ಬಿಗ್ಬಾಸ್ ಕನ್ನಡ 12ರ ಜನಪ್ರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ಮನೆಯಲ್ಲಿರುವ 75ಕ್ಕೂ ಅಧಿಕ ಕ್ಯಾಮೆರಾಗಳ ಕಣ್ಣು ತಪ್ಪಿಸಲು ಪ್ರಯತ್ನಿಸಿದ್ದಾರೆ. ಮಾಜಿ ಸ್ಪರ್ಧಿ ಮೋಕ್ಷಿತಾ ಪೈ ಜೊತೆ ಸೇರಿ ಹಾಸಿಗೆಯ ಕೆಳಗೆ ಅವಿತುಕೊಳ್ಳುವ ಪ್ಲ್ಯಾನ್ ಮಾಡಿದ್ದು, ಆದರೆ ಅವರ ಈ ಪ್ರಯತ್ನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಿಗ್ಬಾಸ್ ಕನ್ನಡ 12 (Bigg Boss Kannada 12) ಮನೆಯಲ್ಲಿ 75ಕ್ಕೂ ಹೆಚ್ಚು ಕ್ಯಾಮೆರಾಗಳಿದ್ದು, ಪ್ರತಿಯೊಂದು ಕ್ಯಾಮೆರಾ ಕೂಡ ಸ್ಪರ್ಧಿಗಳ ಪ್ರತಿಯೊಂದು ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಲೇ ಇರುತ್ತದೆ. ಕೆಲವೊಂದು ಕಡೆ ಗುಪ್ತ ಕ್ಯಾಮೆರಾಗಳೂ ಇವೆ. ಕ್ಯಾಮೆರಾಗಳು ಮತ್ತು ಮೈಕ್‌ಗಳು ಪ್ರತಿ ಕ್ಷಣದ ಚಲನವಲನವನ್ನು ಚಿತ್ರೀಕರಿಸುತ್ತವೆ. ಸ್ಪರ್ಧಿಗಳು ಏನಾದರೂ ಮರೆಮಾಚಲು ಪ್ರಯತ್ನಿಸಿದರೆ, ಕ್ಯಾಮೆರಾಗಳು ಮತ್ತು ಮೈಕ್‌ಗಳು ಅದನ್ನು ಪತ್ತೆಹಚ್ಚಿ ಗಮನಿಸುತ್ತವೆ.
26
ಕ್ಯಾಮೆರಾ ಕಣ್ಣು ಸ್ಟ್ರಾಂಗ್
ಆದ್ದರಿಂದ ಕ್ಯಾಮೆರಾ ಕಣ್ಣನ್ನು ತಪ್ಪಿಸಿ ಬಿಗ್ಬಾಸ್ನ ಸ್ಪರ್ಧಿಗಳು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ರಕ್ಷಿತಾ ಶೆಟ್ಟಿ ಕ್ಯಾಮೆರಾಕ್ಕೆ ಕಾಣಿಸದಂತೆ ಏನೋ ಒಂದು ಪ್ಲ್ಯಾನ್ ಮಾಡಲು ಹೋಗಿದ್ದಾರೆ. ಆದರೆ ಅದು ಕೂಡ ಕ್ಯಾಮೆರಾ ಕಣ್ಣಿಗೆ ಬಿದ್ದು ಬಿಟ್ಟಿದೆ.
36
ಹವಾ ಸೃಷ್ಟಿಸ್ತಿರೋ ರಕ್ಷಿತಾ ಶೆಟ್ಟಿ
ಅಷ್ಟಕ್ಕೂ ಬಿಗ್ಬಾಸ್ನಲ್ಲಿ ಹವಾ ಸೃಷ್ಟಿಸ್ತಿರೋ ರಕ್ಷಿತಾ ಶೆಟ್ಟಿ (Bigg Boss Rakshita Shetty) ಫೈನಲಿಸ್ಟ್ ಆಗುವ ಎಲ್ಲಾ ಸೂಚನೆಗಳೂ ಇವೆ. ಈಕೆಗೆ ಫ್ಯಾನ್ಸ್ ಕೂಡ ತುಂಬಾ ಜನ ಇದ್ದಾರೆ. ಕೆಲವರು ಈಕೆಯೇ ವಿನ್ನರ್ ಎಂದೂ ಘೋಷಿಸಿ ಆಗಿದೆ. ಮತ್ತೆ ಕೆಲವರು ಮೊದಲ ರನ್ನರ್ ಅಪ್ ರಕ್ಷಿತಾ ಎನ್ನುತ್ತಿದ್ದಾರೆ.
ಆದರೆ, ಇದೀಗ ರಕ್ಷಿತಾ ಶೆಟ್ಟಿ ಮಾಡಿರುವ ಕಾರ್ಯವೊಂದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬಿಗ್ಬಾಸ್ಗೆ ಕಳೆದ ಸೀಸನ್ನ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ಮೋಕ್ಷಿತಾ ಪೈ. ಅವರು ಬಂದು ಇಲ್ಲಿ ಏನಾದ್ರೂ ಮಾಡಿದರೆ ಗೊತ್ತಾಗತ್ತಾ ಎಂದು ಪ್ರಶ್ನಿಸಿದ್ದಾರೆ.
56
ಏನೂ ಆಗುವುದಿಲ್ಲ
ಅದಕ್ಕೆ ರಕ್ಷಿತಾ ಇಲ್ಲಿ ಮಾಡಿದ್ರೆ ಇವ್ರು ನೋಡ್ತಾರೆ, ಅಲ್ಲಿ ಅವ್ರು ನೋಡ್ತಾರೆ ಎಂದು ಕ್ಯಾಮೆರಾ ತೋರಿಸಿದ್ದಾರೆ. ಕೊನೆಗೆ ಅಲ್ಲಿ ಇರುವ ಹಾಸಿಗೆಯನ್ನು ತೋರಿಸಿದ ಸ್ಪಂದನಾ ಇಲ್ಲಿ ಕುಳಿತರೆ ಏನೂ ಗೊತ್ತಾಗುವುದಿಲ್ಲ ನೋಡಿ ಎಂದಿದ್ದಾರೆ.
66
ಕ್ಯಾಮೆರಾ ಕಣ್ಣಿಗೆ ಕಂಡ ರಕ್ಷಿತಾ
ಅಲ್ಲಿಗೆ ಹೋದ ರಕ್ಷಿತಾ ಫುಲ್ ಹೊದ್ದುಕೊಂಡು ಮಲಗಿದ್ದಾರೆ. ಹಾಗೆ ನೋಡಿದ್ರೆ ರಕ್ಷಿತಾ ಶೆಟ್ಟಿ ಪುಟಾಣಿಯಾಗಿರುವ ಕಾರಣ, ಆ ಹಾಸಿಗೆಯ ಒಳಗೆ ಅವರು ಕಾಣುವುದೇ ಇಲ್ಲ. ಹಾಗೆಂದು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ಯಾಮೆರಾದಲ್ಲಿ ಅವರು ಕಂಡಿದ್ದು, ಅದನ್ನು ವಾಹಿನಿ ಶೇರ್ ಮಾಡಿದೆ.