ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.
ಬ್ರಹ್ಮಗಂಟು (Brahmagantu) ಸೀರಿಯಲ್ ಇದೀಗ ಮತ್ತೊಂದು ರೋಚಕ ಟ್ವಿಸ್ಟ್ನೊಂದಿಗೆ ಸಾಗಿದೆ. ಒಂದೆಡೆ ದೀಪಾ ದಿಶಾ ಆಗಿ ಡಬಲ್ ರೋಲ್ನಲ್ಲಿ ಎಲ್ಲರಿಗೂ ಚಮಕ್ ಕೊಡುತ್ತಿದ್ದರೆ, ಇದೀಗ ಬೇರೆಯದ್ದೇ ರೂಪ ಪಡೆದಿದೆ ಸೀರಿಯಲ್.
26
ಗ್ಯಾಸ್ ಲೀಕ್
ದೀಪಾ ಮತ್ತು ಚಿರಾಗ್ ನನ್ನು ದೂರ ಮಾಡುವ ಉದ್ದೇಶದಿಂದ ಸುಕನ್ಯಾ ದೀಪಾ ಹೋಗಬೇಕಿರುವ ಕಟ್ಟಡದ ಗ್ಯಾಸ್ ಲೀಕ್ ಮಾಡಿಸಿದ್ದಾಳೆ. ದೀಪಾಳಿಂದ ದೂರ ಮಾಡಲು ಸಾಯಿಸಲೂ ಹೇಸದ ಬುದ್ಧಿ ಇದು.
36
ಸೌಂದರ್ಯಗೆ ಆತಂಕ
ಈ ಬಗ್ಗೆ ಹೆಮ್ಮೆಯಿಂದ ಸೌಂದರ್ಯ ಬಳಿ ಹೇಳಿಕೊಂಡಿದ್ದಾಳೆ ಸುಕನ್ಯಾ. ಆದರೆ ದೀಪಾಳ ಜೊತೆ ಚಿರು ಕೂಡ ಹೋಗಿರುವುದು ಸೌಂದರ್ಯಗೆ ತಿಳಿದ ಕಾರಣದಿಂದ ಸುಕನ್ಯಾ ಮೇಲೆ ಕೋಪಗೊಂಡು ಏನು ಮಾಡುವುದು ಎಂದು ತಿಳಿಯದ ಸ್ಥಿತಿಯಲ್ಲಿದ್ದಾಳೆ.