Bigg Boss ಮನೆಯಿಂದ ಹೊರಬರಲು ಆ ಒಂದು ತಪ್ಪು ಕಾರಣವಾಯ್ತು ಎನ್ನಿಸುತ್ತೆ: Suraj Singh​ ಹೇಳಿದ್ದೇನು?

Published : Dec 29, 2025, 02:10 PM IST

ವೈಲ್ಡ್​ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಸೂರಜ್​ ಸಿಂಗ್​ ಇದೀಗ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾಗಿಂತ ತಮಗೆ ಹೆಚ್ಚು ಅರ್ಹತೆ ಇತ್ತು ಎಂದು ಹೇಳಿಕೊಂಡಿರುವ ಅವರು, ಹೆಚ್ಚು ಜನರೊಂದಿಗೆ ಬೆರೆಯದ ತಮ್ಮ ಸ್ವಭಾವವೇ ಆಟಕ್ಕೆ ಮುಳುವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
15
ಬಿಗ್​ಬಾಸ್​ ಕ್ರಷ್​

ವೈಲ್ಡ್​ಕಾರ್ಡ್​ ಮೂಲಕ ಬಿಗ್​ಬಾಸ್​ 12 (Bigg Boss Kananda 12) ಎಂಟ್ರಿ ಕೊಟ್ಟಿ ಬಿಗ್​ಬಾಸ್​ ಕ್ರಷ್​ ಸೂರಜ್​ ಸಿಂಗ್​ ಆಟದ ಮೂರನೆಯ ತಿಂಗಳು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ರಾಶಿಕಾ ಶೆಟ್ಟಿ ಜೊತೆಗಿನ ಲವ್​ಸ್ಟೋರಿಯಿಂದಾಗಿ ಫೇಮಸ್​ ಆಗಿದ್ದ ಸೂರಜ್​ ಅವರು ಇದೀಗ ತಾವು ಮನೆಯಿಂದ ಹೊರಕ್ಕೆ ಬರಲು ಏನು ಕಾರಣ ಇದ್ದಿರಬಹುದು ಎನ್ನುವುದನ್ನು ಊಹಿಸಿಕೊಂಡಿದ್ದಾರೆ.

25
ಅವರಿಗಿಂತಲೂ ಅರ್ಹತೆ ಇತ್ತು

ಮಾಧ್ಯಮಗಳ ಜೊತೆಗಿನ ಸಂದರ್ಶನದಲ್ಲಿ ಸೂರಜ್​ ಅವರು, ತಾವು ಇನ್ನೂ ಸ್ವಲ್ಪ ದಿನ ಇರಬೇಕಿತ್ತು. ಆ ಅರ್ಹತೆ ನನಗೆ ಇತ್ತು ಎನ್ನುವ ಮೂಲಕ ಇದಾಗಲೇ ಕೆಲವು ಸ್ಪರ್ಧಿಗಳು ಹೇಳಿದಂತೆ ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರಿಗಿಂತಲೂ ನನಗೆ ಹೆಚ್ಚು ಅರ್ಹತೆ ಇತ್ತು. ಆದರೆ ಜನ ಅದನ್ನು ಹೇಗೆ ಸ್ವೀಕರಿಸಿದರೋ ಗೊತ್ತಿಲ್ಲ ಎಂದಿದ್ದಾರೆ.

35
ಹೊರ ಬರಲು ಕಾರಣವೇನು?

ಇದೇ ವೇಳೆ, ತಾವು ಹೊರಕ್ಕೆ ಬರಲು ಒಂದು ವಿಷಯ ಕಾರಣ ಆಗಿದ್ದಿರಬಹುದು ಎಂದು ಅವರು ಹೇಳಿದ್ದಾರೆ. ನಾನು ಹೆಚ್ಚು ಜನರ ಜೊತೆ ಮಿಂಗಲ್​ ಆಗುವುದಿಲ್ಲ. ಕ್ಯಾಮೆರಾ ಇಷ್ಟೊಂದು ಫೇಸ್​ ಮಾಡಿ ಗೊತ್ತಿಲ್ಲ. ಬಹುಶಃ ಎಲ್ಲರ ಜೊತೆ ಸೇರದೇ ಇದ್ದದ್ದು ನೆಗೆಟಿವ್​ ಆಗಿದ್ದಿರಬಹುದು ಎಂದು ಹೇಳಿಕೊಂಡಿದ್ದಾರೆ.

45
ಸ್ಟಕ್​ ಆಗಿಬಿಟ್ಟೆ

ಇದೇ ವೇಳೆ ಒಂದೇ ಕಡೆ ಸ್ಟಕ್​ ಆಗಿಬಿಟ್ಟೆ ಎಂದು ಜನರು ಏನೇನೋ ಮಾತನಾಡುತ್ತಿದ್ದಾರೆ ಎಂದು ರಾಶಿಕಾ ಶೆಟ್ಟಿ ಬಗೆಗಿನ ಮಾತಿನ ಕುರಿತು ಪರೋಕ್ಷವಾಗಿ ಸೂರಜ್​ ಸಿಂಗ್​ (Bigg Boss Suraj Singh) ಮಾತನಾಡಿದ್ದಾರೆ.

55
ಬೇರೆ ರೀತಿ ಅರ್ಥ

ನನಗೆ ಅವರು, ಇವರು ಅಂತೇನೂ ಇಲ್ಲ. ನನ್ನ ಜೊತೆ ಯಾರಾದ್ರೂ ಚೆನ್ನಾಗಿ ಮಾತನಾಡಿದರೆ ಅವರ ಜೊತೆ ಚೆನ್ನಾಗಿ ಇರುತ್ತೇನೆ ಅಷ್ಟೇ. ಹೆಚ್ಚು ಜನರ ಜೊತೆ ಸೇರುವುದು ನನ್ನ ಸ್ವಭಾವ ಅಲ್ಲ. ಆದರೆ, ಅದನ್ನೇ ಬೇರೆ ಬೇರೆ ರೀತಿಯಲ್ಲಿ ಎಲ್ಲರೂ ಅರ್ಥೈಸಿಕೊಂಡರು ಎಂದು ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories