ಗಿಲ್ಲಿನ ಮದ್ವೆಯಾಗ್ತೀರಾ ಎಂದು Bigg Boss ಕಾವ್ಯಾನ ಕೇಳಿದ ಪುಟಾಣಿ: ಆದ್ರೆ ಆಗಿದ್ದೇ ಬೇರೆ

Published : Apr 16, 2026, 01:23 PM IST

ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು  ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ  ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. 

PREV
16
ಗಿಲ್ಲಿ ನಟ ಮತ್ತು ಕಾವ್ಯಾ ಶೈವ

ಬಿಗ್​ಬಾಸ್​ (Bigg Boss) ನಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಎಂದರೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ. ಆಟಕ್ಕೋಸ್ಕರ ಬಿಗ್​ಬಾಸ್ ಮನೆಯಲ್ಲಿ ಒಂದಷ್ಟು ದಿನ ತಮಾಷೆ ಎಲ್ಲವೂ ನಡೆದಿತ್ತು. ಆದರೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದೆಲ್ಲಾ ಸುದ್ದಿ ಹರಡಿತ್ತು. ಎಷ್ಟೋ ಮಂದಿ ಇವರಿಬ್ಬರ ಮದುವೆ ಮಾಡಿಸಿ, ಎಐ ಮೂಲಕ ಮಕ್ಕಳನ್ನೂ ಮಾಡಿಸಿದ್ದಾರೆ.

26
ವೀಕ್ಷಕರೇ ಮದ್ವೆ ಮಾಡಿಸ್ತಾರೆ

ಅಷ್ಟಕ್ಕೂ ಯಾವುದೇ ಸೀರಿಯಲ್​ ಅಥವಾ ರಿಯಾಲಿಟಿ ಷೋನಲ್ಲಿ ಒಂದು ಜೋಡಿ ವೀಕ್ಷಕರಿಗೆ ಇಷ್ಟ ಆಯ್ತು ಎಂತಾದರೆ, ರಿಯಲ್​ ಲೈಫ್​ನಲ್ಲಿ ಅವರಿಬ್ಬರೂ ಮದುವೆಯಾಗದೇ ಇದ್ದರೆ, ತಾವೇ ಮದುವೆ ಮಾಡಿಸಿಬಿಡುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕೊನೆಗೆ ದಮ್ಮಯ್ಯ ಎಂದು ವೀಕ್ಷಕರ ಕಾಲು ಹಿಡಿಯುವ ಪ್ರಸಂಗವೂ ಕೆಲವೊಮ್ಮೆ ನಟ-ನಟಿಯರಿಗೆ ಬರುವುದು ಉಂಟು.

36
ಚಿಕ್ಕ ಮಕ್ಕಳ ಬಾಯಲ್ಲಿ

ಆದರೆ, ಹಾಸ್ಯದ ಹೆಸರಿನಲ್ಲಿ ಚಿಕ್ಕ ಮಕ್ಕಳ ಬಾಯಲ್ಲಿಯೂ ಮದುವೆ, ಲವ್​ ಎಂದೆಲ್ಲಾ ಹೇಳಿಸುವ ವಿಷಯ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

46
ರಿಯಾಲಿಟಿ ಷೋಗಳ ರಿಯಾಲಿಟಿ!

ಗಿಚ್ಚಿಗಿಲಿಗಿಲಿ ಷೋನಲ್ಲಿ ಬಿಗ್​ಬಾಸ್​​ನ ಕಾವ್ಯಾ ಶೈವ ಮತ್ತು ಸ್ಪಂದನಾ ಅತಿಥಿಯಾಗಿ ಬಂದಿದ್ದಾರೆ. ಇದು ಹೆಸರಿಗೆ ಚಿಕ್ಕಮಕ್ಕಳ ಷೋ. ಹಲವಾರು ಮಕ್ಕಳು ತಮ್ಮ ಟ್ಯಾಲೆಂಟ್​ ತೋರಿಸಲು ಇಂಥ ವೇದಿಕೆ ಅವಕಾಶ ಕಲ್ಪಿಸುತ್ತಿದೆ ನಿಜ. ಆದರೆ ಪ್ರತಿಯೊಂದು ರಿಯಾಲಿಟಿ ಷೋನಲ್ಲಿಯೂ ಮಕ್ಕಳು ಮಾತನಾಡುವುದು ರಿಯಲ್​ ಎಂದು ವೀಕ್ಷಕರಿಗೆ ತೋರಿಸಿದರೂ, ಅದು ಮೊದಲೇ ಅವರಿಗೆ ಹೇಳಿಕೊಟ್ಟಿರುತ್ತಾರೆ. ಆದರೆ ವೀಕ್ಷಕರಿಗೆ ಅದು ಅರ್ಥವಾಗುವುದಿಲ್ಲವಷ್ಟೇ. ಅದಕ್ಕೆ ತಕ್ಕಂತೆ ಅಲ್ಲಿರುವ ತೀರ್ಪುಗಾರರೂ ಇದೇ ಮೊದಲ ಬಾರಿಗೆ ಕೇಳಿದಂತೆ ಬಿದ್ದೂ ಬಿದ್ದೂ ನಗುವುದು ನಡೆದೇ ಇರುತ್ತದೆ. ಇದರ ಹೆಸರೇ ರಿಯಾಲಿಟಿ ಷೋ.

56
ಬಾಲಕಿಯ ಪ್ರಶ್ನೆ

ಇದೀಗ ಈ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕಿಗೆ ಇದೇ ಪ್ರಶ್ನೆಯನ್ನು ಕೇಳಿಸಲಾಗಿದೆ. ಮದುವೆ, ಲವ್​ ಎಂದರೇನು ಎಂದೇ ಆಕೆಗೆ ಗೊತ್ತಿದ್ದಂತೆ ಇಲ್ಲ. ಆದರೆ ಈ ಬಾಲಕಿ ಕಾವ್ಯಾ ಶೈವಗೆ ನೀವು ಗಿಲ್ಲಿನ ಮದ್ವೆಯಾಗ್ತೀರಾ ಎಂದು ಕೇಳುತ್ತಾಳೆ. ಅದು ಭಾರಿ ಜೋಕ್​ ಎನ್ನುವಂತೆ ಅಲ್ಲಿರುವ ತೀರ್ಪುಗಾರರು ಬಿದ್ದೂ ಬಿದ್ದೂ ನಗುತ್ತಾರೆ.

66
ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ

ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ವ್ಹಾವ್​ ಮಗುವಿನದ್ದು ಏನು ಟ್ಯಾಲೆಂಟ್​ ಎನ್ನುತ್ತಿದ್ದರೆ, ರಿಯಾಲಿಟಿ ಷೋಗಳ ರಿಯಾಲಿಟಿ ತಿಳಿದವರು ಮಾತ್ರ ಹಾಸ್ಯದ ಹೆಸರಿನಲ್ಲಿ ಈ ರೀತಿ ಮಕ್ಕಳ ಬಾಯಲ್ಲಿ ಹೇಳುವುದು ನಿಲ್ಲಬೇಕು. ಒಂದು ವೇಳೆ ಇದನ್ನೇ ಹಾಸ್ಯ ಎಂದು ತಿಳಿಯುವುದಾದರೆ, ಜಡ್ಜಸ್​ ಬಾಯಲ್ಲೋ ಅಥವಾ ಆ್ಯಂಕರ್​ಗಳ ಮೂಲಕವೋ ಹೇಳಿಸಿ. ಇದು ದೊಡ್ಡ ವಿಷ್ಯ ಅಲ್ಲವಾದರೂ, ಇದೇ ರೀತಿಯ ಹಲವಾರು ಮಾತುಗಳು ಕೆಲವು ರಿಯಾಲಿಟಿ ಷೋಗಳಲ್ಲಿ ಮಕ್ಕಳ ಬಾಯಲ್ಲಿ ಹೇಳಿಸುವುದು ಸರಿ ಕಾಣುವುದಿಲ್ಲ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories