ಅಪ್ಪನಾಗೋ ಸಂಭ್ರಮದಲ್ಲಿರುವ ‘Brahmagantu’ ನರಸಿಂಹ… ಪತ್ನಿ ಜೊತೆ ಮೆಟರ್ನಿಟಿ ಫೋಟೊ ಶೂಟ್

Published : Dec 29, 2025, 02:06 PM IST

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಾಯಕಿ ದೀಪಾ ಅಣ್ಣ ನರಸಿಂಹನಾಗಿ ನಟಿಸುತ್ತಿರುವ ನಟ ಹಾಗೂ ಗಾಯಕ ಭರತ್ ನಾಯಕ್ ತಂದೆಯಾಗುವ ಸಂಭ್ರಮದಲ್ಲಿದ್ದು, ಇದೀಗ ಪತ್ನಿ ಜೊತೆ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

PREV
18
ಬ್ರಹ್ಮಗಂಟು ನರಸಿಂಹ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ತಂಗಿಗಾಗಿ ಎಂತಹ ತ್ಯಾಗವನ್ನು ಮಾಡಲು ಸಿದ್ಧವಾಗಿರುವ ಅಣ್ಣ ನರಸಿಂಹನ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ತಲುಪಿದ ನಟ ಅಂದ್ರೆ ಅದು ಭರತ್ ನಾಯಕ್. ಇದೀಗ ನಟ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.

28
ಭರತ್ ನಾಯಕ್

ಇದ್ರೆ ಇಂತಹ ಅಣ್ಣ ಇರಬೇಕು ಎನ್ನುವ ರೇಂಜಿಗೆ ಕನ್ನಡಿಗರು ಇಷ್ಟಪಟ್ಟಿರುವ ಭರತ್ ನಾಯಕ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗಷ್ಟೇ ನಟ ಅದ್ಧೂರಿಯಾಗಿ ಪತ್ನಿಯ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದರು.

38
ಪತ್ನಿಯ ಅದ್ಧೂರಿ ಸೀಮಂತ

ಭರತ್ ನಾಯಕ್ ಪತ್ನಿ ಪ್ರತಿಭಾ ಸಿಪಿ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಸಂಭ್ರಮದಿಂದ ನಡೆದಿತ್ತು. ನಟ ತನ್ನ ಪತ್ನಿಯಾಗಿ ಹಾಡನ್ನು ಕೂಡ ಹಾಡಿದ್ದು, ಇವರ ಸೀಮಂತ ವಿಡಿಯೋ ಮತ್ತು ಫೋಟೊಗಳು ವೈರಲ್ ಆಗಿದ್ದವು.

48
ಅಣ್ಣನಾಗಿ-ಗಂಡನಾಗಿ ಬೆಸ್ಟ್

ಭರತ್ ನಾಯ್ಕ್ ಸೀರಿಯಲ್ ನಲ್ಲಿ ಅಣ್ಣನಾಗಿ ಸೈ ಅನಿಸಿಕೊಂಡಿದ್ದಾರೆ. ನೋಡಿದವರು ನಮಗೂ ಇಂತಹ ಅಣ್ಣ ಇರಬಾರದೆ ಎಂದಿದ್ದಾರೆ. ಇದೀಗ ಸೀಮಂತದಂದು ಹೆಂಡತಿಯ ತೊಡೆಮೇಲೆ ತಲೆ ಇಟ್ಟು ಚಿನ್ನದ ಅರಮನೆಯ ಚಿನ್ನ ನೀನು ಎನ್ನುವ ಹಾಡು ಹಾಡಿರುವುದನ್ನು ನೋಡಿ, ಇದ್ರೆ ಇಂತಹ ಗಂಡ ಇರಬೇಕು ಎಂದು ಜನ ಹೇಳುತ್ತಿದ್ದಾರೆ.

58
ಮೆಟರ್ನಿಟಿ ಫೋಟೊ ಶೂಟ್

ಇದೀಗ ಭರತ್ ಮತ್ತು ಪ್ರತಿಭಾ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಪತ್ನಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರೆ, ನಟ ಭರತ್ ಐವರಿ ಬಣ್ಣದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದಾರೆ. ಫೋಟೊ ಕೂಡ ಆಸ್ತೆಟಿಕ್ ಟಚ್ ಮೂಲಕ ಸುಂದರವಾಗಿ ಬಂದಿದೆ.

68
ಗಾಯಕರಾಗಿರುವ ಭರತ್

ಭರತ್​ ನಾಯಕ್ ಅವರು ಮೂಲತಃ ಗಾಯಕರಾಗಿದ್ದಾರೆ. ಅವರದ್ದೇ ಆದ ಮ್ಯೂಸಿಕ್ ಬ್ಯಾಂಡ್‌ ಇದೆ. ಹಲವಾರು ಕಡೆ ಸ್ಟೇಜ್ ಪ್ರೋಗ್ರಾಮ್ ಗಳನ್ನೂ ಕೊಟ್ಟಿದ್ದಾರೆ. ಅದರ ಜೊತೆಗೆ ಇವರು ರಂಗಭೂಮಿ ಕಲಾವಿದರೂ ಹೌದು. ಈಗ ಬ್ರಹ್ಮಗಂಟು ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ.

78
ಸೋಷಿಯಲ್ ಮೀಡಿಯಾದಲ್ಲಿ ಎಂಗೇಜ್ ಆಗಿರುವ ಜೋಡಿ

ಭರತ್ ನಾಯ್ಕ್ ಮತ್ತು ಪ್ರತಿಭಾ ಜೋಡಿ ಮದುವೆಯಾಗಿ ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮುದ್ದಾದ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

88
ಈವೆಂಟ್ ಮ್ಯಾನೆಜ್’ಮೆಂಟ್ ಕೂಡ ಇದೆ

ಭರತ್ ನಾಯಕ್ ಕೇವಲ ನಟ-ಗಾಯಕ ಮಾತ್ರವಲ್ಲ, ಇವರು ಪತ್ನಿಯ ಜೊತೆಗೂಡಿ ಕಲಾಧರ ಕ್ರಿಯೇಷನ್ಸ್ ​ಎನ್ನುವ ಈವೆಂಟ್​ ಮ್ಯಾನೇಜ್​ಮೆಂಟ್​ ಅನ್ನು ಕೂಡ ನಡೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories