ಒಮ್ಮೆ ಅನುಮಾನ ತಲೆಗೆ ಹೊಕ್ಕಿತು ಎಂದರೆ ಅದು ಸುಲಭದಲ್ಲಿ ಹೋಗುವ ಮಾತಲ್ಲವಲ್ಲ, ವಿಶ್ವನ ಅಮ್ಮನಿಗೂ ಈಗ ಜಾಹ್ನವಿ ಬಗ್ಗೆ ಡೌಟ್ ಶುರುವಾಗಿದೆ. ಎಷ್ಟೇ ದುಡ್ಡು ಕೊಟ್ಟರೂ ಸಾಕಾಗಲ್ಲ ಎನ್ನುವ ಕೆಲಸದವರೇ ಇರುವಾಗ, ಇವಳು ಪುಕ್ಕಟೆ ಯಾಕೆ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಆಕೆಯ ತಲೆಯಲ್ಲಿ ಈಗ ಕೊರೆಯಲು ಶುರುವಾಗಿದೆ.