Bigg Boss ಜಾನ್ವಿ ಮಿದುಳು ಇರೋದು ಆ ಸ್ಪರ್ಧಿ ಕೈಯಲ್ಲಿ! ಸುದೀಪ್​ ಎದುರು ಅಶ್ವಿನಿ ಭಾರಿ ಆರೋಪ- ನಕ್ಕೂ ನಕ್ಕೂ ಸುಸ್ತಾದ ಕಿಚ್ಚ

Published : Oct 20, 2025, 02:46 PM IST

ಬಿಗ್​ಬಾಸ್​ ಮಿಡ್​ ಸೀಸನ್​ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಕಳೆದ ವಾರ ರಕ್ಷಿತಾ ಶೆಟ್ಟಿ, ಜಾನ್ವಿ ಮತ್ತು ಅಶ್ವಿನಿ ಗೌಡ ನಡುವೆ ನಡೆದ ವೈಯಕ್ತಿಕ ನಿಂದನೆಯ ಜಗಳ ತಾರಕಕ್ಕೇರಿದ್ದು, ಇದಕ್ಕಾಗಿ ನಟ ಸುದೀಪ್ ಅವರಿಂದ ಸ್ಪರ್ಧಿಗಳು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

PREV
16
ಮಿಡ್​ ಸೀಸನ್​ ಫಿನಾಲೆ

ಬಿಗ್​ಬಾಸ್​ (Bigg Boss)ನಲ್ಲಿ ಇದೀಗ ಆಟ ಸಕತ್​ ಜೋರಾಗಿ ನಡೆಯುತ್ತಿದೆ. ಮಿಡ್​ ಸೀಸನ್​ ಫಿನಾಲೆಯಲ್ಲಿ ಇಬ್ಬರು ಔಟ್​ ಆಗಿ ನಿನ್ನೆ ಹೊರಬಂದರು. ಧ್ರುವಂತ್, ಕಾವ್ಯ ಶೈವ, ಮಂಜು ಭಾಷಿಣಿ, ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ಧನುಷ್‌‌ ಗೌಡ, ಅಭಿಷೇಕ್ ಶ್ರೀಕಾಂತ್‌, ಮಲ್ಲಮ್ಮ, ಚಂದ್ರಪ್ರಭ, ಅಶ್ವಿನಿ ಎಸ್‌ಎಸ್‌, ರಕ್ಷಿತಾ ಶೆಟ್ಟಿ ಅವರು ನಾಮಿನೇಟ್‌ ಆಗಿದ್ದರು. ಕೊನೆಗೆ ಡಾಗ್ ಸತೀಶ್, ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್​.ಎಸ್​ ಹೊರಕ್ಕೆ ಬಂದಿದ್ದಾರೆ.

26
ಹೈಲೈಟ್​ ಆಗಿದ್ದು ಗಲಾಟೆ

ಆದರೆ, ಕಳೆದ ವಾರ ತುಂಬಾ ಹೈಲೈಟ್​ ಆಗಿದ್ದು, ಅಶ್ವಿನಿ ಗೌಡ, ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ (Rakshita Shetty) ನಡುವಿನ ಮಿಡ್​ನೈಟ್​ ಗಲಾಟೆ. ಈ ಸಂದರ್ಭದಲ್ಲಿ ಒಂದು ಹಂತದಲ್ಲಿ ರಕ್ಷಿತಾ ಅವರ ತೀರಾ ವೈಯಕ್ತಿಯ ನಿಂದನೆಯನ್ನೂ ಮಾಡಿದ್ದರು ಜಾನ್ವಿ ಮತ್ತು ಅಶ್ವಿನಿ. ನೀನು ಬಂದಿದ್ದು ಎಲ್ಲಿಂದ ಎಂದು ನೋಡಿದ್ರೆ ಗೊತ್ತಾಗತ್ತೆ... ಹೀಗೆ ಏನೇನೋ ಹೇಳುವ ಮೂಲಕ ಗಡಿಯನ್ನು ದಾಟಿದ್ದರು.

36
ಸುದೀಪ್​ರಿಂದ ಕ್ಲಾಸ್​

ಇದಕ್ಕಾಗಿ ಅವರು ಸುದೀಪ್​ (Sudeep) ಅವರಿಂದ ಕ್ಲಾಸ್​​ ಕೂಡ ತೆಗೆದುಕೊಂಡಿದ್ದಾರೆ. ನೀವು ಹೀಗೆ ಪರ್ಸನ್ಯಾಲಿಟಿಗಳನ್ನು ಕೊಲೆ ಮಾಡ್ತಾ ಹೋದರೆ Are You People Ok with it? ಎಂದು ಪ್ರಶ್ನಿಸಿದಾಗ ಎಲ್ಲರೂ ಸುಮ್ಮನಾದರು. ಸುದೀಪ್​ (Kichcha Sudeep) ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಒಬ್ಬರ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬರ ಆಟದ ಸಾಮಾನು ಆಗಬಾರದು. ಮರ್ಯಾದೆ ಎನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ ಎಂದು ಮೇಜನ್ನು ಕುಕ್ಕಿ ಹೇಳಿದರು.

46
ಜಾನ್ವಿ ಬಗ್ಗೆ ಅಶ್ವಿನಿ ಎನ್​ಎಸ್​ ಮಾತು

ಇದೀಗ ಹೊರಬಂದಿರುವ ಅಶ್ವಿನಿ ಎನ್​.ಎಸ್​ ಮತ್ತು ಮಂಜು ಭಾಷಿಣಿ ಅವರನ್ನು ಸುದೀಪ್​ ಅವರು ಇವರಿಬ್ಬರ ಬಗ್ಗೆ ನಿಮಗೆ ಏನು ಎನ್ನಿಸುತ್ತದೆ ಎಂದು ಜಾನ್ವಿ ಮತ್ತು ಅಶ್ವಿನಿ ಗೌಡ ಅವರನ್ನು ಉದ್ದೇಶಿಸಿ ಕೇಳಿದ್ದಾರೆ.

56
ಮಿದುಳು ಅವ್ರ ಕೈಯಲ್ಲಿ

ಅದಕ್ಕೆ ಅಶ್ವಿನಿ ಎನ್​.ಎಸ್​ ಅವರು, ನೋಡಿ ಸರ್​, ಅವರು ಇದ್ದಾರಲ್ಲ (ಜಾನ್ವಿ), ಅವರು ಟೀಚರ್​ ಅಂತೆ. ಯಾವ ಟೀಚರೋ ನನಗೆ ಗೊತ್ತಿಲ್ಲ. ಆದ್ರೆ ಮಿದುಳನ್ನು ಮಾತ್ರ ಪಕ್ಕದಲ್ಲಿ ಇದ್ದಾರಲ್ಲ, (Ashwini Gowda) ಅವರ ಕೈಗೆ ಕೊಟ್ಟಿದ್ದಾರೆ. ಅವರು ನೋಡಿ ಏನು ಮಾಡ್ತಾರೆ ಎಂದು ಹೇಳಿದ್ದಾರೆ. ಆಗ ಅಲ್ಲಿ ಜಾನ್ವಿ ಆಕಳಿಸ್ತಿರೋದನ್ನು ನೋಡಬಹುದು.

66
ನೆಟ್ಟಿಗರಿಂದಲೂ ಟೀಕೆ

ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಕೂಡ ಇವರಿಬ್ಬರ ವಿರುದ್ಧ ಸಾಕಷ್ಟು ಕಮೆಂಟ್ಸ್​, ಟೀಕೆಗಳು ಬರುತ್ತಿವೆ. ಜಾನ್ವಿ ಅವರು ಅಶ್ವಿನಿ ಗೌಡ ಅವರಿಗೆ ಬಕೆಟ್​ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಮೊನ್ನೆ ರಾತ್ರಿ ರಕ್ಷಿತಾ ಶೆಟ್ಟಿ ವಿರುದ್ಧ ಮಾತನಾಡಿದ್ದಕ್ಕಾಗಿ ಇವರಿಬ್ಬರೂ ಸಾಕಷ್ಟು ಟ್ರೋಲ್​ಗೂ ಒಳಗಾಗುತ್ತಿದ್ದಾರೆ.

ವಿಡಿಯೋ ಇಲ್ಲಿದೆ…

Read more Photos on
click me!

Recommended Stories