ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ದೊಡ್ಮನೆಯಿಂದ ಸೀದಾ ಪೊಲೀಸ್ ಠಾಣೆಗೆ ಹೋಗಬೇಕಾಗಿ ಬರಬಹುದು. ಮರುಕಳಿಸತ್ತಾ ಬಿಗ್ಬಾಸ್ 10ನೇ ಸೀಸನ್?
ಬಿಗ್ಬಾಸ್ನ (Bigg Boss) 10ನೇ ಸೀಸನ್ ಇಂದಿಗೂ ಸದ್ದು ಮಾಡ್ತಿರೋದಕ್ಕೆ ಕಾರಣಗಳಲ್ಲಿ ಒಂದು ವರ್ತೂರು ಸಂತೋಷ್ ಅವರ ವಿರುದ್ಧದ ಹುಲಿಯುಗುರು ಪ್ರಕರಣ. ಅರಣ್ಯ ಕಾಯ್ದೆಗೆ ವಿರುದ್ಧವಾಗಿ ಅವರು ಹುಲಿಯ ಉಗುರನ್ನು ಧರಿಸಿರುವುದಾಗಿ ಆರೋಪಿಸಿ ದೂರು ದಾಖಲಾಗಿತ್ತು. ಅವರನ್ನು ಬಿಗ್ಬಾಸ್ ಮನೆಯಿಂದಲೇ ಸೀದಾ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೀಗ 12ನೇ ಈ ಸೀಸನ್ನಲ್ಲಿಯೂ ಇದೇ ಮರುಕಳಿಸುತ್ತಾ ಎನ್ನುವ ಸಂಶಯ ಎದುರಾಗಿದೆ.
26
ಅಶ್ವಿನಿ ಗೌಡ ವಿರುದ್ಧ ದೂರು
ಇದೀಗ ಅಶ್ವಿನಿ ಗೌಡ (Bigg Boss Ashwini Gowda) ಅವರ ಮೇಲೆ ಕೇಸೊಂದು ದಾಖಲಾಗಿದೆ. ಅದಕ್ಕೆ ಕಾರಣ ಅವರು ರಕ್ಷಿತಾ ಶೆಟ್ಟಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿರುವುದು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆಥಲ್ ಅಶ್ವಿನಿ ಗೌಡ ವಿರುದ್ಧ ದೂರು ನೀಡಿದ್ದಾರೆ.
36
ಕ್ಲಾರಿಫಿಕೇಷನ್ ಬೇಕೆಂದ ವಕೀಲ
ರಕ್ಷಿತಾ ಅವರು 'ಎಸ್' ಕೆಟಗರಿ ಎಂದು ನೇರವಾಗಿಯೇ ಬೈದಿದ್ದಾರೆ ಅಶ್ವಿನಿ. ಇದು ಸ್ಲಂ ಅಥವಾ SC ST ಎಂದು ಸೂಚಿಸುತ್ತದೆ. ಇವೆರಡೂ ವೈಯಕ್ತಿಕ ನಿಂದನೆ, ಜಾತಿ ನಿಂದನೆ ಆಗಿದೆ. ಈ ಬಗ್ಗೆ ಅಶ್ವಿನಿ ಗೌಡ ಅವರು ಕ್ಲಾರಿಫಿಕೇಶನ್ ಕೊಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಂಥ ಶಬ್ದಗಳ ಬಳಕೆಯನ್ನು ಯಾರೇ ಮಾಡಿದ್ದರೂ ಅದನ್ನು ಡಿಲೀಟ್ ಮಾಡುವ ಅವಕಾಶವಿದೆ. ಆದರೆ ಹಾಗೆ ಮಾಡದೇ ನೇರವಾಗಿಯೇ ಪ್ರಸಾರ ಮಾಡಿರುವ ಕಾರಣದಿಂದ ಕಲರ್ಸ್ ಚಾನೆಲ್‌ನ ಬಿಗ್ ಬಾಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಅಥವಾ ಶೋ ಡೈರೆಕ್ಟರ್ ಪ್ರಕಾಶ್ ಅವರೂ ಈಗ ಪೇಚಿಗೆ ಸಿಲುಕಿದ್ದಾರೆ. ಇವರ ಮೇಲೆಯೂ ಬಿಡದಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ.
56
ವಿಚಾರಣೆಗೆ ಕರೆಯುವ ಸಾಧ್ಯತೆ
ಇದೇ ಕಾರಣಕ್ಕೆ ಅಶ್ವಿನಿ ಗೌಡ ಸೇರಿದಂತೆ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾದರೆ ಅವರು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬರಲೇಬೇಕಿದೆ. ಬಿಗ್ಬಾಸ್ನಲ್ಲಿ ಇಂಥವರು ಇರುವ ಕಾರಣದಿಂದಲೇ ಟಿಆರ್ಪಿ ರೇಟ್ ಕೂಡ ಹೆಚ್ಚಾಗುವ ಕಾರಣ, ಸದ್ಯ ಎಲಿಮಿನೇಟ್ ಆಗುವುದು ಡೌಟ್ ಎನ್ನಲಾಗಿದೆ.
66
ಮುಂದಿನ ಪ್ರಕ್ರಿಯೆ ಏನು?
ಪೊಲೀಸ್ ವಿಚಾರಣೆಯನ್ನು ಎದುರಿಸಿ ಪುನಃ ಅವರು ಬಿಗ್ಬಾಸ್ ಮನೆಯೊಳಕ್ಕೆ ಬರುವ ಸಾಧ್ಯತೆಯೂ ಇನ್ನೊಂದೆಡೆ ಇದೆ. ಆದರೆ ಸದ್ಯ ಯಾವುದೇ ಮಾಹಿತಿಯೂ ಹೊರಬಂದಿಲ್ಲ. ಅವರ ವಿರುದ್ಧ ದೂರು ದಾಖಲಾಗಿದೆ ಎನ್ನುವುದು ಬಿಟ್ಟರೆ, ಮುಂದಿನ ಪ್ರಕ್ರಿಯೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.