BBK 12: ಸೋರುತ್ತಿರುವ ಸ್ವಂತ ಮನೆ, ಉಡುಪಿಯಲ್ಲಿರೋ ಅಜ್ಜಿಯ ಬಾಡಿಗೆ ಮನೆಗೆ ಹಣ ಕಟ್ಟುತ್ತಿರೋ ರಕ್ಷಿತಾ ಶೆಟ್ಟಿ

Published : Dec 14, 2025, 11:50 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವ ರಕ್ಷಿತಾ ಶೆಟ್ಟಿ ಅವರ ತಂದೆ-ತಾಯಿ ಮುಂಬೈನಲ್ಲಿದ್ದರೆ, ಅಜ್ಜಿ ಉಡುಪಿಯಲ್ಲಿ ಇರುತ್ತಾರೆ. ರಕ್ಷಿತಾ ಶೆಟ್ಟಿ ಅವರ ಆಟದ ಬಗ್ಗೆ ಅಜ್ಜಿ ಅವನಿಯಾನ ಎನ್ನುವ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

PREV
17
ತಂದೆ-ತಾಯಿ ಏನು ಮಾಡುತ್ತಾರೆ?

“ಮುಂಬೈನಲ್ಲಿ ರಕ್ಷಿತಾ ಶೆಟ್ಟಿ ತಂದೆ ಪಾನ್‌ ಶಾಪ್‌ ಇಟ್ಟುಕೊಂಡಿದ್ದಾರೆ. ರಕ್ಷಿತಾ ಆಗಾಗ ಉಡುಪಿಗೆ ಬರುತ್ತಿರುತ್ತಾಳೆ. ಮನೆಗೆ ಬಂದರೆ ಅವಳೇ ಎಲ್ಲ ರೀತಿಯ ಅಡುಗೆ ಮಾಡುತ್ತಾಳೆ. ನನ್ನನ್ನು ಯುಟ್ಯೂಬ್‌ನಲ್ಲಿ ತೋರಿಸಬೇಡ ಎಂದು ಹೇಳ್ತೀನಿ, ಆದರೂ ಅವಳು ಆಗಾಗ ನನ್ನ ವಿಡಿಯೋವನ್ನು ಯುಟ್ಯೂಬ್‌ಗೆ ಹಾಕುತ್ತಿದ್ದಳು” ಎಂದು ಅಜ್ಜಿ ರತ್ಮಮ್ಮ ಹೇಳಿದ್ದಾರೆ.

27
ರಕ್ಷಿತಾ ಶೆಟ್ಟಿ ಬೈದ್ರೆ ಬೇಸರ ಆಗತ್ತೆ

“ಬಿಗ್‌ ಬಾಸ್‌ ಮನೆಗೆ ಹೋಗ್ತೀನಿ ಎಂದಾಗ ಶಾಕ್‌ ಆಗಿದ್ದುಂಟು. ನನಗೆ ಖುಷಿಯೂ ಆಗಿದೆ. ಆಗಾಗ ಬಿಗ್‌ ಬಾಸ್‌ ನೋಡ್ತೀನಿ, ಯಾರಾದರೂ ರಕ್ಷಿತಾ ಶೆಟ್ಟಿಯನ್ನು ಬೈದಾಗ ಬೇಸರ ಆಗುವುದು, ಕೋಪ ಬರುತ್ತದೆ. ಹೀಗಾಗಿ ಒಮ್ಮೊಮ್ಮೆ ಬಿಗ್‌ ಬಾಸ್‌ ನೋಡೋದಿಲ್ಲ” ಎಂದು ರತ್ಮಮ್ಮ ಹೇಳಿದ್ದಾರೆ.

37
ಗಿಲ್ಲಿ ನಟನನ್ನು ಕಂಡರೆ ನನಗೆ ಇಷ್ಟ

“ಗಿಲ್ಲಿ ನಟ ಚೆನ್ನಾಗಿ ಆಡುತ್ತಿದ್ದಾನೆ, ಗಿಲ್ಲಿ ನಟನನ್ನು ಕಂಡರೆ ನನಗೆ ಇಷ್ಟ. ಅವನು ರಕ್ಷಿತಾಗೆ ವಂಶದ ಕುಡಿ ಎಂದು ಹೇಳೋದು ನನಗೆ ಖುಷಿಯಾಗುತ್ತದೆ, ನಗು ಬರುತ್ತದೆ. ಧ್ರುವಂತ್‌ ಅವರು ರಕ್ಷಿತಾ ಬಗ್ಗೆ ಮಾತನಾಡಿದ್ದು ಬೇಸರ ಆಗಿತ್ತು, ಧ್ರುವಂತ್‌ ಮೇಲೆ ನನಗೆ ಕೋಪ ಇದೆ” ಎಂದಿದ್ದಾರೆ ರತ್ನಮ್ಮ.

47
ರಕ್ಷಿತಾಗೆ ನಾಯಿ ಎಂದರೆ ತುಂಬ ಇಷ್ಟ

“ರಕ್ಷಿತಾಗೆ ನಾಯಿ ಎಂದರೆ ತುಂಬ ಇಷ್ಟ. ಬೀದಿ ನಾಯಿಗಳು ಕಂಡರೆ ಸಾಕು, ಅದಿಕ್ಕೆ ಮೀನು ಹಾಕುತ್ತಾಳೆ. ಒಂದು ಗುಣ ಎಂದು ಹೇಳೋಕಾಗಲ್ಲ, ಆದರೆ ರಕ್ಷಿತಾಳಲ್ಲಿರುವ ಎಲ್ಲ ಗುಣ ಇಷ್ಟ” ಎಂದು ರತ್ಮಮ್ಮ ಹೇಳಿದ್ದಾರೆ.

57
ಸಾಲ ಮಾಡಿದ್ದಾಳೆ

“ರಕ್ಷಿತಾ ಶೆಟ್ಟಿ ಅವರು ಸ್ವಂತ ಹಣದಲ್ಲಿ ಮುಂಬೈನಲ್ಲಿ ಫ್ಲಾಟ್‌ ತಗೊಂಡಿದ್ದಾಳೆ. ಅದಕ್ಕಾಗಿ ಸಾಲವನ್ನು ಕೂಡ ಮಾಡಿದ್ದಾಳೆ. ಅಪ್ಪ-ಅಮ್ಮ ಅಲ್ಲಿ ಇರೋದಿಕ್ಕೆ ಅವಳು ಆಗಾಗ ಇಲ್ಲಿಗೆ ಬಂದು ಹೋಗುತ್ತಿರುತ್ತಾಳೆ” ಎಂದು ರತ್ನಮ್ಮ ಹೇಳಿದ್ದಾರೆ.

67
ಬಾಡಿಗೆ ಮನೆಯಲ್ಲಿದ್ದಾರಂತೆ

“ರಕ್ಷಿತಾ ಶೆಟ್ಟಿ ಹುಟ್ಟಿ ಮೂರು ತಿಂಗಳಿಗೆ ಅವಳನ್ನು ಮುಂಬೈಗೆ ಕರೆದುಕೊಂಡು ಹೋದರು. ಅವಳಿಗೆ ಕನ್ನಡ ಬರುತ್ತಿರಲಿಲ್ಲ. ಈಗ ಸ್ವಲ್ಪ ಕನ್ನಡ ಮಾತನಾಡುತ್ತಿದ್ದಾಳೆ. ಅಂದಹಾಗೆ ಅಜ್ಜಿ ಮನೆ ಸೋರುತ್ತಿದೆ, ರಿಪೇರಿ ಆಗಬೇಕು ಎಂದು ಬಾಡಿಗೆ ಮನೆಯಲ್ಲಿದ್ದಾರಂತೆ. ಬಾಡಿಗೆ ಮನೆಯ ಹಣವನ್ನು ರಕ್ಷಿತಾ ಅವರೇ ಕಟ್ಟುತ್ತಿದ್ದಾಳೆ” ಎಂದು ರತ್ನಮ್ಮ ಹೇಳಿದ್ದಾರೆ.

77
ರಕ್ಷಿತಾ ಶೆಟ್ಟಿ ಕುಟುಂಬಸ್ಥರು ಯಾರು?

ರಕ್ಷಿತಾ ಶೆಟ್ಟಿ ಅಜ್ಜಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳ ಮಗಳೇ ರಕ್ಷಿತಾ. ಮಂಗಗಳೂರು, ಮುಂಬೈನಲ್ಲಿ ರಕ್ಷಿತಾ ಅವರ ಸೋದರ ಮಾವ, ಚಿಕ್ಕಮ್ಮ ಇರುತ್ತಾರೆ. ಬಿಗ್‌ ಬಾಸ್‌ ಮನೆಗೆ ಹೋಗುವಾಗ ರಕ್ಷಿತಾ ಅವರು ಸ್ವಲ್ಪ ಅತ್ತುಕೊಂಡು ಹೋಗಿದ್ದಳು ಎಂದು ಅಜ್ಜಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories