Bigg Boss Dhanushree: ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಧನುಶ್ರೀ ಅವರ ಶಾಪ್‌ನಲ್ಲಿ ಕಳ್ಳತನ ಆಗಿದೆ. ಮಂತ್ರಿ ಮಾಲ್‌ನಲ್ಲಿ ಅವರು ನೇಲ್ ಶಾಪ್ ಹಾಕಿದ್ದರು. ಒಟ್ಟೂ 80000 ರೂಪಾಯಿ ಮೌಲ್ಯದ ವಸ್ತು ಕಳ್ಳತನ ಆಗಿದೆ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಧನುಶ್ರೀ ಹೇಳಿದ್ದರು.
ಓರ್ವ ವ್ಯಕ್ತಿ ಮೇಲೆ ಡೌಟ್ ಇದ್ದು, ಅಧಿಕೃತ ಆದ್ಮೇಲೆ ಹೇಳ್ತೀವಿ. ಕಳ್ಳತನ ಆಗಿದೆ ಎಂದು ತಂದೆ-ತಾಯಿ ಬೇಸರ ಮಾಡಿಕೊಂಡಿದ್ದಾರೆ. ಒಳ್ಳೆತನ ಇಟ್ಟುಕೊಂಡಿದ್ದಕ್ಕೆ ನಮಗೆ ಹೀಗೆ ಆಗ್ತಿದೆಯಾ ಎಂದು ಅವರು ಬೇಸರ ಹೊರಹಾಕಿದ್ದಾರೆ. ಒಂದು ಸುಳ್ಳು ಹೇಳಿದರೂ ಕೂಡ ಹೀಗೆ ಸುಳ್ಳು ಹೇಳಿದ್ವಾ ಎಂದು ವಾರಗಟ್ಟಲೇ ಬೇಸರ ಮಾಡಿಕೊಳ್ತೀವಿ ಎಂದು ಧನುಶ್ರೀ ಹೇಳಿದ್ದಾರೆ.
25
70 ಲಕ್ಷ ರೂಪಾಯಿ ಕಳ್ಳತನ
ಆರಂಭದಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳ್ಳತನ ಆಗಿದೆ ಎಂದುಕೊಂಡೆ. ಆಮೇಲೆ 70 ಲಕ್ಷ ರೂಪಾಯಿ ಎಂದು ಗೊತ್ತಾಯ್ತು. ಇನ್ನೂ ಕೂಡ ಅಂಗಡಿಯಲ್ಲಿ ಎಷ್ಟು ಮೌಲ್ಯದ ವಸ್ತು ಕಳ್ಳತನ ಆಗಿದೆ ಎಂದು ಅಧಿಕೃತವಾಗಿ ಗೊತ್ತಾಗಬೇಕು. ಜನರು ಕೂಡ ಆ ವ್ಯಕ್ತಿ ಬಗ್ಗೆ ಡೌಟ್ ಹೊರಹಾಕಿದ್ದರು ಎಂದು ಧನುಶ್ರೀ ಹೇಳಿದ್ದಾರೆ.
35
ನನಗೆ ಪಾಠ ಮಾಡಬೇಡಿ
ಅಂಗಡಿಯಲ್ಲಿದ್ದ ನೇಲ್ ವಸ್ತುಗಳು, ಬಿಲ್ಲಿಂಗ್ ಮಶಿನ್ ಸಮೇತ ಎಲ್ಲವೂ ಕಳ್ಳತನ ಆಗಿದೆ. ಎಷ್ಟು ಹುಷಾರಾಗಿರಬೇಕು ಎಂದು ಪಾಠ ಕಲಿಸುವುದು ಎಂದು ಧನುಶ್ರೀ ಹೇಳಿದ್ದಾರೆ. ಕೇರ್‌ಲೆಸ್ ಆಗಿರಬೇಡಿ, ಹುಷಾರಾಗಿರಿ ಎಂದು ಕಾಮೆಂಟ್ ಹಾಕಬೇಡಿ, ನನಗೆ ಉರಿದಿದೆ ಎಂದು ಧನುಶ್ರೀ ಹೇಳಿದ್ದಾರೆ.
ಮಾಲ್‌ನಲ್ಲಿ ಸಿಸಿ ಕ್ಯಾಮರಾ ಹಾಳಾಗಿದೆ. ಅದನ್ನು ಕೂಡ ಚೆಕ್ ಮಾಡಬೇಕು, ಆಮೇಲೆ ಯಾರು ಕಳ್ಳರು ಎಂದು ಗೊತ್ತಾಗುವುದು ಎಂದು ಧನುಶ್ರೀ ಹೇಳಿದ್ದಾರೆ. ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೇ ಕದ್ದಿದ್ದಾನೆ ಎಂದು ಡೌಟ್ ಇದೆ, ಒಳ್ಳೆಯತನದ ಬಗ್ಗೆ ಯೋಚನೆ ಮಾಡಿ ಕೆಲಸ ಕೊಟ್ಟೆವು, ಹೀಗೆ ಆಗಿದೆ ಎಂದು ಧನುಶ್ರೀ ಹೇಳಿದ್ದಾರೆ.
55
ದೇವರೆ ಪಾಠ ಕಲಿಸ್ತಾನೆ
ನಾನು ಈಗ ಮದುವೆ ಆಗಿ ಗಂಡನ ಜೊತೆ ಇರೋ ಟೈಮ್ ಆಗಿತ್ತು. ಈ ಟೈಮ್‌ನಲ್ಲಿ ಮಗಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾಳೆ ಎಂದು ಧನುಶ್ರೀ ಅವರು ಬೇಸರ ಹೊರಹಾಕಿದ್ದಾರೆ. ಅಂದಹಾಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ನಾಲ್ಕು ಗಂಟೆಗೆ ಕಳ್ಳ ಹಾಗೂ ವಸ್ತುಗಳು ಸಿಕ್ಕಿವೆ. ಇನ್ನು ಕೋರ್ಟ್ ಎಂದು ಮುಂದುವರೆಯೋದಿಲ್ಲ, ದೇವರೇ ಅವರಿಗೆ ಪಾಠ ಕಲಿಸ್ತಾನೆ ಎಂದು ಧನುಶ್ರೀ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.