ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡರ ಅಮ್ಮನ ಪಾತ್ರ ಮಾಡುತ್ತಿದ್ದ ನಟಿ ಅಂಜಲಿ ಸುಧಾಕರ್ ಅವರು ಸೀರಿಯಲ್ ನಿಂದ ಹೊರನಡೆದಿದ್ದು, ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಸಿದ್ದೇ ಗೌಡ ಪಾತ್ರಧಾರಿ ನಟ ಧನಂಜಯ್ ಫೋಟೊಗಳ ಜೊತೆಗೆ ಭಾವುಕ ಪತ್ರ ಬರೆದಿದ್ದಾರೆ.
ಜೀ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಲಕ್ಷ್ಮೀ ಮತ್ತು ಶ್ರೀನಿವಾಸ ಹಾಗೂ ಅವರ ಮಕ್ಕಳ ಜೀವನದಲ್ಲಾಗುವ ಕಥೆ ಇದಾಗಿದ್ದು, ಇತ್ತೀಚೆಗಷ್ಟೇ ಧಾರಾವಾಹಿಯಿಂದ ಹಿರಿಯ ನಟಿ ಅಂಜಲಿ ಸುಧಾಕರ್ ಹೊರ ನಡೆದಿದ್ದರು.
27
ಭಾವುಕ ಪತ್ರ ಬರೆದ ಸಿದ್ದೇ ಗೌಡರು
ಸೀರಿಯಲ್ ನಿಂದ ಹೊರನಡೆದ ಆನ್ ಸ್ಕ್ರೀನ್ ಅಮ್ಮನನ್ನು ಸಿದ್ದೇ ಗೌಡ ಪಾತ್ರಧಾರಿ ಧನಂಜಯ್ ಅವರು ಮಿಸ್ ಮಾಡಿಕೊಳ್ಳುತ್ತಿದ್ದು, ಈ ಕುರಿತು ತಮ್ಮ ಇನ್’ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡಿ, ಭಾವುಕವಾದ ಪತ್ರವನ್ನು ಬರೆದಿದ್ದಾರೆ.
37
ಮಿಸ್ ಮಾಡಿಕೊಳ್ಳುತ್ತಿದ್ದಾರೆ ಸಿದ್ದೇ ಗೌಡರು
ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂಜಲಿ ಅಮ್ಮ. ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವುದು ಕೇವಲ ಕೆಲಸವಲ್ಲ - ಅದು ಭಾವನೆಗಳು, ನಗು ಮತ್ತು ಮರೆಯಲಾಗದ ನೆನಪುಗಳ ಸುಂದರ ಪ್ರಯಾಣವಾಗಿತ್ತು. ನಾವು ಕುಟುಂಬದಂತೆ ನಕ್ಕಿದ್ದೇವೆ, ಕಥೆಗಾಗಿ ಸಂಗಾತಿಯಂತೆ ಅತ್ತಿದ್ದೇವೆ ಎಂದು ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಆದರೆ ನಾನು ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ, ಅಮ್ಮ, ಒಂದೇ ಒಂದು ವಿನಮ್ರ ಆಸೆ. ದಯವಿಟ್ಟು ನನ್ನನ್ನು ಮರೆಯಬೇಡಿ. ನಿಮ್ಮ ಸಿದ್ದುವನ್ನು ಮರೆಯಬೇಡಿ. ಪಾತ್ರದ ಒಳಗೆ ಅಥವಾ ಹೊರಗೆ, ಪರದೆಯ ಮೇಲೆ ಅಥವಾ ಹೊರಗೆ. ನೀವು ಯಾವಾಗಲೂ ನನ್ನ ಅಮ್ಮನಾಗಿರುತ್ತೀರಿ ಎನ್ನುತ್ತಾ ಭಾವುಕರಾಗಿ ಬರೆದುಕೊಂಡಿದ್ದಾರೆ ಧನಂಜಯ್.
57
ಯಾವಾಗ್ಲೂ ನಿಮ್ಮ ಮಗನಾಗಿರುವೆ
ನಾನು ನಿಮ್ಮನ್ನು ತುಂಬಾನೆ ಪ್ರೀತಿಸುತ್ತೇನೆ. ಐ ಮಿಸ್ ಯೂ ಸೋ ಮಚ್. ಯಾವಾಗಲೂ ನಾನು ನಿಮ್ಮ ಮಗನಾಗಿರುವೆ. ತೆರೆಯ ಮೇಲೆ ಮಾತ್ರವಲ್ಲ ಅದರಾಚೆಗೂ ನಾನು ನಿಮ್ಮ ಮಗನಾಗಿರುವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಅಂಜಲಿ ಅವರು ಕೂಡ ಐ ಮಿಸ್ ಯು ಟೂ ಎಂದಿದ್ದಾರೆ.
67
ಅಂಜಲಿ ಸೀರಿಯಲ್ ಬಿಟ್ಟಿರೋದು ಯಾಕೆ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡರ ತಾಯಿಯ ಪಾತ್ರದಲ್ಲಿ ಅಂಜಲಿಯವರು ನಟಿಸುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಇತರ ಪಾತ್ರಗಳನ್ನು ಹೈಲೈಟ್ ಮಾಡೋದಕ್ಕಾಗಿ ಅಂಜಲಿ ಪಾತ್ರವನ್ನು ನೆಗೆಟಿವ್ ಶೇಡ್ ನಲ್ಲಿ ತೋರಿಸಲಾಗಿತ್ತು. ಈ ಬಗ್ಗೆ ಮಾತುಕತೆ ನಡೆದರೂ ಸಮಸ್ಯೆ ಬಗೆಹರಿಯದ ಕಾರಣ ನಟಿ ಸೀರಿಯಲ್ ನಿಂದ ಹೊರ ನಡೆದಿದ್ದರು.
77
ಯಾರ್ಯಾರು ನಟಿಸುತ್ತಿದ್ದಾರೆ?
ಒಂದು ಕುಟುಂಬದ ಕಥೆಯಾಗಿರುವ ಲಕ್ಷ್ಮೀ ನಿವಾಸದಲ್ಲಿ ಮಾಧುರಿ, ಅಶೋಕ್ ಜಂಬೆ, ದಿಶಾ ಮದನ್, ಧನಂಜಯ್, ಚಂದನಾ ಅನಂತಕೃಷ್ಣ, ದೀಪಕ್ ಸುಬ್ರಹ್ಮಣ್ಯ, ಮಧು ಹೆಗ್ಗಡೆ, ಸೇರಿ ಹಲವಾರು ನಟಿ ನಟರು ನಟಿಸುತ್ತಿದ್ದಾರೆ.