Karna Serial ರೋಚಕ ಟ್ವಿಸ್ಟ್​: ಮದುಮಗ ತೇಜಸ್​ ಕಿಡ್ನಾಪ್​- 3 ತಿಂಗಳ ಗಡುವು ಕೇಳಿದ ನಿತ್ಯಾ!

Published : Oct 24, 2025, 07:25 PM IST

ಅಕ್ಕನಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ್ದಾಳೆ ನಿಧಿ. ಇದೀಗ ಕರ್ಣನ ಪತ್ನಿಯಾಗಿರುವ ನಿತ್ಯಾ, ಕಾಣೆಯಾದ ತೇಜಸ್‌ನನ್ನು ಹುಡುಕಲು ಮೂರು ತಿಂಗಳ ಕಾಲಾವಕಾಶ ಕೇಳಿದ್ದು, ಅವಳ ಗರ್ಭದ ರಹಸ್ಯವು ಕಥೆಗೆ ಹೊಸ ತಿರುವು ನೀಡಿದೆ.

PREV
18
ನಿಧಿಯ ಕನಸು ಚೂರು ಚೂರು

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ನಿಧಿಯ ಕನಸು ಚೂರು ಚೂರಾಗಿದೆ. ಕರ್ಣದ ಜೊತೆ ಬಾಳ್ವೆ ಮಾಡುವುದಾಗಿ ಕನಸು ಕಂಡುಕೊಂಡಿದ್ದ ಆಕೆ ಅಕ್ಕನಿಗಾಗಿ ತನ್ನ ಪ್ರೀತಿಯನ್ನೇ ಬಲಿ ಕೊಟ್ಟಿದ್ದಾಳೆ.

28
ಕರ್ಣನ ನೋವು ಅರ್ಥ

ಅದೇ ಇನ್ನೊಂದೆಡೆ, ನಿತ್ಯಾಳಿಗೂ ಕರ್ಣನ ನೋವು ಅರ್ಥವಾಗಿದೆ. ನೀವು ಯಾರನ್ನು ಪ್ರೀತಿಸ್ತಾ ಇದ್ದೀರಿ, ನಿಮ್ಮ ಕನಸು ಏನಿತ್ತು ಯಾವುದೂ ನನಗೆ ಗೊತ್ತಿಲ್ಲ. ನನ್ನ ಖುಷಿಗಾಗಿ ಎಲ್ಲವನ್ನೂ ತ್ಯಾಗ ಮಾಡಿರುವಿರಿ ಎಂದಿರೋ ನಿತ್ಯಾ ತನಗೆ ಮೂರು ತಿಂಗಳ ಗಡುವು ನೀಡುವಂತೆ ಕೋರಿಕೊಂಡಿದ್ದಾಳೆ.

38
ಮೂರು ತಿಂಗಳ ಕಾಲಾವಕಾಶ

ತೇಜಸ್​ ಯಾಕೆ ಮದುವೆ ಮನೆ ಬಿಟ್ಟು ಹೋದ ಎನ್ನುವುದು ಗೊತ್ತಿಲ್ಲ. ಆತ ಎಲ್ಲೇ ಇದ್ದರೂ ಪತ್ತೆ ಮಾಡಿ, ಕಷ್ಟನೋ, ಸುಖನೋ ಅವನ ಜೊತೆ ಬಾಳ್ವೆ ಮಾಡುತ್ತೇನೆ. ನನಗೆ ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಕರ್ಣನಲ್ಲಿ ನಿತ್ಯಾ ಕೋರಿಕೊಂಡಿದ್ದಾಳೆ.

48
ತೇಜಸ್​ ಕಿಡ್ನಾಪ್​

ಆದರೆ ಅದೇ ಇನ್ನೊಂದೆಡೆ ತೇಜಸ್​ನನ್ನು ಕಿಡ್ನಾಪ್​ ಮಾಡಿ ಕಟ್ಟಿ ಹಾಕಲಾಗಿದೆ. ಅದನ್ನು ಮಾಡಿಸಿರೋದು ಕರ್ಣನ ಮನೆಯವರೇ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಅದಿನ್ನೂ ಬಯಲಾಗಬೇಕಿದೆ.

58
ತೇಜಸ್​ ಕಥೆ ಏನು?

ತೇಜಸ್​ ಬಿಡುಗಡೆಯಾಗ್ತಾನಾ? ಮೂರು ತಿಂಗಳಿನಲ್ಲಿ ಏನಾಗಲಿದೆ? ಇದಾಗಲೇ ನಿತ್ಯಾ ಗರ್ಭಿಣಿಯಾಗಿದ್ದಾಳೆ. ಅವಳ ಮಗುವಿನ ಅಪ್ಪ ಯಾರು ಎನ್ನುವ ಬಗ್ಗೆ ಚರ್ಚೆ ಆಗುತ್ತಲೇ ತ್ಯಾಗಮಯಿ ಕರ್ಣ ಅದನ್ನು ತನ್ನ ಮಗು ಅಂತಾನಾ? ಮುಂದೇನಾಗುತ್ತೆ ಎನ್ನುವ ಕುತೂಹಲವಿದೆ.

68
ಟ್ವಿಸ್ಟ್​ ಮೇಲೆ ಟ್ವಿಸ್ಟ್​

ಅಷ್ಟಕ್ಕೂ ಈ ಮೂರು ತಿಂಗಳಿನಲ್ಲಿ ತೇಜಸ್​​ ಸಿಕ್ಕು, ನಿತ್ಯಾ ಮತ್ತು ಕರ್ಣ ಮದುವೆಯಾದರೆ ಸೀರಿಯಲ್​ ಮುಗಿದಂತೆ. ಆದ್ದರಿಂದ ಅದಕ್ಕೆ ಇನ್ನಿಷ್ಟು ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಗಲೇಬೇಕಿದೆ. ವೀಕ್ಷಕರು ಏನೋ ಅಂದುಕೊಂಡರೆ ಅದು ಇನ್ನೇನೋ ಆಗುವ ಸಾಧ್ಯತೆ ಇದೆ.

78
ನಿತ್ಯಾಳ ಸ್ಥಿತಿ ಅಯೋಮಯ

ಆದರೆ ಸದ್ಯದ ಸ್ಥಿತಿಯಲ್ಲಂತೂ ನಿತ್ಯಾಳನ್ನು ನೋಡಲು ಆಗುತ್ತಿಲ್ಲ. ನಿತ್ಯಾ, ನಿಧಿ ಮತ್ತು ಕರ್ಣ ಮೂವರ ಬಾಳೂ ಅಯೋಮಯವಾಗಿದೆ. ನಿತ್ಯಾಳಿಗೆ ಇನ್ನೂ ಕರ್ಣ ಪ್ರೀತಿಸ್ತಾ ಇರೋದು ತನ್ನ ತಂಗಿಯನ್ನೇ ಎನ್ನುವ ಸತ್ಯ ಕೂಡ ತಿಳಿದಿಲ್ಲ.

88
ಮುಂದಿನ ನಡೆ ಏನು?

ಒಂದು ವೇಳೆ ತಿಳಿದರೆ ಆಕೆಯ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಇದೆ. ಇದಾಗಲೇ ಅವಳು ತನ್ನ ತಂಗಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮಾತು ಕೊಟ್ಟಿದ್ದಾಳೆ. ಅದೇ ಮತ್ತೊಂದೆಡೆ ಕರ್ಣನ ಬಾಳಿನಿಂದ ಮೂರು ತಿಂಗಳಲ್ಲಿಯೇ ಹೊರ ಹೋಗುವುದಾಗಿಯೂ ಹೇಳಿದ್ದಾರೆ.

ಕರ್ಣ ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories