Published : Nov 28, 2025, 04:56 PM ISTUpdated : Nov 28, 2025, 05:00 PM IST
Risha Gowda Gallery: ರಿಷಾ ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿಗೆ ಮಾತಿನಲ್ಲೇ ಠಕ್ಕರ್ ಕೊಟ್ಟಿದ್ದನ್ನು ನೋಡಿ ಟಫ್ ಕಾಂಪಿಟೇಶನ್ ಕೊಡಬಹುದು ಎಂದು ಭಾವಿಸಿದ್ದರು. ಆದರೆ 'ಬಿಗ್ ಬಾಸ್'ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ರಿಷಾ ಗೌಡ ‘ ಬಿಗ್ ಬಾಸ್ ಕನ್ನಡ ಸೀಸನ್ 12 ’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಡಬಲ್ ಎವಿಕ್ಷನ್ ವೀಕ್‌ನ ನಂತರ ರಿಷಾ ಗೌಡ 'ಬಿಗ್' ಮನೆಗೆ ಸೇರಿದರು.
26
5ನೇ ವಾರಕ್ಕೆ ದೊಡ್ಮನೆಯಿಂದ ಔಟ್
ಆರಂಭದಲ್ಲಿ ರಿಷಾ ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿಗೆ ಮಾತಿನಲ್ಲೇ ಠಕ್ಕರ್ ಕೊಟ್ಟಿದ್ದನ್ನು ನೋಡಿ ಟಫ್ ಕಾಂಪಿಟೇಶನ್ ಕೊಡಬಹುದು ಎಂದು ಭಾವಿಸಿದ್ದರು. ಆದರೆ 'ಬಿಗ್ ಬಾಸ್'ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.
36
ಹಾಟ್ ಫೋಟೋಶೂಟ್
ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಇದೀಗ ರಿಷಾ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, "ನೀವು ಈ ವಾರ ಬಿಗ್ ಬಾಸ್ ಮನೆಯಲ್ಲಿ ಇರಬೇಕಿತ್ತು" ಎಂದಿದ್ದಾರೆ.
ರಿಷಾ ಗೌಡ ಮೂಲತಃ ಅಥ್ಲೀಟ್. ಶಾಲಾ ದಿನಗಳಲ್ಲೇ ಸಾಕಷ್ಟು ಪ್ರಶಸ್ತಿ ಪಡೆದಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ಕ್ರೀಡೆಯಿಂದ ದೂರ ಉಳಿಯಬೇಕಾಯಿತಂತೆ. ಬಳಿಕ ಇವರು ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು, ಮಿಸ್ ಕರ್ನಾಟಕ 2020 ರನ್ನರ್ ಅಪ್ ಆಗಿದ್ದಾರೆ.
56
ರಂಗಭೂಮಿ ನಂಟು
ರಿಷಾ ಗೌಡಗೆ ರಂಗಭೂಮಿ ನಂಟು ಕೂಡ ಇದೆ. ರಿಷಾ "ಬಿಗ್ ಬಾಸ್ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಬಹುದು. ಅದಕ್ಕಾಗಿ ನಾನು ಈ ಮನೆಗೆ ಬಂದಿದ್ದೇನೆ" ಎಂದಿದ್ದರು.
66
ಫ್ರೆಂಡ್‌ಶಿಪ್ ಮಾಡೋಕೆ ಬಂದಿಲ್ಲ
"ಓಂ ಪ್ರಕಾಶ್ ರಾವ್ ನಿರ್ದೇಶನದ ಕ್ರೇಜಿ ಕೀರ್ತಿ ಅನ್ನೋ ಸಿನಿಮಾದಲ್ಲಿ ಮೊದಲು ಚಾನ್ಸ್ ಸಿಕ್ತು. ನಾನ್ಯಾಕೆ ಬಿಗ್ ಬಾಸ್ ಶೋಗೆ ಹೋಗಬಾರದು ಅಂತ ಮೊದಲಿನಿಂದಲೂ ಇತ್ತು. ನನ್ನ ಆಟವನ್ನು ನಾನು ಆಡುವೆ, ನಿಮ್ಮ ಆಟವನ್ನು ನೀವು ಆಡಿ. ಯಾರಿಗಾದರೂ ಹರ್ಟ್ ಮಾಡುವ ಸ್ಥಿತಿ ಬಂದರೆ ಹರ್ಟ್ ಮಾಡ್ತಿನಿ. ಬಿಗ್ ಬಾಸ್‌ಗೆ ನಾನು ಫ್ರೆಂಡ್‌ಶಿಪ್ ಮಾಡೋಕೆ ಬಂದಿಲ್ಲ" ಎಂದು ಹೇಳಿದ್ದರು ರಿಷಾ ಗೌಡ.