ಬಿಗ್ ಬಾಸ್ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿದ್ದ ಗ್ಲಾಸ್‌ನ ಪಾನೀಯದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ವೈರಲ್ ವಿಡಿಯೋವೊಂದರಲ್ಲಿ ಸ್ವತಃ ಸುದೀಪ್ ಅವರೇ ಆ ಗ್ಲಾಸ್ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಅವರು ಹೇಳಿದ್ದೇನು?
Bigg Boss ಪ್ರೊಮೋ ಈ ಬಾರಿ ರಿಲೀಸ್ ಆದಾಗ ಕಿಚ್ಚ ಸುದೀಪ್ ಕೈಯಲ್ಲಿ ಗ್ಲಾಸ್ ಒಂದನ್ನು ಹಿಡಿದುಕೊಂಡಿದ್ದರು. ಅದರಲ್ಲಿ ಕಪ್ಪು ಬಣ್ಣದ ಪಾನೀಯವಿತ್ತು. ಆ ಬಗ್ಗೆ ಹಲವು ವೀಕ್ಷಕರು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಲವು ಕಮೆಂಟಿಗರು ಅದೇನು ಎಂದು ಪ್ರಶ್ನೆ ಮಾಡಿದ್ದರು. ಆದರೆ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ.
26
ಗ್ಲಾಸ್ನಲ್ಲಿ ಏನಿದೆ?
ಅಷ್ಟಕ್ಕೂ ಸುದೀಪ್ ಅವರು ಬಿಗ್ಬಾಸ್ ಸಮಯದಲ್ಲಿ ಈ ರೀತಿಯ ಗ್ಲಾಸ್ ಹಿಡಿದಿರುವುದು ಇದೇ ಮೊದಲೇನಲ್ಲ. ಪ್ರತಿ ಬಾರಿಯೂ ಅವರ ಕೈಯಲ್ಲಿ ಈ ಗ್ಲಾಸ್ ಇದ್ದೇ ಇರುತ್ತದೆ. ಅದರಲ್ಲಿ ಇರುವುದು ಏನು ಎನ್ನುವುದು ಮಾತ್ರ ಅವರು ಇಲ್ಲಿಯವರೆಗೆ ರಿವೀಲ್ ಮಾಡಿರಲಿಲ್ಲ.
36
ವಿಡಿಯೋ ವೈರಲ್
ಆದರೆ ಇದೀಗ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಸುದೀಪ್ ಅವರು ತೆಲುಗುನವರು ನನಗೆ ಈ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ. ಆದ್ದರಿಂದ ಅವರಿಗಾಗಿ ಈ ವಿಷ್ಯ ಹೇಳುತ್ತಿದ್ದೇನೆ ಎಂದಿದ್ದಾರೆ.
ನನ್ನ ಕೈಯಲ್ಲಿ ಇರುವ ಗ್ಲಾಸ್ನಲ್ಲಿ ಇರೋದೇನು ಎಂದು ತೆಲುಗು ಬಿಗ್ಬಾಸ್ನಲ್ಲಿ ಕೇಳಲಾಗುತ್ತೆ. ಅವರಿಗಾಗಿ ಈ ಉತ್ತರ ಎಂದು ತೆಲುಗುವಿನಲ್ಲಿಯೇ ಉತ್ತರಿಸಿದ್ದಾರೆ ಸುದೀಪ್.
56
ಇದರಲ್ಲಿ ಇರೋದು...
ಇದು ರಮ್, ವಿಸ್ಕಿ, ವೋಡ್ಕಾ, ಟಕೀಲಾ... ಎನ್ನುತ್ತಲೇ ಅದ್ಯಾವುದೂ ಅಲ್ಲ. ಇದು ಕಾಫಿ ಎಂದು ಹೇಳಿದ್ದಾರೆ.
66
ಫುಲ್ ಬಾಟಲ್ ಬೇಕು
ಈ ಮೇಲೆ ತಿಳಿಸಿದ ಯಾವುದೂ ಈ ಬಾಟಲಿಯಲ್ಲಿ ಇದ್ರೆ ಸಾಕಾಗಲ್ಲ. ಇಂಥ ಸ್ಪರ್ಧಿಗಳನ್ನು ಮೆಂಟೇನ್ ಮಾಡಲು ಇವೆಲ್ಲಾ ಸಾಕಾಗಲ್ಲ. ಫುಲ್ ಬಾಟಲ್ ಸಾರಾಯಿನೇ ಬೇಕು ಎಂದು ತಮಾಷೆಯನ್ನೂ ಮಾಡಿದ್ದಾರೆ.