Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಇಂದು ಎಲಿಮಿನೇಶನ್ ನಡೆಯಬೇಕು. ಆದರೆ ಇಲ್ಲೊಂದು ಟ್ವಿಸ್ಟ್ ಕಾದಿದೆ. ಈ ಬಾರಿ Expect The Unexpected ಎಂಬ ಥೀಮ್ ಇದ್ದು, ಯಾವಾಗ ಏನೂ ಬೇಕಿದ್ರೂ ಆಗಬಹುದು. ಹಾಗಾದರೆ ಈ ವಾರ ಏನಾಗಬಹುದು?
ಈ ವಾರ ಎಲಿಮಿನೇಶನ್ ನಡೆಯುತ್ತಿಲ್ಲ. ಮನೆಯಲ್ಲಿದ್ದವರು ಎಲಿಮಿನೇಶನ್ ನಡೆಯಲಿದೆ ಎಂದುಕೊಂಡಿದ್ದರು. ಆದರೆ ಜಿಯೋಹಾಟ್‌ಸ್ಟಾರ್ ಆಪ್‌ನಲ್ಲಿ ವೋಟಿಂಗ್ ಲೈನ್ಸ್ ಒಪನ್ ಆಗಿಲ್ಲ. ಹೀಗಾಗಿ ಎಲಿಮಿನೇಶನ್ ನಡೆಯೋದಿಲ್ಲ ಎನ್ನೋದು ಪಕ್ಕಾ ಆಯ್ತು.
25
ನಿಜಕ್ಕೂ ಸ್ಪರ್ಧಿಗಳೇ ಅಲ್ಲ?
ಅಂದಹಾಗೆ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಅವರು ದೊಡ್ಮನೆಗೆ ಅತಿಥಿಗಳಾಗಿ ಬಂದು, ವೈಲ್ಡ್‌ಕಾರ್ಡ್ ಸ್ಪರ್ಧಿಗಳಾಗಿದ್ದಾರೆ. ಇವರು ಕೂಡ ಈ ವಾರ ಹೊರಗಡೆ ಹೋಗ್ತಾರೆ, ಇವರು ನಿಜಕ್ಕೂ ಸ್ಪರ್ಧಿಗಳೇ ಅಲ್ಲ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಅವರು ಈ ವಾರ ಇರಲಿದ್ದಾರಾ? ಇಲ್ಲವಾ ಎನ್ನೋದು ಕಾದು ನೋಡಬೇಕಿದೆ.
35
ಸೀಕ್ರೆಟ್ ರೂಮ್‌ನಲ್ಲಿ ಇರಲಿದ್ದಾರೆ?
ಈಗ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಇವರು ಮನೆಯಿಂದ ಹೊರಗಡೆ ಬರೋದಿಲ್ಲ. ಹೌದು, ಏಕಕಾಲಕ್ಕೆ ಈ ಖಡಕ್ ಸ್ಪರ್ಧಿಗಳು ಮನೆಯಿಂದ ಹೊರಬಂದು ಸೀಕ್ರೆಟ್ ರೂಮ್‌ನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಇದು ನಿಜವೋ? ಗಾಳಿ ಸುದ್ದಿಯೋ?
ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಸೀಕ್ರೆಟ್ ರೂಮ್‌ಗೆ ಹೋಗಿದ್ದಾರೆ ಎಂದು ಮನೆಯಲ್ಲಿದ್ದವರಿಗೆ ಗೊತ್ತಾಗೋದಿಲ್ಲ. ಆದರೆ ಅವರ ಎಲಿಮಿನೇಶನ್ ಆಗಿದ್ದು ಪಕ್ಕಾ ಎಂದು ಗೊತ್ತಾದರೆ ಮಾತ್ರ ಸ್ಪರ್ಧಿಗಳ ತಂತ್ರ, ನಡವಳಿಕೆ ಎಲ್ಲವೂ ಬದಲಾಗುವುದು. ಇದರಲ್ಲಿ ಯಾವುದೇ ಅನುಮಾನವಿಲ್ಲ.
55
ಕೊನೆಯಲ್ಲಿ ಆಗೋದು ಏನು?
ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ಗೆ ಹೋದರೆ ಉಳಿದ ಸ್ಪರ್ಧಿಗಳ ಮೈಂಡ್‌ಸೆಟ್ ಬದಲಾಗುವುದು, ಮಲಗಿದ್ದವರು ಎಚ್ಚರವಾಗ್ತಾರೆ. ಒಟ್ಟಿನಲ್ಲಿ ಈ ಬಾರಿ ಭಾರೀ ರೋಚಕತೆ ಇದೆ. ಧ್ರುವಂತ್, ರಕ್ಷಿತಾ ಸೀಕ್ರೇಟ್ ರೂಮ್‌ಗೆ ಹೋಗುವುದು ನಿಜವೋ? ಸುಳ್ಳೋ ಎಂದು ತಿಳಿದುಕೊಳ್ಳಲು ಬಿಗ್ ಬಾಸ್ ನೋಡಬೇಕು. ಇದಕ್ಕೆಲ್ಲ ನಿಖವಾರದ ಉತ್ತರ ಸಿಗಲು ನೀವು ಟಿವಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ ಎಪಿಸೋಡ್ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.