ ವೀಕೆಂಡ್​ ಬಂದಿದ್ದು, ವೀಕ್ಷಕರು ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯಾದರೂ ಮಹಿಳೆಯೊಬ್ಬಳು ಬಿಗ್​ಬಾಸ್​​ ಟ್ರೋಫಿ ವಿನ್​ ಆಗಲಿ ಎನ್ನುವುದು ಬಿಗ್​ಬಾಸ್​ ವೀಕ್ಷಕರ ಅದರಲ್ಲಿಯೂ ಮಹಿಳೆಯರ ಆಶಯವಾಗಿದೆ.

26
ಕಿಚ್ಚನ ಚಪ್ಪಾಳೆ ಯಾರಿಗೆ?

ಇದರ ಬೆನ್ನಲ್ಲೇ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬೇಕು ಎನ್ನುವ ಬಗ್ಗೆಯೂ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿನ ಚರ್ಚೆಯಾಗುತ್ತಿದೆ. ಸದ್ಯದ ಪ್ರಕಾರ, ಬಹುತೇಕ ಮಂದಿ ಸೌಂದರ್ಯ ಪರ ಇರುವುದು ಕಮೆಂಟ್ಸ್​ನಲ್ಲಿ ಕಾಣಿಸುತ್ತಿದೆ. ಈ ಸಲ ಸ್ಯಾಂಡಿಗೆ ಕಿಚ್ಚನ ಚಪ್ಪಾಳೆ ಬರಬೇಕು ಎಂದು ಹಲವರು ಕಮೆಂಟ್ಸ್​ನಲ್ಲಿ ಹೇಳುತ್ತಿದ್ದಾರೆ.

36
ಹಲವರಿಗೆ ಸುದೀಪ್​ ಕ್ಲಾಸ್​

ಅಷ್ಟಕ್ಕೂ ಇದಾಗಲೇ ಸುದೀಪ್​ ಹಲವರಿಗೆ ಕ್ಲಾಸ್​ ತೆಗೆದುಕೊಂಡಿದ್ದು ಅದರ ಪ್ರೊಮೋ ಅನ್ನು ವಾಹಿನಿ ಶೇರ್​ ಮಾಡಿಕೊಂಡಿದೆ. ಅವಕಾಶ ಕೊಟ್ಟಿರುವ ವೇದಿಕೆಗೆ ಗೌರವ ಕೊಡ್ತಿದ್ದಾರಾ ಎಂದು ಕಿಚ್ಚ ಪ್ರಶ್ನಿಸಿದ್ದಾರೆ. ಮಾತುಗಳು ಅವಶ್ಯಕತೆಯ ಮಿತಿ ಮೀರುತ್ತಿದೆಯಾ ಎಂದು ಕೇಳಿದ್ದಾರೆ.

46
ಮಾನವೀಯತೆ ಮರೆತಿದ್ದಾರಾ

ಮನೆಯೊಳಗೆ ಹೋಗಿರುವ ಕೆಲವರು ಮಾನವೀಯತೆ ಮರೆತಿದ್ದಾರಾ? ಅದನ್ನು ಕಾಪಾಡುವಲ್ಲಿ ತಪ್ಪುತ್ತಿದ್ದಾರಾ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಮಾಡಿದ್ದೇ ಸರಿ ಎನ್ನುವ ಮುಠ್ಠಾಳತನದ ಕಲ್ಪನೆ ತಲೆಗೆ ಏರುತ್ತಿದೆಯಾ ಎಂದು ಕೆಲವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

56
ಯಾರಿಗೆ ಕ್ಲಾಸ್​, ಯಾರಿಗೆ ಚಪ್ಪಾಳೆ

ಇವೆಲ್ಲವುಗಳ ನಡುವೆ ಯಾರ್ಯಾರಿಗೆ ಈ ವಾರ ಕ್ಲಾಸ್​​ ತೆಗೆದುಕೊಳ್ತಾರೆ, ಯಾರಿಗೆ ಚಪ್ಪಾಳೆ ಸಿಗತ್ತೆ ಎನ್ನುವ ಬಗ್ಗೆ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

66
ಮೋಸದಿಂದ ಗೆದ್ದರಾ ಸಂಗೀತಾ?

ಇದಾಗಲೇ ಬಿಗ್​ಬಾಸ್​ನಲ್ಲಿ ಸಂಗೀತಾ ಭಟ್​, ಆಸಿಯಾ ಮತ್ತು ಸೌಂದರ್ಯ ಮೇಲೆ ನೆಟ್ಟಿಗರ ವ್ಯಾಮೋಹ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಇದೀಗ ಸಂಗೀತಾ ಕ್ಯಾಪ್ಟನ್​ ಆದಾಗಿನಿಂದಲೂ ಜಾಲತಾಣದಲ್ಲಿ ಚರ್ಚೆ ಬಿರುಸಿನಿಂದಲೇ ಸಾಗಿದೆ. ಸಂಗೀತಾ ಟಾಸ್ಕ್‌ನ ನಿಯಮಗಳನ್ನು ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ವೀಕ್ಷಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories