Bigg Bossಗೆ ಎಂಟ್ರಿ ಆಗ್ತಿದ್ದಂಗೇ ಧಮಾಲ್ ಧಿಮಿಲ್ ಧೂಳೆಬ್ಬಿಸಿದ Risha Gowda: ಮಾತು ಬೆಂಕಿ, ಫೋಟೋಗಳು ಪುಡಿಪುಡಿ- ಯಾರೀಕೆ?

Published : Oct 20, 2025, 03:33 PM IST

ಬಿಗ್ ಬಾಸ್ ಮನೆಗೆ ನಟಿ ರಿಷಾ ಗೌಡ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದಾರೆ. ಕ್ರೀಡಾಪಟು ಆಗುವ ಕನಸು ಕಂಡಿದ್ದ ಇವರು, ಗಾಯದ ಕಾರಣ ನಟನಾ ಲೋಕಕ್ಕೆ ಬಂದರು. ಮನೆಗೆ ಕಾಲಿಟ್ಟ ಮೊದಲ ದಿನವೇ ಇತರ ಸ್ಪರ್ಧಿಗಳ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

PREV
16
ವೈಲ್ಡ್​ ಕಾರ್ಡ್​ ಎಂಟ್ರಿ

Bigg Boss ಮನೆಯಿಂದ ಮೂವರು ಹೋಗುತ್ತಿದ್ದಂತೆಯೇ ಮತ್ತೆ ಮೂವರು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ರಿಷಾ ಗೌಡ. (Risha Gowda).

26
ಎಲ್ಲರಿಗೂ ಒಂದೊಂದು ಹೆಸರು

ಧ್ರುವಂತ್​ ಸಮಯ ಮುಗಿದಿದೆ. ಕಪಡ ಮುಖವಾಡ ಹಾಕಿಕೊಂಡು ಬದುಕ್ತಾ ಇರೋದು ಸ್ಪಂದನಾ. ಅಶ್ವಿನಿ ಗೌಡ, ಹೇಳೋದು ಒಂದು ಮಾಡೋದು ಒಂದು ಎನ್ನುತ್ತಲೇ ಎಲ್ಲರ ಫೋಟೋಗಳನ್ನು ಪುಡಿ ಪುಡಿ ಮಾಡಿದ್ದಾರೆ.

36
ಕಾಕ್ರೋಚ್​ ಉತ್ತರ ಕುಮಾರ

ಆನೆ ನಡೆದ ದಾರಿ ಯಾವಾಗಲೂ ಕರೆಕ್ಟ್​ ಆಗಿರುತ್ತೆ ಎನ್ನುತ್ತಲೇ ಮತ್ತೋರ್ವ ಸ್ಪರ್ಧಿಯ ಫೋಟೋದ ಮೇಲೂ ಚಚ್ಚಿದ್ದಾರೆ. ನನ್ನ ಟಾರ್ಗೆಟ್​ ಕಾಕ್ರೋಚ್​. ಇವರು ಟಫ್ ಸ್ಪರ್ಧಿ ಎಂದುಕೊಂಡಿದ್ದೆ. ಆದರೆ ಅವರು ಉತ್ತರ ಕುಮಾರ ಎನ್ನೋದು ಗೊತ್ತಾಗಿದೆ ಎಂದಿದ್ದಾರೆ.

46
ಯಾರೀ ರಿಷಾ ಗೌಡ?

ರಿಷಾ ಗೌಡ ಅವರು ನಟಿ. ಆಸ್ಟಿನ್​​ ನ ಮಹಾನ್ ಮೌನ’, ‘ಬೆಂಗಳೂರು ಇನ್’, ‘ಜೂನಿಯರ್’, ‘ಗ್ಯಾಂಗ್​​ಸ್ಟರ್ ಆಫ್ ರಾಜಧಾನಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರ ಕನಸು ಇದ್ದದ್ದು ಕ್ರೀಡಾಪಟು ಆಗಬೇಕು ಎನ್ನುವುದು.

56
ನನಸಾಗದ ಕ್ರೀಡಾ ಲೋಕ

ಆದರೆ, ವೇಗದ ಓಟಗಾರ್ತಿ ಆಗಿದ್ದರು. ಆದರೆ, ಅವರಿಗೆ ಆದ ಲಿಗಮೆಂಟ್ ಫ್ರ್ಯಾಕ್ಚರ್​ನಿಂದ ಕ್ರೀಡೆಯ ಕನಸು ನನಸಾಗದೇ ಕೊನೆಗೆ ಬಂದದ್ದು ನಟನಾ ಲೋಕಕ್ಕೆ.

66
ವಿಪರೀತ ಕೋಪ

ನನಗೆ ತುಂಬಾ ಕೋಪ. ಯಾವುದಕ್ಕೂ ಕಾಂಪ್ರೊಮೈಸ್ ಆಗಲ್ಲ ಎಂದಿದ್ದಾರೆ ರಿಷಾ. ನಿಷ್ಠುರ ಆಗಿರುವವಳು ನಾನು. ಯಾವುದೇ ವಿಷಯ ಹೇಳಲು ನಾನು ಹಿಂದೆ-ಮುಂದೆ ನೋಡುವುದಿಲ್ಲ. ದೊಡ್ಡವರಿಗೆ ಬಿಟ್ಟರೆ ಇನ್ಯಾರಿಗೂ ಗೌರವ ಕೊಡಲ್ಲ ಎಂದಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories