Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನಿಗೆ ಈ ಮನೆಯಲ್ಲಿ ಉಳಿದುಕೊಳ್ಳೋಕೆ ಏನಾದರೂ ಕಂಟೆಂಟ್ ಬೇಕು, ಅವನು ಯಾರನ್ನಾದರೂ ಹುಡುಕುತ್ತಾನೆ ಎಂದು ಧ್ರುವಂತ್, ಜಾಹ್ನವಿ, ಅಶ್ವಿನಿ ಗೌಡ ಹೇಳುತ್ತಿದ್ದರು. ಈಗ ಈ ವಿಚಾರವನ್ನು ಸ್ವತಃ ಗಿಲ್ಲಿ ಒಪ್ಪಿಕೊಂಡಿದ್ದಾರೆ.
ಬೇರೆಯವರನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾರೆ, ತೇಜೋವಧೆ ಮಾಡುತ್ತಾರೆ, ಬೇರೆಯವರ ವ್ಯಕ್ತಿತ್ವವನ್ನು ತಿರುಚುತ್ತಾರೆ, ಹೀಗೆ ಗಿಲ್ಲಿ ನಟನ ಮೇಲೆ ಅನೇಕರಿಗೆ ದೂರಿದೆ. ದೊಡ್ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಕೂಡ ಇದೇ ಅಭಿಪ್ರಾಯವನ್ನು ಹೇಳಿದ್ದರು. ಅಂದಹಾಗೆ ಸೀಸನ್ 11 ಸ್ಪರ್ಧಿಗಳು ಅತಿಥಿಯಾಗಿ ಬಂದಾಗ ಕೂಡ ಹೀಗೆ ಹೇಳಿದ್ದರು
25
ಗಿಲ್ಲಿ ಕಾಮಿಡಿಗೆ ಫುಲ್ ಮಾರ್ಕ್ಸ್ ಇಲ್ಲ
ಅಶ್ವಿನಿ ಗೌಡ, ರಿಷಾ ಗೌಡ, ಧ್ರುವಂತ್, ರಕ್ಷಿತಾ ಶೆಟ್ಟಿ, ರಘು ಜೊತೆ ಈಗಾಗಲೇ ಗಿಲ್ಲಿ ನಟ ದೊಡ್ಡ ಮಟ್ಟದಲ್ಲಿ ಜಗಳ ಆಡಿದ್ದರು. ಅವಕಾಶ ಸಿಕ್ಕಾಗೆಲ್ಲ ಇವರನ್ನು ಕಾಮಿಡಿ ಮಾಡಿದ್ದರು. ಹೀಗಾಗಿ ಗಿಲ್ಲಿ ಕಂಡರೆ ಇವರಿಗೆ ಅಷ್ಟಕ್ಕಷ್ಟೇ. ನಾಲ್ಕು ವಾರಗಳ ಬಳಿಕ ಅಶ್ವಿನಿ ಗೌಡ ಸೈಲೆಂಟ್ ಆಗಿದ್ದು, ರಿಷಾ ಗೌಡ, ಜಾಹ್ನವಿ ಮನೆಗೆ ಹೋಗಿದ್ದಕ್ಕೆ ಗಿಲ್ಲಿ ನಟನಿಗೆ ಕಂಟೆಂಟ್ ಇರಲಿಲ್ಲ. ಹೀಗೆಂದು ಅಲ್ಲಿದ್ದವರೇ ಮಾತನಾಡಿಕೊಂಡಿದ್ದಾರೆ. ಈಗ ಈ ಮಾತನ್ನು ಸ್ವತಃ ಗಿಲ್ಲಿ ಒಪ್ಪಿಕೊಂಡಿದ್ದಾರೆ.
35
ನನ್ನ ತಂಟೆಗೆ ಬರಬೇಡ
ಚೈತ್ರಾ ಕುಂದಾಪುರ ಅವರು ಆಟದ ವಿಚಾರವಾಗಿ ನ್ಯಾಯವಾಗಿ ಆಟ ಆಡಿಲ್ಲ, ಉಸ್ತುವಾರಿ ಮಾಡಿಲ್ಲ ಎಂಬ ಆರೋಪ ಇತ್ತು. ಚೈತ್ರಾ ಬಂದಾಗಿನಿಂದಲೂ ಅವರನ್ನು ಮುದುಕಿ ಅಂತ ಹೇಳೋದು, ಮಲ್ಲಮ್ಮನಿಗೆ ಹೋಲಿಕೆ ಮಾಡಿ ಮಾತನಾಡೋದು ನಡೆಯುತ್ತಲೇ ಇತ್ತು. ನನ್ನ ಸುದ್ದಿಗೆ ಬರಬೇಡ, ನನಗೆ ಗಂಡ, ಅತ್ತೆ ಎಲ್ಲರೂ ಇದ್ದಾರೆ ಎಂದು ಚೈತ್ರಾ ಹೇಳುತ್ತಲೇ ಇದ್ದರು.
ಕಳೆದ ಸೀಸನ್‌ನಲ್ಲಿ 7 ಸಲ ಕಳಪೆಗೆ ಹೋಗಿದ್ಯಂತೆ, ಪ್ರತಿ ಶುಕ್ರವಾರ ಹುಷಾರು ತಪ್ಪುತ್ತೀಯಂತೆ, ನಾ ಕಂಡ ಚೈತ್ರಾ ಅಂತ ಬುಕ್ ಬರೆಯಲಾ? ಎಂದು ಗಿಲ್ಲಿ, ಚೈತ್ರಾಗೆ ಹೇಳಿದ್ದರು. ಇದು ಚೈತ್ರಾಗೆ ಸಿಟ್ಟು ತರಿಸಿತ್ತು. ಎಷ್ಟೇ ಸಲ ಹೇಳಿದರೂ ಕೂಡ ಗಿಲ್ಲಿ ಕೇಳದೆ, ಮಾತನಾಡಿದ ಎಂದು ಚೈತ್ರಾ ಬೇಸರ ಹೊರಹಾಕಿದ್ದರು.
55
ಮನೆ ಸೈಲೆಂಟ್ ಆಗಿರಬಾರದು
ಕೀ ಕೊಟ್ಟರೆ ಸಾಕು ಕಿಟಾರ್ ಅಂತ ಕಿರುಚುತ್ತಾರೆ. ಇಂಥ ಕಿತಾಪತಿ ಹೆಂಗಸನ್ನು ನಾನು ನೋಡೇ ಇಲ್ಲ. ಏನು ಅಕ್ಕಾ, ಸಪ್ಪಗಿದ್ಯಾ? ಎಂದು ಕೇಳಿದ್ರೆ ಸಾಕು. ನಾನು ವೀಕ್ ಮೈಂಡ್ ಅಲ್ಲ, ಸ್ಟ್ರಾಂಗ್ ಎಂದು ಶುರು ಮಾಡುತ್ತಾರೆ. ಎಲ್ಲಿ ಕೀ ಕೊಡಬೇಕು ಎಂದು ಗೊತ್ತಾಗೋಯ್ತು, ರಿಷಾ ಹೋದ್ಮೆಲೆ ಯಾರೂ ಇರಲಿಲ್ಲ, ಸರಿಯಾಗಿ ಸಿಕ್ಕಿದ್ದಾರೆ. ಮನೆ ಸೈಲೆಂಟ್ ಆಗಿರಬಾರದು, ಕಿಲಕಿಲ ಎನ್ನುತ್ತಿರಬೇಕು. ನಾನು ಬಿಡೋದಿಲ್ಲ ಎಂದು ಗಿಲ್ಲಿ ನಟ ಅವರೇ ರಜತ್ ಮುಂದೆ ಹೇಳಿಕೊಂಡಿದ್ದಾರೆ.