ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಹಾಗೂ ಹಿರಿತೆರೆಯಲ್ಲಿ ಕೊರಿಯೋಗ್ರಾಫರ್ ಆಗಿ ಮಿಂಚುತ್ತಿರುವ ಚೆಲುವೆ ದರ್ಶಿನಿ ಡೆಲ್ಟಾ ನಾಗರಾಜ್ ಅವರು. ತಮಿಳಿನ ಸೂಪರ್ ಹಿಟ್ ಹಾಡು ರೌಡಿ ಬೇಬಿಗೂ ಕೊರಿಯೋಗ್ರಫಿ ಮಾಡಿದ್ದು ಇವರೇನೆ. ಈ ಕುರಿತು ನಟಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ದರ್ಶಿನಿ ಡೆಲ್ಟಾ ನಾಗರಾಜ್, ಸೀರಿಯಲ್ ಶೂಟಿಂಗ್ ವೇಳೆ ಸಮಯ ಸಿಕ್ಕಿದಾಗಲೆಲ್ಲಾ ಸಹ ನಟಿಯರ ಜೊತೆ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದುದನ್ನು ನೋಡಿ ಜನ ವಾರೆ ವಾವ್ ಸೂಪರ್ ಡ್ಯಾನ್ಸರ್ ಎನ್ನುತ್ತಿದ್ದರು.
28
ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡ ಹೌದು
ದರ್ಶಿನಿ ಅವರು ನಟಿಯಾಗೋ ಮೊದಲು ಮಾಡೆಲ್ ಆಗಿ, ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ಡ್ಯಾನ್ಸರ್ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಾಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಾಫರ್ ಆಗಿ ಇವರು ಕೆಲಸ ಮಾಡಿದ್ದಾರೆ.
38
ಧನುಷ್-ಸಾಯಿ ಪಲ್ಲವಿಗೆ ಕೋರಿಯೋಗ್ರಫಿ
ತಮಿಳಿನ ಸೂಪರ್ ಹಿಟ್ ಡ್ಯಾನ್ಸ್ ಹಾಡಾಗಿರುವ ಮಾರಿ ಸಿನಿಮಾದ ಧನುಷ್ ಮತ್ತು ಸಾಯಿ ಪಲ್ಲವಿ ಹೆಜ್ಜೆ ಹಾಕಿರುವ ರೌಡಿ ಬೇಬಿ ಹಾಡಿಗೆ ಪ್ರಭುದೇವ ಕೊರಿಯೋಗ್ರಫಿ ಮಾಡಿದ್ದು, ದರ್ಶಿನಿ ಡೆಲ್ಟಾ ಅಸಿಸ್ಟಂಟ್ ಕೊರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಇದೀಗ ದರ್ಶಿನಿ ಡೆಲ್ಟಾ ಅವರು ಹಿಂದೆ ಈ ದಿಗ್ಗಜರಿಗೆ ಕೊರಿಯೋಗ್ರಫಿ ಮಾಡಿ, ಪ್ರಭುದೇವ ಜೊತೆ ಕೆಲಸ ಮಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
58
ಛೂ ಮಂಥರ್ ಹಾಡಿಗೆ ಕೊರಿಯೋಗ್ರಫಿ
ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಭಡ್ತಿ ಪಡೆದರು. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಕೊರಿಯೋಗ್ರಾಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ ಸಖತ್ ಸದ್ದು ಮಾಡಿತ್ತು.
68
ಪುನೀತ್ ರಾಜಕುಮಾರ್ ಜೊತೆ ಕೆಲಸ
ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ ಗೆ ಜಾನಿ ಮಾಸ್ಟರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ ದರ್ಶಿನಿ, ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ.
78
ಸ್ಟಾರ್ ನಟರಿಗೆ ಡ್ಯಾನ್ಸ್ ಹೇಳಿಕೊಟ್ಟ ಬೆಡಗಿ
ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇತ್ತೀಚೆಗೆ ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾಗೆ ಪೂರ್ತಿಯಾಗಿ ಕೊರಿಯೋಗ್ರಫಿ ಮಾಡುವ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದ್ದರು.
88
ಅಪ್ಪನ ಕನಸು
ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ನಟಿಯಾಗಿ ಗುರುತಿಸಿಕೊಂಡರು.