Bigg Boss Kannada Season 12 Show Episode: ಜಗಳ ಇಲ್ಲದೆ ಬಿಗ್ ಬಾಸ್ ಶೋ ಇಲ್ಲ ಎಂದು ಕಾಣುತ್ತದೆ. ಈ ಬಾರಿ ಕೂಡ ಕನ್ನಡ ಬಿಗ್ ಬಾಸ್ ಶೋನಲ್ಲಿ ಕೂಡ ಜಗಳ ತಾಂಡವವಾಡುತ್ತಿದೆ. ಕಳೆದ ಒಂದು ವಾರದಿಂದ ಶಾಂತಿ ನಿವಾಸದ ಥರ, ಸೈಲೆಂಟ್ ಆಗಿದ್ದ ಅಶ್ವಿನಿ ಈಗ ಕೆರಳಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಆಗಿದೆ. ವಿಲನ್ ಅವತಾರಕ್ಕೆ, ಅಬ್ಬರಕ್ಕೆ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇದರ ಮಧ್ಯೆ ಸ್ಪರ್ಧಿಗಳ ನಾಮಿನೇಶನ್ ಟಾಸ್ಕ್ ಕೂಡ ನಡೆಯುತ್ತಿದೆ. ನಾಮಿನೇಶನ್ ವಿಚಾರ ಬಂದಾಗ, ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಕಾವ್ಯ ಶೈವ ನಾಮಿನೇಟ್ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದರು.
25
ಗಾಂಚಾಲಿ ಎಂದಾಗ ಯಾಕೆ ಮಾತನಾಡಲಿಲ್ಲ?
“ಈಗ ರಜತ್ ಮಾತಿಗೆ ಅಶ್ವಿನಿ ಗೌಡ ಅವರು ಕೂಗಾಡಿದ್ದಾರೆ. ಧ್ರುವಂತ್ ಅವರು ಗಾಂಚಾಲಿ ಎಂದಾಗ ಅಶ್ವಿನಿ ಗೌಡ ಅವರು ಏನೂ ಮಾತನಾಡಲಿಲ್ಲ, ಆದರೆ ರಘು ಅವರು ಒಂದು ಮಾತು ಹೇಳಿದಾಗ, ಹಾಗೆ ಹೇಳಬಾರದು, ಹೀಗೆ ಹೇಳಬಾರದು ಎಂದರು” ಎಂದಿದ್ದಾರೆ ರಜತ್.
35
ಅಶ್ವಿನಿ ಮನೆಗೆ ಹೋಗೋದು ಒಳ್ಳೆಯದು
“ನಾವು ಅಶ್ವಿನಿ ಗೌಡ ಅವರ ಜೊತೆ ಫೈಟ್ ಮಾಡೋಕೆ ಆಗೋದಿಲ್ಲ. ಹೀಗಾಗಿ ಅವನು ಮನೆಗೆ ಹೋಗೋದು ಒಳ್ಳೆಯದು” ಎಂದು ರಜತ್ ಹೇಳಿದ್ದಾರೆ. ಆಗ ಅಶ್ವಿನಿ ಅವರು, “ನಿಮ್ಮಷ್ಟು ಥರ್ಡ್‌ರೇಟೆಡ್ ಮಾತುಗಳನ್ನು ಯಾರೂ ಬಳಸಿಲ್ಲ. ನಾವು ಗಂಡಸರ ಜೊತೆ ಗುದ್ದಾಡ್ತೀವಿ ಎಂದಿರಿ. ನೀವು ಬಂದು ಕೇಳಬೇಕಿತ್ತು. ನೀವು ಗಂಡ್ಸಲ್ವಾ?” ಎಂದು ಹೇಳಿದ್ದಾರೆ.
ಅಶ್ವಿನಿ ಗೌಡ ಮಾತು ಕೇಳಿದ ಬಳಿಕ ರಜತ್ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ನೂಕಿದ್ದಾರೆ. ಸ್ವಿಮ್ಮಿಂಗ್ ಪೂಲ್‌ಗೆ ನೂಕೋದು ನಾಮಿನೇಶನ್ ಭಾಗವಾಗಿತ್ತು. ಅಶ್ವಿನಿ ಮಾತು ಇನ್ನು ಇತ್ತು, ಅದನ್ನು ಕೇಳಿಸಿಕೊಳ್ಳದೆ ನೂಕಿದ್ದಾರೆ ಎಂದು ಅಶ್ವಿನಿ ಗೌಡ ಅವರು ಇನ್ನಷ್ಟು ಸಿಟ್ಟಾಗಿದ್ದಾರೆ.
55
ಕಚಡಾ ಎಂದು ಬೈಕೊಂಡ್ರು
ಅಶ್ವಿನಿ ಗೌಡ ಅವರು ಸ್ವಿಮ್ಮಿಂಗ್ ಪೂಲ್‌ಗೆ ಬೀಳುತ್ತಿದ್ದಂತೆ “ಕಚಡಾ” ಎಂದಿದ್ದಾರೆ. ಆಗ ರಜತ್ ಅವರು, “ನೀನು ನನಗೆ ಏನು ಹೇಳೋದು, ಕಚಡಾ” ಎಂದಿದ್ದಾರೆ. ಒಟ್ಟಿನಲ್ಲಿ ಸೈಲೆಂಟ್ ಆಗಿದ್ದ ಅಶ್ವಿನಿ ಗೌಡ ಈಗ ಜಗಳ ಆಡುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.