Brahmagantu Serial: ವೀಕ್ಷಕರ ಪಿತ್ತ ನೆತ್ತಿಗೇರಿಸಿದ ಸಂಜನಾ; ಬೂಟ್‌ ನೆಕ್ಕಿದನಾ ನರಸಿಂಹ?

Published : Sep 23, 2025, 10:28 AM IST

Brahmagantu Serial Kannada: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸಂಜನಾಳ ಬೂಟ್‌ನ್ನು ನರಸಿಂಹ ನೆಕ್ಕಿದ್ದಾನೆ. ಈ ದೃಶ್ಯವು ವೀಕ್ಷಕರ ಪಿತ್ತವನ್ನು ನೆತ್ತಿಗೇರಿಸಿದೆ. ಮುಂದೆ ಏನಾಗುವುದು? 

PREV
15
ಸಂಜನಾ ತಂದೆ-ನರಸಿಂಹ ತಂದೆ ಪೊಲೀಸ್‌ ಇಲಾಖೆಯಲ್ಲಿ..

ಬ್ರಹ್ಮಗಂಟು ಧಾರಾವಾಹಿಯಲ್ಲಿ ನರಸಿಂಹ ಕುಡುಕ. ನರಸಿಂಹ ಹಾಗೂ ಸಂಜನಾ ತಂದೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜನಾ ತಂದೆ ಪೊಲೀಸ್‌ ಠಾಣೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೆ, ನರಸಿಂಹ ತಂದೆ ಸಬ್‌ ಇನ್ಸ್‌ಪೆಕ್ಟರ್.‌ ನರಸಿಂಹನ ತಂಗಿ ದೀಪಾಗೂ, ಚಿರಾಗ್‌ಗೂ ಮದುವೆ ಆಗಿದೆ. ಆದರೆ ಈ ಮದುವೆ ಚಿರಾಗ್‌ಗೆ ಇಷ್ಟವೇ ಇರಲಿಲ್ಲ.

25
ಸಂಜನಾ ಕಂಡರೆ ನರಸಿಂಹನಿಗೆ ಆಗೋದಿಲ್ಲ

ಇನ್ನೊಂದು ಕಡೆ ಚಿರಾಗ್‌ ಹಾಗೂ ಸಂಜನಾ ಮದುವೆ ಫಿಕ್ಸ್‌ ಆಗಿತ್ತು. ಈ ಮದುವೆ ತಡೆಯಲು ಸಂಜನಾಳನ್ನು ನರಸಿಂಹ ಮದುವೆ ಆಗಿದ್ದಾನೆ. ಸಂಜನಾ ದುಡ್ಡೇ ದೊಡ್ಡಪ್ಪ ಎನ್ನುವವಳು. ಇನ್ನೊಂದು ಕಡೆ ಸಂಜನಾಗೆ ಅಹಂಕಾರ, ಎಲ್ಲ ದುಶ್ಚಟಗಳು ಇವೆ. ಇದನ್ನು ಕಂಡರೆ ನರಸಿಂಹನಿಗೆ ಆಗೋದಿಲ್ಲ. 

35
ನರಸಿಂಹನನ್ನು ಕುಡುಕನನ್ನಾಗಿ ಮಾಡಿದ ಸಂಜನಾ

ಈಗ ಸಂಜನಾ, ನರಸಿಂಹನ ಮನೆಗೆ ಬಂದು, ಮನೆಯವರ ಕಣ್ಣಿನಲ್ಲಿ ಅವನು ಕುಡುಕ, ಅಪರಾಧಿ ಎನ್ನುವಂತೆ ಮಾಡುತ್ತಿದ್ದಾಳೆ. ದಿನಕ್ಕೊಂದು ನಾಟಕ ಮಾಡುತ್ತ ಅವಳು, ಈಗ ನರಸಿಂಹನನ್ನು ಕುಡುಕನನ್ನಾಗಿ ಮಾಡಿದ್ದಾಳೆ. ಮನೆಯವರ ಮುಂದೆ ಬಂದು, ಬೇಡ ಅಂದರೂ ನರಸಿಂಹ ಕುಡಿತಾನೆ ಅಂತ ಹೇಳೋದು, ರೂಮ್‌ಗೆ ಹೋಗಿ ಅವನಿಗೆ ಡ್ರಿಂಕ್ಸ್‌ ಕೊಡೋದು ಕೆಲಸ ಆಗಿದೆ.

45
ಸಂಜನಾಳ ಬೂಟ್‌ ನೆಕ್ಕಿದನಾ ನರಸಿಂಹ?

ಇದು ನರಸಿಂಹನ ತಂದೆ-ತಾಯಿಗೆ ಗೊತ್ತಾಗಿರಲಿಲ್ಲ. ಈಗ ರೂಮ್‌ನಲ್ಲಿ ನರಸಿಂಹ, ಡ್ರಿಂಕ್ಸ್‌ ಕೊಡು ಎಂದು ಬೇಡಿಕೊಂಡಿದ್ದಾನೆ. ಮಾನಸಿಕವಾಗಿ ಅವನು ಜರ್ಜರಿತನಾಗಿದ್ದಾನೆ. ನೀನು ನನ್ನ ಬೂಟ್‌ ನೆಕ್ಕಿದರೆ ಡ್ರಿಂಕ್ಸ್‌ ಕೊಡ್ತೀನಿ ಎಂದು ಅವಳು ಹೇಳಿದ್ದಾಳೆ. ಆಗ ನರಸಿಂಗ ಬೂಟ್‌ ನೆಕ್ಕಲು ಮುಂದಾಗುತ್ತಾನೆ. ಆಗ ಅವನ ತಂದೆ-ತಾಯಿ ನೋಡುತ್ತಾರೆ. ಬಹುಶಃ ನರಸಿಂಹ ಬೂಟ್‌ ನೆಕ್ಕೋದಿಲ್ಲ ಎಂದು ಕಾಣುತ್ತದೆ.

55
ಸಂಜನಾ ಪಾತ್ರ ಮುಗಿಸಿ

ಇದನ್ನು ನೋಡಿ ನರಸಿಂಹ ತಂದೆ-ತಾಯಿ ಶಾಕ್‌ ಆಗಿದ್ದಾರೆ. ತನ್ನ ಸತ್ಯ ಏನು ಅಂತ ಗೊತ್ತಾದರೆ ಮುಂದೇನು ಕಥೆ ಅಂತ ಸಂಜನಾ ಶಾಕ್‌ ಆಗಿದ್ದಾಳೆ. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಸಂಜನಾ ಈ ರೀತಿ ಮಾಡೋದು ನೋಡಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಸಂಜನಾ ಪಾತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಪಾತ್ರವನ್ನು ಮುಗಿಸಿಬಿಡಿ ಎಂದು ವೀಕ್ಷಕರು ಡಿಮ್ಯಾಂಡ್‌ ಮಾಡುತ್ತಿದ್ದಾರೆ.

Read more Photos on
click me!

Recommended Stories