Brahmagantu Serial: ದೀಪಾ ರೂಮಿಗೆ ನುಗ್ಗಿದ ದಿಶಾ: ಚಿರು ಕೈಯಲ್ಲಿ ತಗ್ಲಾಕ್ಕೊಂಡ್ಲಲ್ಲಪ್ಪೋ- ಬೇಕಿತ್ತಾ ಇದೆಲ್ಲಾ?

Published : Oct 28, 2025, 03:40 PM IST

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಮಾಡೆಲ್ ದಿಶಾಳಾಗಿ ದೀಪಾ ಡಬಲ್ ರೋಲ್ ಮಾಡುತ್ತಿದ್ದಾಳೆ. ಡಿನ್ನರ್‌ಗೆಂದು ಚಿರು ಮನೆಗೆ ಕರೆದಾಗ ಪೇಚಿಗೆ ಸಿಲುಕುವ ದೀಪಾ, ಕೊನೆಗೆ ತನ್ನ ಗಂಡನ ಕೈಗೆ ಸಿಕ್ಕಿಬೀಳುವ ಸನ್ನಿವೇಶ ಎದುರಾಗಿದೆ.

PREV
16
ದೀಪಾ-ದಿಶಾ ಡಬಲ್​ ರೋಲ್​

ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ಸದ್ಯ ಮಾಡೆಲ್​ ದಿಶಾ ಆಗಿ ದೀಪಾ ಡಬಲ್​ ರೋಲ್​​ ಮಾಡುತ್ತಿದ್ದಾಳೆ. ಅವಳೇ ಇವಳು ಎನ್ನುವುದು ಅಷ್ಟೂ ಗೊತ್ತಾಗಲ್ವಾ ಎಂದು ವೀಕ್ಷಕರು, ನೆಟ್ಟಿಗರು ಆಗಾಗ್ಗೆ ಕೇಳುವುದು ಉಂಟು. ಆದರೆ ಇದು ಸೀರಿಯಲ್​ ಆಗಿರೋದ್ರಿಂದ ಯಾರಿಗೂ ಗೊತ್ತಾಗಿಲ್ಲ ಎಂದಷ್ಟೇ ಹೇಳಬಹುದು. ಆದರೂ ವೀಕ್ಷಕರಿಗೆ ಈ ಡಬಲ್​ ರೋಲ್​ ಒಂಥರಾ ಕಚಗುಳಿ ನೀಡುತ್ತಿದೆ.

26
ಪೇಚಿನಲ್ಲಿ ದೀಪಾ

ಇದೀಗ ದೀಪಾ ಪೇಚಿಗೆ ಸಿಲುಕಿದ್ದಾಳೆ. ಇದಕ್ಕೆ ಕಾರಣ, ದಿಶಾಳಿಂದಾಗಿ ತಮ್ಮ ಕಂಪೆನಿಗೆ ಸಕ್ಸಸ್​ ಸಿಕ್ಕಿರೋದ್ರಿಂದ ಆಕೆಯನ್ನು ಮನೆಗೆ ಕರೆದಿದ್ದಾನೆ ಚಿರು. ಡಿನ್ನರ್​ ನೆಪದಲ್ಲಿ ಮನೆಗೆ ಕರೆಯಲಾಗಿದೆ. ಆದರೆ ಇದನ್ನು ಕೇಳಿ ದೀಪಾ ಸುಸ್ತಾಗಿ ಹೋಗಿದ್ದಾಳೆ.

36
ದೀಪಾಗೆ ಬೈದ ಅರ್ಚನಾ

ಅರ್ಚನಾ ಬಂದು ದೀಪಾಗೆ ಚೆನ್ನಾಗಿ ಬೈದಿದ್ದಾಳೆ. ಮನೆಗೆ ಬರಲು ಒಪ್ಪಿಕೊಂಡೆ ಯಾಕೆ ಎಂದು ಪ್ರಶ್ನಿಸಿದ್ದಾಳೆ. ಅದರೆ ಹಜಬೆಂಡು ಕರೆದಾಗ ಬೇಡ ಅನ್ನಲು ಆಗಲಿಲ್ಲ ಅಂದಿದ್ದಾಳೆ ದೀಪಾ. ಒಟ್ಟಿನಲ್ಲಿ ಈಗ ಪೇಚಿಗೆ ಸಿಲುಕೋ ಸ್ಥಿತಿ ಅರ್ಚನಾ ಮತ್ತು ದೀಪಾದ್ದು.

46
ದಿಶಾಳ ಗುಣಗಾನ

ಈಗ ಹೋಗು, ಆಮೇಲೆ ದೀಪಾ ಯಾಕೆ ಬರಲಿಲ್ಲ ಎಂದು ಚಿರು ಕೇಳಿದಾಗ ಏನೋ ಒಂದು ಮ್ಯಾನೇಜ್​ ಮಾಡಿದ್ರಾಯ್ತು ಬಿಡು ಎಂದು ಅರ್ಚನಾ ಹೇಳಿ ಕಳಿಸಿದ್ದಾಳೆ. ಅಲ್ಲಿ ಡಿನ್ನರ್​ನಲ್ಲಿ ಎಲ್ಲರೂ ದಿಶಾಳನ್ನು ಹೊಗಳುತ್ತಿದ್ದಾರೆ.

56
ಸಿಕ್ಕಿಬಿದ್ದಳಾ ದೀಪ?

ಚಿರು ಅನ್ನ ನೆತ್ತಿಗೆ ಏರಿದಾಗ ದಿಶಾಳೆ ಅವನಿಗೆ ನೀರು ಕುಡಿಸಿದ್ದಾಳೆ. ಇದನ್ನು ನೋಡಿದ ಸೌಂದರ್ಯ ಮನಸ್ಸಿನಲ್ಲಿ ಬೇರೆಯದ್ದೇ ಪ್ಲ್ಯಾನ್ ಮಾಡುತ್ತಿದ್ದಾಳೆ. ದೀಪಾ ಇದನ್ನು ನೋಡಬೇಕಿತ್ತು ಎಂದುಕೊಳ್ಳುತ್ತಿದ್ದಾಳೆ.

66
ನಿಜ ಗೊತ್ತಾಗತ್ತಾ?

ಹೊರಗೆ ಬರುವಾಗ ಚಿರು ಅಡ್ಡ ಬಂದಿದ್ದಾನೆ. ದೀಪಾಳ ರೂಮಿನಲ್ಲಿ ದಿಶಾ ನೋಡಿ ಅವರಿಗೆ ಶಾಕ್​ ಆಗಿದೆ. ಅದಕ್ಕಿಂತಲೂ ಹೆಚ್ಚಿನ ಶಾಕ್​ ದೀಪಾಗೆ ಆಗಿದೆ. ಚಿರುಗೆ ನಿಜ ಗೊತ್ತಾಗತ್ತಾ? ಮುಂದೇನು?

Read more Photos on
click me!

Recommended Stories