ಬಿಗ್ ಬಾಸ್ 'ನಾಯಿ ಬಾಲಕ್ಕೇಕೆ ದಬ್ಬೆ ಕಟ್ಟೋ ಪ್ರಯತ್ನ ಮಾಡ್ತಿದ್ದಾರೆ?' ಮತ್ತೆ ಹಳೆ ಚಾಳಿ ಆರಂಭಿಸಿದ ಮಂಜ!

Published : Nov 17, 2026, 04:54 PM IST

ಬಿಗ್ ಬಾಸ್ ಕನ್ನಡ 13ಕ್ಕೆ ಮರಳಿದ ಮಾಡ್ರನ್ ಮಹಾಕವಿ ಮಂಜ ಮತ್ತೆ ಜಗದೀಶ್‌ಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ. ವೀಕ್ಷಕರು ಬಿಗ್ ಬಾಸ್ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ. ಗಾನವಿ-ಜಗದೀಶ್ ಜಗಳ ಹಾಗೂ ವೀಕ್ಷಕರ ಆಕ್ರೋಶದ ಸಂಪೂರ್ಣ ವರದಿ ಇಲ್ಲಿದೆ.

PREV
15
ಹಳೆ ಚಾಳಿ ಆರಂಭಿಸಿದ ಬಿಗ್ ಬಾಸ್ ಮಂಜ

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈಗಾಗಲೇ ಸಹ ಸ್ಪರ್ಧಿಗಳಿಗೆ ವೈಯಕ್ತಿಕ ನಿಂದನೆ ಹಾಗೂ ಮನೆಯವರಿಗೂ ಒಮ್ಮೆ ಬಾಯಿಗೆ ಬಂದಂತೆ ಬೈದು ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಹೋಗಿದ್ದ ಮಾಡ್ರನ್ ಮಹಾಕವಿ ಮಂಜನನ್ನು ಪುನಃ ವಾಪಸ್ ಮನೆಯೊಳಗೆ ಕರೆಸಿಕೊಂಡಿದೆ. ಮಂಜ ಬೈದಿದ್ದೇನು ರೆಡ್ ಕಾರ್ಡ್ ತೋರಿಸುವಷ್ಟು ದೊಡ್ಡ ತಪ್ಪಲ್ಲ ಎಂದು ಕ್ಷಮಿಸಿ ಮನೆಯೊಳಗೆ ಕಳಿಸಿದ್ದಕ್ಕೆ ಪುನಃ ಅದೇ ಬೈಗುಳ ಮತ್ತು ವೈಯಕ್ತಿಕ ನಿಂದನೆ ಮಾಡುವ ಚಾಳಿಯನ್ನು ಮುಂದುವರೆಸಿದ್ದಾನೆ.

ನಾಯಿ ಬಾಲಕ್ಕೆ ಡಬ್ಬೆ ಕಟ್ಟಿದ್ರೂ ನೆಟ್ಟಗಾಗಲ್ಲ ಅನ್ನೋದು, ಗೊತ್ತಿದ್ದರೂ ಬಿಗ್ ಬಾಸ್ ತಂಡವದವರೇಕೆ ಬಾಲಕ್ಕೆ ದಬ್ಬೆ ಕಟ್ಟಿ ನೆಟ್ಟಗೆ ಮಾಡುವ ಪ್ರಯತ್ನ ಮಾಡ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ವೀಕ್ಷಕರ ಪ್ರಶ್ನೆಯಾಗಿದೆ.

25
ಯುವರಾಣಿ ಟಾಸ್ಕ್‌ನಲ್ಲಿ ಗುಣಗಾನ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಮೂವರು ಯುವರಾಣಿಯನ್ನು ನೇಮಕ ಮಾಡಿ ಅವರ ಬೆಂಬಲಕ್ಕೆ ಒಂದೊಂದು ತಂಡವನ್ನು ನಿಯೋಜನೆ ಮಾಡಿ ಈ ಪೈಕಿ ಒಬ್ಬರನ್ನು ವಾರಾಂತ್ಯದ ವೇಳೆ ಮಹಾರಾಣಿ ಮಾಡಬೇಕು. ಇದಕ್ಕಾಗಿ ಹಲವು ಟಾಸ್ಕ್ ಹಾಗೂ ಚಟುವಟಿಕೆಗಳನ್ನು ಮಾಡಬೇಕಿದೆ. ಈ ನಡುವೆ ಯುವರಾಣಿ ಗಾನವಿ ಅವರ ತಂಡದ ಪ್ರತಿಯೊಬ್ಬ ಸೇನಾನಿಗಳು ತಮ್ಮ ಯುವರಾಣಿಯನ್ನು ಓಲೈಸುವಂತೆ ಗುಣಗಾನ ಮಾಡಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡುತ್ತಾರೆ.

35
ಮಾನ ಮರ್ಯಾದೆ ಇಲ್ಲದವಳು

ಆದರೆ, ಗಾನವಿ ಅವರ ಯಾವೊಬ್ಬ ಸೇನಾನಿಗಳಿಗೂ ಯುವರಾಣಿ ಓಲೈಕೆ ಮಾಡುವಂತೆ ಗುಣಗಾನ ಮಾಡುವುದಕ್ಕೆ ಇಷ್ಟವೇ ಇರಲಿಲ್ಲ. ಇದನ್ನು ಸ್ವತಃ ಯುವರಾಣಿ ಗಾನವಿ ಹೇಳಿಕೊಂಡು ಗೋಳಾಡುತ್ತಾರೆ. ಇದರ ನಡುವೆ ಜಗದೀಶ್ ಅವರಿಗೆ ಯುವರಾಣಿಯನ್ನು ಗುಣಗಾನ ಮಾಡುವಂತೆ ಹೇಳಿದರೆ 'ನಾನು ಅಡುಗೆ ಮಾಡಬೇಕು, ಲೇಟ್ ಆಗುತ್ತದೆ' ಎಂದು ಹೇಳುತ್ತಾರೆ.

ಆಡ್ಕೋಳೋಕೆ ಇನ್ನೊಂದು ಹೆಸರೇ ಜಗ್ಗಿ, ಕುಣಿಲಾರದವಳಿಗೆ ನೆಲ ಡೊಂಕು ಅಂದಂಗೆ ಆಡ್ತಿದೀಯ ಎಂದು ಗಾನವಿ ಅವರು ಕೋಪದಿಂದ ಹೇಳುತ್ತಾರೆ. ಇದರಿಂದ ಸಿಟ್ಟಾದ ಜಗದೀಶ್ "ನೀನು ನಡಿ ಬಾಯಿ ಮುಚ್ಕೊಂಡು, ನಿನ್ನ ಬಾಯಿ ಹೊಲಸು, ಬಚ್ಚಲು ಬಾಯಿ, ಮಾನ ಮರ್ಯಾದೆ ಇಲ್ಲದಿರುವವಳು ನೀನು" ಎಂದೆಲ್ಲಾ ಬೈಯುತ್ತಾರೆ.

45
ಮಾಡಿರೋದು ಒಂದೇ ಫಿಲಂ, ಏನು ಕಡಿದು ಕಟ್ಟೆ ಹಾಕಿದ್ದೀಯ?

ಇದರಿಂದ ತೀವ್ರ ಕೋಪಗೊಂಡ ಗಾನವಿ, ಜಗದೀಶ್ ವಿರುದ್ಧ ಹರಿಹಾಯ್ದು ಪ್ರಶ್ನೆ ಮಾಡಲು ಬರುತ್ತಾರೆ. ಕೈಗೆ ಸಿಕ್ಕ ಒಂದು ವಸ್ತುವನ್ನು ಎತ್ತಿಕೊಂಡು ಹೊಡೆಯುವವರೆಂತೆ ಬರುತ್ತಾದೆ. ಜಗಳ ಬಿಡಿಸಲು ಮಧ್ಯದಲ್ಲಿ ಬಂದ ಮಾಡ್ರನ್ ಮಹಾಕವಿ ಮಂಜನಿಗೆ, ಜಗದೀಶ್ ನಾವಿಬ್ಬರೂ ಮಾತನಾಡುವಾಗ ಮಧ್ಯದಲ್ಲಿ ಬರಲು ನೀನ್ಯಾರು ಎಂದು ಕೇಳುತ್ತಾರೆ. ಇದರಿಂದ ಮಾತಿನ ಸ್ಥಿಮಿತವನ್ನು ಕಳೆದುಕೊಂಡ ಮಂಜ, "ನೀನೊಬ್ಬ ವೇಸ್ಟ್ ನನ್ಮಗ, ನೀನು ಮಾಡಿರೋದು ಒಂದೇ ಫಿಲಂ, ಏನು ಕಡಿದು ಕಟ್ಟೆ ಹಾಕಿದ್ದೀಯ? ಗಂಡಸಿನ ತರಹ ನಡೆದುಕೊಳ್ಳಬೇಕು. ನಿನಗ್ಯಾರು ಗೌರವ ಕೊಡ್ತಾರೆ ಲೇ" ಎಂದು ಬೈಯುತ್ತಾರೆ.

55
ನಾಯಿ ಬಾಲಕ್ಕೆ ಡಬ್ಬಿ ಕಟ್ಟೋ ಪ್ರಯತ್ನ

ಈ ಹಿಂದೆಯೂ ಮಂಜ ಯಶಸ್, ಸೌಂದರ್ಯ ಶೆಟ್ಟಿ, ಗಗನ್, ಧನುಷ್, ಕಿರಣ್ ಹಾಗೂ ಹಲವರಿಗೆ ಬಾಯಿ ಮೇಲೆ ಹಿಡಿತವಿಲ್ಲದಂತೆ ಬೈದು ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾನೆ. ಇದರ ಬೆನ್ನಲ್ಲಿಯೇ ಮಂಜ ಅವರನ್ನು ಎಲಿಮಿನೇಟ್ ಮಾಡಿ ಮನೆಯಿಂದ ಹೊರಗೆ ಕಳಿಸಲಾಗುತ್ತದೆ. ಕಳೆದ ವಾರದಿಂದ ಪುನಃ ಮಂಜನಿಗೆ ಮತ್ತೊಂದು ಚಾನ್ಸ್ ಕೊಟ್ಟು ಮನೆಯೊಳಗೆ ಕಳಿಸುತ್ತಾರೆ.

ಮತ್ತದೇ ಚಾಳಿಯನ್ನು ಮುಂದುವರೆಸಿದ ಮಂಜ ಜಗದೀಶ್ ಅವರಿಗೆ ವೈಯಕ್ತಿನ ನಿಂದನೆ ಮಾಡಿದ್ದಾನೆ. ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ ನೆಟ್ಟಗಾಗೊಲ್ಲ ಎನ್ನುವಂತೆ ಮಂಜನಿಗೆ ಮಾತಿನ ಮೇಲೆ ಹಿಡಿತ ಬರಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಆದರೂ, ಮಂಜನಿಗೆ ಚಾನ್ಸ್ ಕೊಟ್ಟು ಎಲ್ಲರನ್ನೂ ನಿಂದನೆ ಮಾಡಿಸುವುದು ಏಕೆ ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories