Bigg Boss: ರಕ್ಷಿತಾ ಮೇಲೆ ಸುದೀಪ್​ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?

Published : Dec 19, 2025, 05:07 PM IST

ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಮೇಲೆ ಸುದೀಪ್ ಗರಂ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಆರೋಪಗಳಿಗೆ ಇದೀಗ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯಿಸಿದ್ದು, ಸುದೀಪ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.  

PREV
16
ರಕ್ಷಿತಾ ಶೆಟ್ಟಿ ಬಗ್ಗೆ ಸುದೀಪ್​

ಕೆಲವು ವಾರಗಳ ಹಿಂದೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ವಿಷಯದಲ್ಲಿ ಸುದೀಪ್​ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಇದ್ದರು. ಆದರೆ ಟಾಸ್ಕ್​​ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದರು. ಇದು ಅಶ್ವಿನಿಗೆ ಸಿಟ್ಟು ತರಿಸಿತ್ತು. ರಕ್ಷಿತಾ ತಂಡದ ವಿರುದ್ಧವೇ ಗಿಲ್ಲಿ ನಟ (Gilli Nata) ಎತ್ತಿ ಕಟ್ಟಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸುದೀಪ್​ ಅವರು ರಕ್ಷಿತಾ ವಿರುದ್ಧ ಗರಂ ಆಗಿದ್ದರು.

26
ರಕ್ಷಿತಾ ವಿರುದ್ಧ ಗರಂ

ನೀವು ನನ್ನ ಪಿತ್ತವನ್ನು ನೆತ್ತಿಗೇರಿಸುತ್ತಾ ಇದ್ದೀರಿ ಎಂದಿದ್ದರು. ರಕ್ಷಿತಾ ಶೆಟ್ಟಿ ನಾನ್ಯಾವಾಗ ಇರಿಟೇಟ್​ ಮಾಡಿದ್ದೆ ಎಂದು ಗೊತ್ತಿಲ್ಲದೇ ಮರು ಪ್ರಶ್ನೆ ಮಾಡಿದಾಗ ಸುದೀಪ್​ ಏಕಾಏಕಿ ಹೀಗೆ ಗರಂ ಆಗಿದ್ದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು.

36
ಕೆಟ್ಟ ಕಮೆಂಟ್ಸ್​

ಅಶ್ವಿನಿ ಗೌಡ ಅವರು ಬರೀ ಜಗಳದಿಂದಲೇ ಕಿತ್ತಾಡುತ್ತಿದ್ದರೂ ಸುದೀಪ್​ ಅವರ ಬಗ್ಗೆ ಸಾಫ್ಟ್​ ಕಾರ್ನರ್​ ಆಗಿದ್ದು, ರಕ್ಷಿತಾ ಶೆಟ್ಟಿ ಬಡವಳು ಎನ್ನುವ ಕಾರಣಕ್ಕೆ ಪಿತ್ತ ನೆತ್ತಿಗೆ ಏರಿಸಿಕೊಂಡರು. ಅಶ್ವಿನಿ ಗೌಡ (Bigg Boss Ashwini Gowda) ವಿರುದ್ಧ ಕಿಚ್ಚನ ಪಿತ್ತ ನೆತ್ತಿಗೆ ಏರೋದಿಲ್ಲ ಯಾಕೆ ಎಂಬೆಲ್ಲಾ ಕಮೆಂಟ್ಸ್​ ಹರಿದಾಡಿದವು.

46
ವಿನಯ್​ ಗೌಡ ಏನಂದ್ರು?

ಇದಾದ ಮರು ವಾರವೇ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತು. ಇದೀಗ ಈ ಬಗ್ಗೆ ಕಳೆದ ಬಿಗ್​ಬಾಸ್​ 10ರ ಸ್ಪರ್ಧಿಯಾಗಿದ್ದ ವಿನಯ್​ ಗೌಡ (Bigg Boss Vinay Gowda) ಅವರು ಮಾಧ್ಯಮದ ಜೊತೆ ಮಾತನಾಡಿ, ಇದರ ಬಗ್ಗೆ ಉತ್ತರಿಸಿದ್ದಾರೆ.

56
ಸುದೀಪ್​ಗೆ ಗೊತ್ತಿದೆ

ಸುದೀಪ್​ ಸರ್​ ಅವರಿಗೆ ಯಾರಿಗೆ, ಯಾವಾಗ, ಏನು ಹೇಳಬೇಕು ಎನ್ನುವುದು ಗೊತ್ತಿದೆ. ಅದಕ್ಕಾಗಿಯೇ ಅವರು ಇಷ್ಟೂ ಷೋಗಳನ್ನು ನಡೆಸಿಕೊಂಡು ಬಂದಿದ್ದಾರೆ. ರಕ್ಷಿತಾ ಶೆಟ್ಟಿಯೇ ತಾವು ಮಾಡಿದ್ದು ತಪ್ಪಾಯ್ತು ಎಂದು ಕೊನೆಗೆ ಒಪ್ಪಿಕೊಂಡು ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.. ಆದರೆ ಆ ಬಗ್ಗೆ ಯಾರೂ ಮಾತನಾಡದೇ ಸುಖಾಸುಮ್ಮನೇ ಏನೇನೋ ಆರೋಪ ಹೊರಿಸುತ್ತಾರೆ ಎಂದರು.

66
ಇವೆಲ್ಲಾ ನಿಜವಲ್ಲ

ಸುದೀಪ್​ ಅವರಿಗೆ, ಯಾರಿಗೆ ಏನು ಹೇಳಬೇಕು ಎನ್ನೋದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಅವರು ಸಂದರ್ಭ, ಸಮಯ ಎಲ್ಲವನ್ನೂ ಮ್ಯಾನೇಜ್​ ಮಾಡಿ, ಸರಿಯಾದ ನಿರ್ಧಾರವನ್ನೇ ಮಾಡುತ್ತಾರೆ. ಸೋಷಿಯಲ್​ಮೀಡಿಯಾದಲ್ಲಿ ಯಾರೋ ಏನೋ ಹೇಳ್ತಾರೆ ಎನ್ನುವ ಮಾತ್ರಕ್ಕೆ ಅದೆಲ್ಲಾ ನಿಜವಾದದ್ದಲ್ಲ ಎಂದಿದ್ದಾರೆ.

Read more Photos on
click me!

Recommended Stories