ಬಿಗ್‌ಬಾಸ್ ಸೀಸನ್ 13ರ ಮನೆಯಲ್ಲಿ ಆಸಿಯಾ ಫಿರ್ದೋಸ್ ಅವರು ಸೌಂದರ್ಯಾಗೆ ನಾಮಿನೇಷನ್ ಚೂರಿ ನೀಡಿದ್ದು, ದೊಡ್ಡ ತಿರುವು ತಂದಿದೆ. ಇದರಿಂದ ಗಾನವಿ ಮತ್ತು ಸೌಂದರ್ಯಾ ನಡುವೆ ವೈಯಕ್ತಿಕ ಹಾಗೂ ರಿಲೇಶನ್‌ಶಿಪ್ ಬಗ್ಗೆ ತೀವ್ರ ವಾಗ್ದಾಳಿ ನಡೆದಿದೆ.
ಸೀಸನ್ 13ರ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದ್ದು, ಸ್ಪರ್ಧಿಗಳು ವೀಕ್ಷಕರ ಊಹೆಗೂ ಮೀರಿ ಆಟವಾಡುತ್ತಿದ್ದಾರೆ. ಸದ್ಯ ಮನೆ ಮೂವರು ಯುವರಾಣಿಯರ ಹಿಡಿತದಲ್ಲಿದ್ದು, ನಾಮಿನೇಷನ್ ಪ್ರಕ್ರಿಯೆ ಟಾಸ್ಕ್‌ಗಳು ಸ್ಪರ್ಧಿಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗುತ್ತಿವೆ.
25
ತಂತ್ರಗಾರಿಕೆ ಬದಲಿಸಿದ ಆಸಿಯಾ ಫಿರ್ದೋಸ್
ಟಾಸ್ಕ್ ಗೆದ್ದವರು ತಮ್ಮ ಎದುರಾಳಿ ಯುವರಾಣಿಗೆ ನಾಮಿನೇಷನ್ ಮಾಡುವ ಅಧಿಕಾರ ನೀಡುತ್ತಾರೆ. ಚೂರಿ ಹಸ್ತಾಂತರಿಸುವ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. ಚೂರಿ ಪಡೆಯುವ ಯುವರಾಣಿ, ತನ್ನದೇ ಸದಸ್ಯರೊಬ್ಬರನ್ನು ಸೂಕ್ತ ಕಾರಣಗಳನ್ನೀಡಿ ನಾಮಿನೇಷನ್ ಮಾಡಬೇಕು. ಇದೀಗ ಈ ಚೂರಿಯನ್ನು ಆಸಿಯಾ ಫಿರ್ದೋಸ್ ಅವರು ಸೌಂದರ್ಯಾ ಶೆಟ್ಟಿಗೆ ಹಸ್ತಾಂತರಿಸಿದ್ದಾರೆ.
35
ವೈಯಕ್ತಿಕ ಹಂತಕ್ಕೆ ತಲುಪಿದ ಜಗಳ
ಈ ಮೊದಲು ಮೈತ್ರಿ ಬಗ್ಗೆ ಆಸಿಯಾ ಮತ್ತು ಸೌಂದರ್ಯಾ ನಡುವೆ ಮಾತುಕತೆ ನಡೆದಿತ್ತು. ಆದ್ರೆ ಟಾಸ್ಕ್ ಗೆದ್ದ ಆಸಿಯಾ ಬಿಗ್‌ಟ್ವಿಸ್ಟ್ ನೀಡಿದ್ದು, ಸೌಂದರ್ಯಾ ಶಾಕ್ ಆಗಿದ್ದಾರೆ. ಇದರಿಂದ ಖುಷಿಯಾದ ಗಾನವಿ, ತಮ್ಮ ಮೊಣಚು ಮಾತುಗಳಿಂದಲೇ ಸೌಂದರ್ಯಾರನ್ನು ಟೀಕಿಸಿದ್ದಾರೆ. ಈ ಜಗಳ ವೈಯಕ್ತಿಕ ಹಂತಕ್ಕೆ ತಲುಪಿದ್ದು, ಚೂರಿಗಿಂತ ಇಬ್ಬರ ಮಾತುಗಳು ಹರಿತವಾಗಿವೆ.
ನಮ್ಮ ಬಣ ಒಂದಾಗಿ ಆಟವಾಡುತ್ತಿದ್ರೆ, ಮತ್ತೊಂದು ಬಣದವರು ತಂಡವಾಗಿ ಆಟವಾಡ್ತಿದ್ದಾರೆ. ನಾಮಿನೇಟ್ ಆದ್ರೂ ಪರವಾಗಿಲ್ಲ. ನನಗೆ ಇಂತಹ ಗೆಲುವು ಬೇಡ ಎಂದು ಗುಡುಗುತ್ತಾರೆ. ಇದೇ ಪ್ರೋಮೋದಲ್ಲಿ ಗಾನವಿ ಗೌಡ, ಮೊದಲು ಕನ್ನಡ ಕಲಿತುಕೋ, ನಿನ್ನನ್ನು ಮನೆಯಿಂದ ಹೊರಗೆ ಕಳುಹಿಸುತ್ತೇನೆ. ಆಟಕ್ಕಾಗಿ ರಿಲೇಶನ್‌ಶಿಪ್ ಮಾಡಿಕೊಳ್ಳುತ್ತೀಯಾ ಎಂದು ಗಂಭೀರ ಆರೋಪ ಮಾಡುತ್ತಾರೆ.
55
ಮಂಜ-ಮಂಜಿ ಕಾರ್ನರ್ ಸ್ಟೋರಿ
ರಿಲೇಶನ್‌ಶಿಪ್ ಮಾತುಗಳಿಗೆ ನಿಗಿನಿಗಿ ಕೆಂಡವಾದ ಸೌಂದರ್ಯಾ ಶೆಟ್ಟಿ, ಹೊರಗೆ 8 ವರ್ಷಗಳ ರಿಲೇಶನ್‌ಶಿಪ್ ಇಟ್ಕೊಂಡು, ಇಲ್ಲಿ ಗುಳು ಗುಳು ಮಾಡ್ತೀಯಾ ಎಂದು ತೀರಾ ಖಾಸಗಿ ವಿಷಯಗಳನ್ನಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದ್ಗಾರೆ. ಕಳೆದ ಒಂದು ವಾರದಿಂದ ಬಿಗ್‌ಬಾಸ್ ಮನೆಯಲ್ಲಿ ಮಂಜ-ಮಂಜಿ ಕಾರ್ನರ್ ಸ್ಟೋರಿ ಶುರುವಾಗಿತ್ತು. ಈ ವಿಷಯದ ಬಗ್ಗೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ನೇರವಾಗಿಯೇ ಚರ್ಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.