Brahmagantu: ದಿಶಾನೇ ದೀಪಾ ಎನ್ನೋ ಸತ್ಯ ಅಕ್ಕ ರೂಪಂಗೆ ಗೊತ್ತಾಗತ್ತಾ? ಏನಿದು ಟ್ವಿಸ್ಟ್‌?

Published : Oct 13, 2025, 08:32 PM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾ ಈಗ ದಿಶಾಳಾಗಿ ಸೌಂದರ್ಯಗೆ ಸವಾಲು ಹಾಕುತ್ತಿದ್ದಾಳೆ. ತನ್ನ ಸಹೋದರಿ ರೂಪಾಳನ್ನು ಸೌಂದರ್ಯ ಅವಮಾನಿಸಿದಾಗ, ದೀಪಾ ಅವಳನ್ನು ತಡೆದು ಬುದ್ಧಿ ಹೇಳುತ್ತಾಳೆ. ಆದರೆ, ದಿಶಾಳೇ ತನ್ನ ತಂಗಿ ದೀಪಾ ಎಂಬ ಸತ್ಯ ರೂಪಾಳಿಗೆ ಗೊತ್ತಾಗತ್ತಾ? 

PREV
16
ಚಮಕ್​ ಕೊಡ್ತಿರೋ ದೀಪಾ

ಸದ್ಯ ಬ್ರಹ್ಮಗಂಟು (Brahmagantu) ಸೀರಿಯಲ್‌ನಲ್ಲಿ ದೀಪಾ ದಿಶಾ ಆಗಿ ಎಲ್ಲರಿಗೂ ಚಮಕ್‌ ಕೊಡುತ್ತಿದ್ದಾಳೆ. ಹೆಜ್ಜೆ ಹೆಜ್ಜೆಗೂ ಸೌಂದರ್ಯಗಳಿಗೆ ಅವಮಾನ ಮಾಡುತ್ತಾ, ಆಕೆಯ ಸೊಕ್ಕನ್ನು ಅಡಗಿಸುತ್ತಿದ್ದಾಳೆ. ದಿಶಾಳ ಜೊತೆ ಒಂದೇ ಒಂದು ಮಾತನಾಡಲು ಸೌಂದರ್ಯ ಕಾದು ಕುಳಿತುಕೊಳ್ಳುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾಳೆ ದೀಪಾ.

26
ಸೌಂದರ್ಯ ಸೊಕ್ಕಡಗಿಸ್ತಿರೋ ದಿಶಾ

ಇದೀಗ ಕಾಡಿ ಬೇಡಿದ ಮೇಲೆ ಚಿರು ಕಂಪೆನಿಯಲ್ಲಿ ಕೆಲಸ ಮಾಡಲು ದಿಶಾ ಒಪ್ಪಿಕೊಂಡಿದ್ದಾಳೆ. ಮೊದಲ ಬಾರಿಗೆ ಸೌಂದರ್ಯ ಕ್ಯಾಬಿನ್‌ಗೆ ಬಂದಿದ್ದಾಳೆ. ಈ ಸಮಯದಲ್ಲಿಯೂ ಸೌಂದರ್ಯಳ ಸೊಕ್ಕನ್ನು ಎಷ್ಟು ಮುರಿಯಬೇಕೋ ಅಷ್ಟನ್ನು ಮುರಿಯುತ್ತಿದ್ದಾಳೆ. ದಿಶಾಳಿಗಾಗಿ ವಿಶೇಷ ಟೀ ರೆಡಿ ಮಾಡಿಸಿರುವುದಾಗಿ ಸೌಂದರ್ಯ ಹೇಳಿದಾಗ, ನನಗೆ ಕೆಲಸ ಮುಖ್ಯ ಇವೆಲ್ಲಾ ಬೇಡ ಎಂದು ತಿರುಗೇಟು ಕೊಟ್ಟಿದ್ದಾಳೆ.

36
ಪಿಎ ಆಗಿ ರೂಪಾ

ಅದೇ ಇನ್ನೊಂದೆಡೆ ದೀಪಾಳ ವಿರುದ್ಧವಾಗಿ ಅವಳ ಅಕ್ಕ ರೂಪಾಳನ್ನು ತನ್ನ ಪಿಎ ಆಗಿ ನೇಮಿಸಿಕೊಂಡಿದ್ದಾಳೆ ಸೌಂದರ್ಯ. ಆದರೆ ಇಲ್ಲಿ ಆದದ್ದೇ ಉಲ್ಟಾ. ದಿಶಾ ಅಲ್ಲಿಗೆ ಬಂದಾಗ, ರೂಪಾ ಟೀ ತರುತ್ತಿದ್ದಾಳೆ. ಆ ಸಮಯದಲ್ಲಿ ಅಕ್ಕ-ತಂಗಿಗೆ ಡ್ಯಾಷ್‌ ಆಗಿ ರೂಪಾ ತರುತ್ತಿರುವ ಟೀ ಚೆಲ್ಲಿ, ಕಪ್‌ ಒಡೆದು ಹೋಗುತ್ತದೆ.

46
ಸೌಂದರ್ಯ ಕೆಂಡಾಮಂಡಲ

ಇದನ್ನು ನೋಡಿ ಕೆಂಡಾಮಂಡಲವಾಗಿ ಸೌಂದರ್ಯ ರೂಪಾಳ ಕೆನ್ನೆಗೆ ಹೊಡೆಯಲು ಹೋಗುತ್ತಾಳೆ. ಆದರೆ, ಚಿರು ಆಫೀಸ್‌ನಲ್ಲಿ ರೂಪಾಳನ್ನು ನೋಡಿ ದೀಪಾಗೆ ಆಘಾತವಾಗುತ್ತದೆ. ಇವಳು ಇಲ್ಲೇಕೆ ಬಂದಳು ಎಂದು ತಿಳಿಯುವುದಿಲ್ಲ. ಆದರೆ ಸೌಂದರ್ಯ ಆಕೆಯ ಕೆನ್ನೆಗೆ ಹೊಡೆಯುವುದನ್ನು ಅವಳು ತಪ್ಪಿಸುತ್ತಾಳೆ.

56
ಚಾಟಿ ಬೀಸಿದ ದೀಪಾ

ಕೊನೆಗೆ ಸೌಂದರ್ಯಳಿಗೆ ಸರಿಯಾಗಿ ಚಾಟಿ ಬೀಸುತ್ತಾಳೆ ದೀಪಾ. ಸ್ಟಾಫ್‌ ಎನ್ನುವ ಕಾರಣಕ್ಕೆ ಈ ರೀತಿ ಅವಮಾನ ಮಾಡುವುದನ್ನು ನಾನು ಸಹಿಸುವುದಿಲ್ಲ. ನಿಮ್ಮ ಈ ಗುಣ ನನಗೆ ಇಷ್ಟವಾಗಲಿಲ್ಲ ಎನ್ನುತ್ತಾಳೆ. ಅದೇ ಇನ್ನೊಂದೆಡೆ, ರೂಪಾ ದೀಪಾಳನ್ನು ದಿಟ್ಟಿಸಿ ನೋಡಿದಾಗ, ಇವಳೇ ದೀಪಾ ಎನ್ನುವ ಸತ್ಯ ಗೊತ್ತಾಗತ್ತಾ ಎನ್ನಿಸುವುದು ಉಂಟು.

66
ರೂಪಾಗೂ ಗೊತ್ತಾಗಲಿಲ್ಲ

ಆದರೆ ರೂಪಾ, ದೀಪಾಳನ್ನು ಉದ್ದೇಶಿಸಿ ಸಾರಿ ಮೇಡಂ ಎನ್ನುತ್ತಾಳೆ. ಇದರ ಅರ್ಥ ದಿಶಾ ದೀಪಾ ಎನ್ನುವುದು ಸದ್ಯ ಯಾರಿಗೂ ತಿಳಿದಿಲ್ಲ. ಇದೊಂದು ರೀತಿಯಲ್ಲಿ ಅಚ್ಚರಿಯಾದರೂ ಸೀರಿಯಲ್‌ನಲ್ಲಿ ಎಲ್ಲವೂ ನಡೆಯುತ್ತದೆ ಅಷ್ಟೇ. ಇದೊಂದು ಸೀರಿಯಲ್‌ ಎಂದು ತಿಳಿದು ನೋಡಬೇಕು ಅಷ್ಟೇ.

Read more Photos on
click me!

Recommended Stories