'ಶಾಂತಂ ಪಾಪಂ' ಸೀಸನ್ 7ರ ಮೊದಲ ಸಂಚಿಕೆಯಲ್ಲಿ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿನ ಕಾರ್ ರೊಮ್ಯಾನ್ಸ್ ದೃಶ್ಯವನ್ನು ಹೋಲುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಸ್ಮಶಾನದಲ್ಲಿ ವಿಂಟೇಜ್ ಕಾರ್ ಬಳಸಿ ಚಿತ್ರೀಕರಿಸಿದ ಈ ದೃಶ್ಯವು 'ಟಾಕ್ಸಿಕ್'ನ ನಕಲು ಎಂಬ ಚರ್ಚೆಗೆ ಕಾರಣವಾಗಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ದೇಶದಾದ್ಯಂತ ಸದ್ದು ಮಾಡಿತ್ತು. ಟೀಸರ್‌ನಲ್ಲಿ ಕಾರ್‌ನೊಳಗಿನ ಹಸಿಬಿಸಿ ದೃಶ್ಯವಂತೂ ನೋಡುಗರಲ್ಲಿ ಹಲ್‌ಚಲ್ ಸೃಷ್ಟಿಸಿತ್ತು. ಇಷ್ಟು ಮಾತ್ರವಲ್ಲ ಟೀಸರ್‌ನಲ್ಲಿ ಬಳಕೆಯಾದ ಪವರ್‌ಫುಲ್ ಬಿಜಿಎಂ ಮತ್ತು ಡ್ಯಾಡೀಸ್ ಹೋಮ್ ಡೈಲಾಗ್ ಸಹ ಟ್ರೆಂಡಿಂಗ್‌ನಲ್ಲಿದೆ. ಇದೀಗ ಟಾಕ್ಸಿಕ್‌ನ ಡ್ಯಾನ್ಸಿಂಗ್ ಕಾರ್ ದೃಶ್ಯದ ಮಾದರಿಯಲ್ಲಿ ಶಾಂತಂ ಪಾಪಂ ಶೋನಲ್ಲಿ ಬಳಕೆ ಮಾಡಲಾಗಿದೆ.
25
ಕಾರ್‌ನಲ್ಲಿಯೇ ರೊಮ್ಯಾನ್ಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶಾಂತಂ ಪಾಪಂ ಶೋನ ಏಳನೇ ಸೀಸನ್ ಸೋಮವಾರದಿಂದ ಪ್ರಸಾರವಾಗುತ್ತಿದೆ. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಟಾಕ್ಸಿಕ್ ಮಾದರಿ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಕಾರೊಂದು ನಿರ್ಜನವಾದ ಸ್ಮಶಾನದೊಳಗೆ ಬರುತ್ತೆ. ಜೋಡಿಯೊಂದು ಕಾರ್‌ನಲ್ಲಿಯೇ ರೊಮ್ಯಾನ್ಸ್‌ನಲ್ಲಿಯೇ ತೊಡಗಿಕೊಳ್ಳುತ್ತದೆ.
35
ಅಪರಾಧ ಕಥೆ & ಹಸಿಬಿಸಿ ದೃಶ್ಯ
ಟಾಕ್ಸಿಕ್ ಸಿನಿಮಾದಂತೆಯೇ ಇಲ್ಲಿಯೂ ವಿಂಟೇಜ್ ಮಾದರಿಯ ಕಾರ್ ಬಳಕೆ ಮಾಡಲಾಗಿದೆ. ಕಾರ್ ದೃಶ್ಯವಂತವೂ ಟಾಕ್ಸಿಕ್ ಚಿತ್ರದ ನಕಲು ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ. ಶಾಂತಂ ಪಾಪಂ ಸೀಸನ್ 7ರ ಮೊದಲ ಸಂಚಿಕೆಯ ಅಪರಾಧ ಕಥೆ ಹಸಿಬಿಸಿ ದೃಶ್ಯದೊಂದಿಗೆ ಪ್ರಸಾರವಾಗಿದೆ.
ಶಾಂತಂಪಾಪಂ ಪ್ರೋಮೋ ಪ್ರಕಾರ, ಜೋಡಿಯೊಂದು ಸ್ಮಶಾನದಲ್ಲಿ ಕಾರ್ ನಿಲ್ಲಿಸಿ ಏಕಾಂತಕ್ಕೆ ಜಾರುತ್ತಾರೆ. ಈ ವೇಳೆ ಅಲ್ಲಿಗೆ ಬರುವ ವ್ಯಕ್ತಿ, ಕಾರ್‌ನಲ್ಲಿದ್ದ ಯುವಕನನ್ನು ಹೊರಗೆ ಕರೆಯುತ್ತಾನೆ. ಕಾರ್‌ನ ಇಎಂಐ ಕಟ್ಟಲು ಆಗಲ್ಲ. ಮುಖದಲ್ಲಿ ಕೋಪ, ದೇಹದಲ್ಲಿ ತಾಪ ಇದ್ರೆ ಸಾಲದು. ಇಎಂಐ ಕಟ್ಟೋ ತಾಕತ್ತು ಇರಬೇಕು ಎಂದು ಅವಾಜ್ ಹಾಕುತ್ತಾನೆ. ಯುವಕ ಎಷ್ಟೇ ಮನವಿ ಮಾಡಿಕೊಂಡ್ರು ಯುವತಿಯನ್ನು ಹೊರಗೆ ಕರೆಸಿ ಇಬ್ಬರಿಗೂ ಉಗಿದು ಕಾರ್ ತೆಗೆದುಕೊಂಡು ಹೋಗುತ್ತದೆ
ಈಗಾಗಲೇ ಆರು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರೋ ಶಾಂತಂಪಾಪಂ ಏಳನೇ ಸೀಸನ್‌ಗೆ ಕಾಲಿಟ್ಟಿದೆ. ಅಪರಾಧ ಪ್ರಕರಣಗಳ ಕಥೆಯನ್ನೇ ಬಳಸಿಕೊಂಡು ಅಲ್ಲಿಯ ಪಾತ್ರಗಳನ್ನು ಮರುಸೃಷ್ಟಿಸಲಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನಾಧರಿತ ಪ್ರಕರಣಗಳನ್ನೇ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.