Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಈಗಾಗಲೇ ಆಕಾಶ್, ಗೌತಮ್ ಭೇಟಿಯಾಗಿದೆ. 5 ವರ್ಷದ ಬಳಿಕ ಮಗ, ಹೆಂಡ್ತಿಯನ್ನು ನೋಡಿರೋ ಗೌತಮ್‌ಗೆ ಈಗ ಅವರನ್ನು ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ. ಇತ್ತ ಗೌತಮ್‌ನಿಂದ ನಾನು, ನನ್ನ ಮಗ ದೂರ ಇರಬೇಕು ಅಂತ ಭೂಮಿ ಫಿಕ್ಸ್ ಆಗಿದ್ದಾಳೆ.
“ನೀನು ಈ ಮನೆಯಿಂದ, ಈ ಮನೆಯವರಿಂದ ದೂರ ಆದರೆ ನಿನ್ನವರು ಚೆನ್ನಾಗಿ ಇರುತ್ತಾರೆ” ಅಂತ ಶಕುಂತಲಾ ವಾರ್ನ್ ಮಾಡಿದ್ದಳು. ಹೀಗಾಗಿ ಭೂಮಿ ಪುಟ್ಟ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಈ ವಿಷಯ ಮಲ್ಲಿ, ಶಕುಂತಲಾಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ.
25
ಮಗಳ ವಿಷಯ ಭೂಮಿಗೆ ಗೊತ್ತಿರಲಿಲ್ಲ
ಭೂಮಿಕಾಗೆ ಅವಳಿ ಮಕ್ಕಳಾದರು. ಮೊದಲು ಮಗಳು ಹುಟ್ಟಿದಳು ಅಂತ ಅವಳಿಗೂ ಗೊತ್ತಿರಲಿಲ್ಲ. ಮಗು ಹುಟ್ಟಿದ ಹತ್ತು ನಿಮಿಷಕ್ಕೆ ಗೌತಮ್ ಮಲ ಸಹೋದರ ಜಯದೇವ್ ಕದ್ದು ಎತ್ತಿಕೊಂಡು ಹೋದನು, ಆಮೇಲೆ ಕಾಡಿನಲ್ಲಿ ಎಸೆದನು. ಈಗ ಆ ಮಗು ಬದುಕಿದೆಯೋ? ಇಲ್ಲವೋ ಎಂಬುದೇ ಗೊತ್ತಿಲ್ಲ. ಭೂಮಿ ಸ್ನೇಹಿತೆಯೊಬ್ಬಳು ಹೆಣ್ಣು ಮಗುವನ್ನು ದತ್ತು ತಗೊಂಡಿದ್ದಳು. ಈಗ ಆ ಮಗುವೇ ಭೂಮಿ ಮಗಳಾ ಎಂಬ ಪ್ರಶ್ನೆಯೂ ಎದ್ದಿದೆ.
35
ಭೂಮಿಯ ಮಹಾ ನಾಟಕ
“ನನಗೆ ಮಗಳು ಹುಟ್ಟಿರೋದು, ಕಿಡ್ನ್ಯಾಪ್ ಆಗಿರೋ ವಿಷಯವನ್ನು ಮುಚ್ಚಿಟ್ಟಿರಿ. ಒಂಭತ್ತು ತಿಂಗಳು ಹೊತ್ತು ಹೆತ್ತಿರೋ ನನಗೆ ಮಗಳ ಬಗ್ಗೆ ತಿಳಿದುಕೊಳ್ಳೋ ಹಕ್ಕು ಇಲ್ಲವಾ? ನಿಮಗೆ ನನ್ನ ಮೇಲೆ ನಿಜವಾದ ಪ್ರೀತಿ, ನಂಬಿಕೆ ಇದ್ದಿದ್ದರೆ ಸತ್ಯ ಹೇಳುತ್ತಿದ್ರಿ. ಆದರೆ ನೀವು ಮೋಸ ಮಾಡಿದ್ರಿ. ನನಗೆ ನಿಮ್ಮ ಮೇಲೆ ಲವ್ ಇಲ್ಲ, ಈಗ ದ್ವೇಷ ಮಾತ್ರ ಇದೆ” ಎಂದು ಗೌತಮ್‌ಗೆ ಭೂಮಿ ಹೇಳಿದಳು. ಇದನ್ನೇ ಗೌತಮ್ ನಂಬಿಕೊಂಡು ಕೂತಿದ್ದಾನೆ.
ಮಗ ಆಕಾಶ್, ಪ್ರಿನ್ಸಿಪಲ್ ಬಳಿ ಫೇಕ್ ಡ್ಯಾಡಿಯನ್ನು ಕರೆದುಕೊಂಡು ಹೋಗಿದ್ದಾನೆ ಅಂತ ಭೂಮಿಕಾಗೆ ಗೊತ್ತಾಗಿದೆ. ಮಗ ನಡೆದ ವಿಷಯವನ್ನು ಹೇಳಿದರೂ ಕೂಡ ಅವಳು ಕೇಳಲು ರೆಡಿ ಇಲ್ಲ. ಮಗ ಸುಳ್ಳು ಹೇಳಿದ ಎನ್ನೋದಕ್ಕಿಂತ ಯಾರನ್ನೋ ಅಪ್ಪ ಅಂತ ಕರೆದಿದ್ದು, ಭೂಮಿಗೆ ನಿಜಕ್ಕೂ ಸಿಟ್ಟು ತರಿಸಿತ್ತು. ಹೀಗಾಗಿ ಅವಳು ಮಗನಿಗೆ ಬೈಯ್ದಳು.
55
ಆಕಾಶ್-ಗೌತಮ್ ದೂರ ದೂರ..
ಆಕಾಶ್ ಬರ್ತ್‌ಡೇ ದಿನ ಗೌತಮ್ ಅವನನ್ನು ಭೇಟಿ ಮಾಡಿದ್ದಾನೆ, ಗಿಫ್ಟ್ ನೀಡಿದ್ದಾನೆ, ಮುಂದಿನ ದಿನಗಳಲ್ಲಿ ಇವರಿಬ್ಬರು ಇನ್ನಷ್ಟು ಹತ್ತಿರ ಆಗಲೂಬಹುದು. ಇದೇನಾದರೂ ಭೂಮಿ ಕಣ್ಣಿಗೆ ಬಿದ್ದರೆ ಗೌತಮ್‌ನನ್ನು ಅವಳು ಸುಮ್ಮನೆ ಬಿಡೋದಿಲ್ಲ. ನೀವು ನನ್ನ ಮಗನಿಂದ ದೂರ ಇರಬೇಕು, ಇಲ್ಲ ಅಂದರೆ ಬೇರೆ ನಿರ್ಧಾರ ತಗೋತೀನಿ ಅಂತ ಅವಳು ಧಮ್ಕಿ ಹಾಕಲೂಬಹುದು. ಒಟ್ಟಿನಲ್ಲಿ ಗೌತಮ್, ಆಕಾಶ್ ದೂರ ಆಗೋಕೆ ಭೂಮಿ ಕಾರಣ ಆಗಲೂಬಹುದು.