ಎಲ್ಲರಿಗೂ Bigg Boss ಗೆಲ್ಲೋ ಚಿಂತೆಯಾದ್ರೆ, ರಕ್ಷಿತಾ ಶೆಟ್ಟಿಗೆ ಇನ್ನೇನೋ ಕನಸು: ಆಸೆ ಕೇಳಿದ್ರೆ ಹೀಗೇ ಹೇಳೋದಾ ಪುಟ್ಟಿ?

Published : Dec 14, 2025, 12:38 PM IST

ಯುಟ್ಯೂಬ್​ನಲ್ಲಿ ಮೀನಿನ ವಿಡಿಯೋಗಳಿಂದ ಖ್ಯಾತಿ ಗಳಿಸಿ ಬಿಗ್​ಬಾಸ್​ ಮನೆ ಪ್ರವೇಶಿಸಿರುವ ರಕ್ಷಿತಾ ಶೆಟ್ಟಿ, ಇದೀಗ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಮನೆಯಲ್ಲಿ ಎಲ್ಲರೂ ಗೆಲುವಿನ ಬಗ್ಗೆ ಚಿಂತಿಸುತ್ತಿದ್ದರೆ, ರಕ್ಷಿತಾ ಮಾತ್ರ ತಮಗೆ ಬೇರೆಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

PREV
17
ರಕ್ಷಿತಾ ಶೆಟ್ಟಿ ಹವಾ

ರಕ್ಷಿತಾ ಶೆಟ್ಟಿ (Bigg Boss Rakshita Shetty) ಹವಾ ಬಿಗ್​ಬಾಸ್​ನಲ್ಲಿ ಜೋರಾಗಿಯೇ ನಡೆಯುತ್ತಿದೆ. ಈಕೆ ಫೈನಲಿಸ್ಟ್​ ಎಂದೇ ಈಗ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದು, ರಕ್ಷಿತಾ ಅಭಿಮಾನಿಗಳ ಸಂಖ್ಯೆಯೂ ಅಷ್ಟೇ ದೊಡ್ಡದಾಗಿದೆ.

27
ಅರೆಬರೆ ಕನ್ನಡ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಫೇಮಸ್​ ಆಗಿದ್ದೇ ಅರೆಬರೆ ಕನ್ನಡದ ಮೂಲಕ. ಮುಂಬೈನಲ್ಲಿ ಹುಟ್ಟಿ ಬೆಳೆದ ತುಳುನಾಡಿನ ಯುವತಿ ರಕ್ಷಿತಾ ಶೆಟ್ಟಿ, ಕನ್ನಡವನ್ನು ಕಲಿತು ಎಲ್ಲಾ ಭಾಷೆಗಳನ್ನು ಮಿಕ್ಸ್​ ಮಾಡಿ ಯುಟ್ಯೂಬ್​ ಮಾಡಿದ ಆರೇ ತಿಂಗಳಿನಲ್ಲಿ ಫೇಮಸ್​ ಆಗಿದ್ದಾರೆ ಎಂದರೆ ಅವರ ಜಾಣ್ಮೆ ಕಾಣಿಸುತ್ತದೆ. ಅದರಲ್ಲಿಯೂ ಮೀನಿನ ವಿಡಿಯೋಗಳಿಂದಲೇ ಈಕೆ ಫೇಮಸ್​​

37
ಆರೇ ತಿಂಗಳಲ್ಲಿ ಫೇಮಸ್​

ಯುಟ್ಯೂಬ್​ ಓಪನ್​ ಮಾಡಿ ಆರೇ ತಿಂಗಳಿನಲ್ಲಿ ಗಳಿಸಿದ ಖ್ಯಾತಿಯಿಂದ ಈಕೆ ಬಿಗ್​ಬಾಸ್​ ಮನೆಗೂ ಬಂದಿದ್ದಾರೆ. ಆದರೆ ಇವರ ಕನ್ನಡದ ಬಗ್ಗೆ ಉಳಿದ ಸ್ಪರ್ಧಿಗಳು ಡೌಟ್​ ಪಡುತ್ತಿದ್ದರೂ ರಕ್ಷಿತಾ ಫ್ಯಾನ್ಸ್​ಗೆ ಮಾತ್ರ ಆಕೆ ಮೇಲೆ ಇನ್ನಿಲ್ಲದ ಗೌರವ.

47
ಮೀನು ಮಿಸ್​

ಇದೀಗ ಬಿಗ್​ಬಾಸ್​ ಮನೆಯಲ್ಲಿ ನಾನ್​ ವೆಜಿಟೇರಿಯನ್ಸ್​ ಮೀನು, ಚಿಕನ್ನು ಎಲ್ಲಾ ಮಿಸ್​ ಮಾಡಿಕೊಳ್ತಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಫೇಮಸ್​ ಮಾಡಿದ್ದೇ ಮೀನು. ಮೀನಿನ ವಿಡಿಯೋ ಮಾತ್ರವಲ್ಲದೇ ಮೀನಿನ ಸಾಂಬಾರ್​ ಅನ್ನೂ ರಕ್ಷಿತಾ ಮಿಸ್ ಮಾಡಿಕೊಳ್ತಿದ್ದಾರೆ.

57
ಬಿಗ್​ಬಾಸ್​​ ವಿಷ್​

ಇದೀಗ ಅದೇ ಆಸೆಯನ್ನು ಅಶ್ವಿನಿ ಗೌಡ (Bigg Boss Ashwini Gowda) ಮತ್ತು ಸೂರಜ್​ ಮುಂದೆ ಇಟ್ಟಿದ್ದಾರೆ ರಕ್ಷಿತಾ ಶೆಟ್ಟಿ. ಮೀನು ತಿನ್ನಬೇಕು ಎನ್ನಿಸ್ತಾ ಇದೆ. ಒಂದು ವೇಳೆ ಬಿಗ್​ಬಾಸ್​​ ವಿಷ್​ ಕೇಳಿದ್ರೆ, ಒಂದಷ್ಟು ಕೆ.ಜಿ ಮೀನು ಕಳುಹಿಸಿಕೊಡಲು ಹೇಳ್ತೇನೆ ಎಂದಿದ್ದಾರೆ.

67
ಮೀನಿನ ಸಾಂಬಾರ್​

ಆಗ ಅಶ್ವಿನಿ ಗೌಡ, ತಂದು ಏನ್ ಮಾಡ್ತಿಯಾ ಕೇಳಿದಾಗ ಸಾಂಬಾರ್​ ಮಾಡಿ ತಿಂತೇನೆ ಎಂದಿದ್ದಾರೆ.ನಮಗೆ ಕೊಡಲ್ವಾ ಎಂದು ಅಶ್ವಿನಿ ಕೇಳಿದಾಗ, ಎಲ್ಲರಿಗೂ ಕೊಟ್ಟೇ ತಿನ್ನೋದು ಎಂದಿದ್ದಾರೆ. ಒಟ್ಟಿನಲ್ಲಿ, ಎಲ್ಲಿ ಹೋದ್ರೂ ರಕ್ಷಿತಾಗೆ ಮೀನಿಂದೇ ಚಿಂತೆಯಲ್ಲಾ ಎಂದು ಫ್ಯಾನ್ಸ್​ ಹೇಳಿಕೊಳ್ತಿದ್ದಾರೆ.

77
ಎಲ್ಲರಿಗೂ ಗೆಲ್ಲೋ ಚಿಂತೆ!

ಉಳಿದ ಎಲ್ಲರೂ ಬಿಗ್​ಬಾಸ್​ ಗೆಲ್ಲೋದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದರೆ ನಮ್​ ಪುಟ್ಟಿ ಮಾತ್ರ ಮೀನಿನ ಚಿಂತೆಯಲ್ಲಿ ಇದ್ದಾಳೆ ಎನ್ನುತ್ತಿದ್ದಾರೆ ಅಭಿಮಾನಿಗಳು

Read more Photos on
click me!

Recommended Stories