BBK 12 Dhruvant Rakshita ರಕ್ಷಿತಾ ಜಗಳದ ವಿಡಿಯೋ ನೋಡಿದ ಧ್ರುವಂತ್ ವೀಕ್ಷಕರ ಜೊತೆ ರಕ್ಷಿತಾ ಕ್ಷಮಾಪಣೆ ಪತ್ರವನ್ನು ಹಂಚಿಕೊಂಡಿದ್ದಾರೆ. ಇದ್ರ ಜೊತೆ ಎಲ್ಲಗಲಾಟೆಗೆ ದಿ ಆಂಡ್ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಹಾವು – ಮುಂಗೂಸಿಯಂತೆ ಆಡ್ತಿದ್ದ ಜೋಡಿ ಅಂದ್ರೆ ಅದು ರಕ್ಷಿತಾ ಹಾಗೂ ಧ್ರುವಂತ್. ಬಿಗ್ ಬಾಸ್ ಶುರುವಾದ ಆರಂಭದಲ್ಲಿ ಚೆನ್ನಾಗಿದ್ದವರು ಏಕಾಏಕಿ ಬದಲಾಗಿದ್ರು. ಮಲ್ಲಮ್ಮ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಧ್ರುವಂತ್ ಹಾಗೂ ರಕ್ಷಿತಾ ಬೇರೆಯಾಗಿದ್ರು. ಧ್ರುವಂತ್ ಏನೇ ಮಾಡಿದ್ರೂ ರಕ್ಷಿತಾಗೆ ಇಷ್ಟವಾಗ್ತಿರಲಿಲ್ಲ.
29
ಸಿಕ್ರೇಟ್ ರೂಮಿನಲ್ಲಿ ಯುದ್ಧ
ಬಿಗ್ ಬಾಸ್ ಮನೆಯ ಸಿಕ್ರೇಟ್ ರೂಮ್ ವೀಕ್ಷಕರಿಗೆ ಮನರಂಜನೆ ನೀಡಿದ್ದು ಸುಳ್ಳಲ್ಲ. ಸಿಕ್ರೇಟ್ ರೂಮಿನಲ್ಲಿ ರಕ್ಷಿತಾ ಹಾಗೂ ಧ್ರುವಂತ್ ಗಲಾಟೆ ಹೈಲೈಟ್ ಆಗಿತ್ತು. ಬಿಗ್ ಬಾಸ್ ಯಾವುದೆ ಟಾಸ್ಕ್ ಕೊಟ್ಟರೂ ಮೊದಲು ದೊಡ್ಡ ಗಲಾಟೆಯಾಗ್ತಿತ್ತು. ನಂತ್ರ ಧ್ರುವಂತ್, ರಕ್ಷಿತಾ ಮಾತಿಗೆ ಒಪ್ಪಿಗೆ ನೀಡ್ತಿದ್ದರು. ರಕ್ಷಿತಾ ಮಾತಿಗೆ ಧ್ರುವಂತ್ ನೀಡ್ತಿದ್ದ ರಿಯಾಕ್ಷನ್, ವೀಕ್ಷಕರಿಗೆ ಮಜ ನೀಡ್ತಿತ್ತು.
39
ಒಂದೇ ರಾಶಿ, ಒಂದೇ ನಕ್ಷತ್ರ
ವಿಚಿತ್ರ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಅತಿಯಾಗಿ ಜಗಳವಾಡಿದ್ದ ರಕ್ಷಿತಾ ಹಾಗೂ ಧ್ರುವಂತ್ ರಾಶಿ ಹಾಗೂ ನಕ್ಷತ್ರ ಒಂದೆ. ಇಬ್ಬರದ್ದೂ ಮಿಥುನ ರಾಶಿ, ಆರ್ದ್ರಾ ನಕ್ಷತ್ರ. ಹಾಗಾಗಿ ಇಬ್ಬರೂ ಬಿಟ್ಟುಕೊಡುವ ಸ್ವಭಾವ ಹೊಂದಿಲ್ಲ.
ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಧ್ರುವಂತ್ ಬಿಗ್ ಬಾಸ್ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. ಅದ್ರಲ್ಲಿ ರಕ್ಷಿತಾ ಜಗಳದ ವಿಡಿಯೋ ಕೂಡ ಸೇರಿದೆ. ದೋಸೆ ತಿಂತಾ, ಮನೆಯಲ್ಲಿ ರಕ್ಷಿತಾ ಜಗಳದ ವಿಡಿಯೋ ನೋಡ್ತಿರುವ ಪೋಸ್ಟ್ ಒಂದನ್ನು ಧ್ರುವಂತ್ ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತಾ ಮಾತು ಕೇಳಿ ಧ್ರುವಂತ್ ನಗ್ತಿದ್ದಾರೆ.
59
ಕ್ಷಮಾಪಣೆ ಪತ್ರ ತೋರಿಸಿದ ಧ್ರುವಂತ್
ಅದೆಷ್ಟೇ ಗಲಾಟೆ ಮಾಡ್ಲಿ ರಕ್ಷಿತಾ ಮುಗ್ದ ಸ್ವಭಾವ ಹೊಂದಿದ್ದಾರೆ. ಧ್ರುವಂತ್ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದ್ಮೇಲೆ ಅವರ ಸೂಟ್ ಕೇಸ್ ನಲ್ಲಿ ರಕ್ಷಿತಾ ಕ್ಷಮೆ ಕೇಳಿ ಒಂದು ಪತ್ರ ಇಟ್ಟಿದ್ದರು. ಅದನ್ನು ಧ್ರುವಂತ್ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಏನಿದೆ ಎಂಬುದನ್ನು ವೀಕ್ಷಕರಿಗೆ ತೋರಿಸಿದ್ದಾರೆ.
69
ರಕ್ಷಿತಾ ಕ್ಷಮಾಪಣೆ ಪತ್ರದಲ್ಲಿ ಏನಿದೆ?
ನಿಮಗೆ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸಿ. ಹ್ಯಾಪಿ ಮೆಮೊರಿಸಿ, ಬಿಬಿಕೆ 12 ರಕ್ಷಿತಾ ಅಂತ, ರಕ್ಷಿತಾ ಲೆಟರ್ ನಲ್ಲಿ ಬರೆದಿದ್ದಾರೆ. ಒಂದು ಸ್ಮೈಲ್ ಎಮೋಜಿ ಬಿಡಿಸಿದ್ದಾರೆ.
79
ಕೂಲ್ ಎಂದ ಧ್ರುವಂತ್
ರಕ್ಷಿತಾ ಜಗಳ, ರಕ್ಷಿತಾ ಲೆಟರ್ ಪೋಸ್ಟ್ ಮಾಡಿರುವ ಧ್ರುವಂತ್, ಜಗಳದ ನಂತ್ರ ರಕ್ಷಿತಾ ಈ ಕ್ಷಮಾಪಣೆ ಪತ್ರ ಕಳುಹಿಸಿದ್ದಾರೆ. ಗಲಾಟೆ ಇಲ್ಲಿಗೆ ಮುಗಿದಿದೆ ಅಂತ ಶೀರ್ಷಿಕೆ ಹಾಕಿದ್ದಾರೆ.
89
ರಕ್ಷಿತಾ ಹೇಳೋದೇನು?
ರಕ್ಷಿತಾ ಹಾಗೂ ಧ್ರುವಂತ್ ಗಲಾಟೆ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ರಕ್ಷಿತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನನ್ನ ಹಾಗೆಯೇ. ನಮ್ಮಿಬ್ಬರದ್ದು ಒಂದೇ ರಾಶಿ, ನಕ್ಷತ್ರ. ಇಬ್ಬರೂ ಹಠ ಬಿಡುವವರಲ್ಲ. ಆದ್ರೆ ಕೊನೆಯಲ್ಲಿ ಧ್ರುವಂತ್ ಹೊಂದಿಕೊಂಡ್ರು. ಇದು ಒಂದು ಒಳ್ಳೆ ನೆನಪು ಅಂತ ರಕ್ಷಿತಾ ಹೇಳಿದ್ದಾರೆ.
99
ಮುಂದೇನು?
ಬಿಗ್ ಬಾಸ್ 12 ಮುಗಿದಿದೆ. ಎಲ್ಲ ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಸದ್ಯ ಮಿಡಿಯಾಗಳಲ್ಲಿ ಇಂಟರ್ವ್ಯೂ ನೀಡ್ತಾ, ಸೆಲೆಬ್ರೆಟ್ ಮಾಡ್ತಿರುವ ಸ್ಪರ್ಧಿಗಳಿಗೆ ಒಂದಿಷ್ಟು ಅವಕಾಶ ಸಿಗುವ ಸಾಧ್ಯತೆ ಇದೆ. ರಕ್ಷಿತಾ ಸಿನಿಮಾ ಮಾಡುವ ಆಸೆ ಇಲ್ಲ ಎಂದಿದ್ದು,ಧ್ರುವಂತ್ ಸಿನಿಮಾ, ಸೀರಿಯಲ್ ಗೆ ಕಾಯ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.