Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷದ ಬಳಿಕ ಗೌತಮ್, ತನ್ನ ಪತ್ನಿ ಭೂಮಿಕಾ ಹಾಗೂ ಮಗನನ್ನು ಭೇಟಿಯಾಗಿದ್ದಾನೆ. ಮಗಳು ಹುಟ್ಟಿದ್ದು, ಕಿಡ್ನ್ಯಾಪ್ ಆಗಿರೋ ವಿಚಾರವನ್ನು ಮುಚ್ಚಿಟ್ಟಿದ್ದಕ್ಕೆ ಪತ್ನಿ ದ್ವೇಷ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದಾನೆ.
ಈಗ ಮಲ್ಲಿ ಬಾಯಿಬಿಟ್ಟರೆ ಮಾತ್ರ ಗೌತಮ್, ಭೂಮಿ ಒಂದಾಗ್ತಾರೆ. ಹೌದು, ಭೂಮಿಗೆ ಅವಳು ಮಕ್ಕಳು ಹುಟ್ಟಿದ್ದರು. ಮೊದಲು ಮಗಳು ಹುಟ್ಟಿದ್ದು, ಕೆಲವೇ ನಿಮಿಷಗಳಲ್ಲಿ ಅವಳನ್ನು ಗೌತಮ್ ಮಲಸಹೋದರ ಜಯದೇವ್ ಕದ್ದೊಯ್ದು ಕಾಡಿನಲ್ಲಿ ಬಿಸಾಕಿನು. ಮಗಳು ಹುಟ್ಟಿದ್ದು, ಕಿಡ್ನ್ಯಾಪ್ ಆಗಿದ್ದು ಶಕುಂತಲಾ, ಆನಂದ್, ಗೌತಮ್, ಜಯದೇವ್ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆಮೇಲೆ ಮಗ ಹುಟ್ಟಿದನು. ಭೂಮಿಕಾಗೆ ಅವಳಿ ಮಕ್ಕಳಾಗಿವೆ ಎಂದು ಗೊತ್ತೇ ಇರಲಿಲ್ಲ.
26
ಮನೆ ಬಿಟ್ಟು ಹೋಗಿರೋ ಭೂಮಿಕಾ
ಪ್ರತಿ ಬಾರಿ ಭೂಮಿಕಾ, ಮಗನನ್ನು ಶಕುಂತಲಾ ಟಾರ್ಗೆಟ್ ಮಾಡಿ ಸಾಯಿಸಲು ನೋಡುತ್ತಿದ್ದಳು. ಆಗೆಲ್ಲ ಭೂಮಿ ತಿರುಗೇಟು ಕೊಡುತ್ತಿದ್ದಳು. ಆಮೇಲೆ ಶಕುಂತಲಾ ಕುತಂತ್ರ ಮಾಡಿ, “ನಿನಗೆ ಮಗಳು ಹುಟ್ಟಿರೋ ವಿಷಯವನ್ನು ನಿನ್ನ ಗಂಡ ಬಚ್ಚಿಟ್ಟಿದ್ದಾನೆ. ಆ ಮಗುವನ್ನು ನಾವೇ ಕಾಡಿನಲ್ಲಿ ಬಿಸಾಕಿದೆವು. ಹುಲಿಯೋ, ಚಿರತೆಯೋ ತಿಂದಿರುತ್ತದೆ” ಎಂದು ಭೂಮಿಗೆ ಹೇಳಿದ್ದಳು. “ನಿನ್ನವರು ಚೆನ್ನಾಗಿರಬೇಕು ಅಂದರೆ ನೀನು ಮನೆ ಬಿಟ್ಟು ಹೋಗಬೇಕು” ಎಂದು ಶಕುಂತಲಾ, ಭೂಮಿಗೆ ಹೇಳಿದ್ದಳು.
36
ಗೌತಮ್ ಮುಂದೆ ಭೂಮಿ ನಾಟಕ
ಹೀಗಾಗಿ ಭೂಮಿ ಐದು ವರ್ಷದ ಹಿಂದೆ ಯಾರಿಗೂ ಹೇಳದೆ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಅವಳ ಜೊತೆ ಜಯದೇವ್ ಮೊದಲ ಪತ್ನಿ ಮಲ್ಲಿ ಕೂಡ ಹೋಗಿದ್ದಳು. ಈಗ ಗೌತಮ್, ಭೂಮಿ ಮುಖಾಮುಖಿಯಾಗಿದೆ. ಗೌತಮ್ ಸೇರಿದಂತೆ ನನ್ನವರು ಚೆನ್ನಾಗಿರಬೇಕು ಎಂದರೆ ನಾನು ಮನೆಯಿಂದ, ಮನೆಯವರಿಂದ ದೂರ ಇರಬೇಕು ಎಂದು ಭೂಮಿಕಾ ಫಿಕ್ಸ್ ಆಗಿದ್ದಾಳೆ. ಹೀಗಾಗಿ ಅವಳು, “ಮಗು ವಿಷಯ ಮುಚ್ಚಿಟ್ಟಿದ್ದಕ್ಕೆ ಬೇಸರ ತಂದಿದೆ. ನಿಮ್ಮನ್ನು ದ್ವೇಷ ಮಾಡ್ತೀನಿ” ಎಂದು ಹೇಳಿದ್ದಾಳೆ.
ಈಗ ನನ್ನ ಮಗ ಆಕಾಶ್ ಯಾರು ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಮಗನ ಬರ್ತ್‌ಡೇ ದಿನ ಗೌತಮ್, ಆಕಾಶ್‌ನನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾನೆ, ಅಷ್ಟೇ ಅಲ್ಲದೆ ಗಿಫ್ಟ್‌ಗಳನ್ನು ಕೊಟ್ಟಿದ್ದಾನೆ.
56
ಮಲ್ಲಿ, ಗೌತಮ್ ಭೇಟಿ
ಇನ್ನು ಮನೆ ಬಳಿ ಮಗನನ್ನು ಕಾರ್‌ನಲ್ಲಿ ಡ್ರಾಪ್ ಮಾಡಿದ್ದಾನೆ. ಆಗ ಮಲ್ಲಿ, ಗೌತಮ್ ಭೇಟಿಯಾಗಿದೆ. “ನಾನು ಚೆನ್ನಾಗಿಲ್ಲ. ಮಗಳ ವಿಷಯಕ್ಕೆ ಭೂಮಿಕಾ ಈ ರೀತಿ ಮಾಡುತ್ತಿದ್ದಾರಾ? ಅಥವಾ ನನ್ನಿಂದ ದೂರ ಇರೋಕೆ ಬೇರೆ ಕಾರಣ ಇದೆಯಾ?” ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅವಳು ಏನು ಉತ್ತರ ಕೊಡ್ತಾಳೆ ಎಂದು ಕಾದು ನೋಡಬೇಕಿದೆ. ಮಲ್ಲಿ ಇರೋ ಸತ್ಯ ಹೇಳಿದರೆ, ಗೌತಮ್, ತಾನು ಮನೆಯವರಿಂದ ದೂರ ಆಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿರೋ ವಿಷಯವನ್ನು ಭೂಮಿಕಾಗೆ ಹೇಳಬಹುದು. ಇವರಿಬ್ಬರು ಒಟ್ಟಾಗಿ ಶಕುಂತಲಾ, ಜಯದೇವ್‌ಗೆ ಬುದ್ಧಿ ಕಲಿಸಬಹುದು. ಆದರೆ ಮಲ್ಲಿ ಈಗ ಸತ್ಯ ಹೇಳೋದು ಡೌಟ್.
66
ಭೂಮಿಯನ್ನು ಗೌತಮ್ ಕಾಪಾಡ್ತಾನಾ?
ಎಂಎಲ್‌ಎ ಮಗ ಶಾಲೆಯಲ್ಲಿ ಸಿಗರೇಟ್ ಸೇದಿದ್ದಕ್ಕೆ ಭೂಮಿಕಾ ಸಿಟ್ಟು ಮಾಡಿಕೊಂಡಿದ್ದಳು. ಎಂಎಲ್‌ಎಯನ್ನು ಶಾಲೆಗೆ ಕರೆಸಿ ಮಗನ ಬಗ್ಗೆ ದೂರಿದ್ದಳು. ಮಗನ ಕೆಲಸವನ್ನು ಎಂಎಲ್‌ಎ ಸಮರ್ಥನೆ ಮಾಡಿಕೊಂಡಿದ್ದನು. ಈಗ ಭೂಮಿಕಾ ಬಳಿ ಎಂಎಲ್‌ಎ ಕ್ಷಮೆ ಕೇಳಿ ಎಂದು ಹೇಳಿದ್ದಾನೆ. “ನಿಮ್ಮ ಬಳಿ ನಾನು ಪಾಠ ಹೇಳಿಸಿಕೊಂಡರೆ ಮರ್ಯಾದೆ ಹೋಗುತ್ತದೆ, ನನಗೆ ನಿಮ್ಮ ಬುದ್ಧಿಮಾತು ಬೇಕಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ನೀವು ಕ್ಷಮೆ ಕೇಳಬೇಕು” ಎಂದು ಅವನು ಹೇಳಿದ್ದಾನೆ. ಆಗ ಭೂಮಿಕಾ, “ನಾನು ಮಾಡದ ತಪ್ಪಿಗೆ ಕ್ಷಮೆ ಕೇಳೋದಿಲ್ಲ” ಎಂದು ಹೇಳಿದ್ದಾಳೆ. ಇದರಿಂದ ಭೂಮಿಗೆ ಸಮಸ್ಯೆ ಬರಬಹುದು. ಈ ಸಮಸ್ಯೆಯನ್ನು ಬಗೆಹರಿಸಲು ಗೌತಮ್ ಬರಬಹುದು. ಈ ನಿಟ್ಟಿನಲ್ಲಿ ಇವರು ಒಂದಾಗಲೂಬಹುದು.