ಸೊಸಿ ಚೆಂದ ಇರೋದು ಬೇಡ್ರಿ ಎಂದ Bigg Boss ಮಲ್ಲಮ್ಮ! ಕಾರಣ ಕೇಳಿ, ನಿಮ್​ ಲೆವೆಲ್ಲೇ ಬೇರೆ ಬಿಡಿ ಎಂದ ಫ್ಯಾನ್ಸ್​

Published : Oct 15, 2025, 10:49 PM IST

ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ತಮ್ಮ ಮುಗ್ಧ ಮಾತುಗಳಿಂದ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಭಾವಿ ಸೊಸೆ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಬಿದ್ದೂ ಬಿದ್ದೂ ನಗ್ತಿದ್ದಾರೆ. ನಿಮ್ಮ ಲೆವೆಲ್ಲೇ ಬೇರೆ ಬಿಡಿ ಅಂತಿದ್ದಾರೆ. ಅಷ್ಟಕ್ಕೂ ಮಲ್ಲಮ್ಮ ಹೇಳಿದ್ದೇನು? 

PREV
16
ಜೋರಾದ ಮಲ್ಲಮ್ಮನ ಹವಾ

Bigg Bossನಲ್ಲಿ ಸ್ಪರ್ಧಿ ಮಲ್ಲಮ್ಮ ಹವಾ ಜೋರಾಗಿಯೇ ನಡೆಯುತ್ತಿದೆ. ಇವರು ಮಾತನಾಡುವುದೆಲ್ಲವೂ ತಮಾಷೆಯಾಗಿಯೇ ಇರುತ್ತದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ತಮಾಷೆ ಮಾಡಿದರೆ, ಮತ್ತೆ ಕೆಲವು ಬಾರಿ ಇವರು ಮಾತನಾಡಿದ್ದು ತಮಾಷೆಯಾಗುತ್ತದೆ. ಇದಕ್ಕೆ ಕಾರಣ ಅವರ ಮುಗ್ಧತೆ.

26
ಭಾವಿ ಸೊಸೆ ಬಗ್ಗೆ ಮಲ್ಲಮ್ಮ

ಇಂತಿಪ್ಪ ಮಲ್ಲಮ್ಮ ತಮ್ಮ ಭಾವಿ ಸೊಸೆ ಹೇಗೆ ಇರಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಮಲ್ಲಮ್ಮ ಅವ ಮೊದಲ ಮಗು ಹುಟ್ಟಿದ ಬಳಿಕ ಮಲ್ಲಮ್ಮ ಅವರು ಯಮನೂರ್‌ಗೆ ಜನ್ಮ ನೀಡಿದ್ದರು. ಆಮೇಲೆ ಹುಟ್ಟಿದ ಇಬ್ಬರು ಹೆಣ್ಣು ಮಕ್ಕಳು ತೀರಿಕೊಂಡಿದ್ದವು.

36
ಇಬ್ಬರು ಗಂಡುಮಕ್ಕಳು

ಸದ್ಯ ಮಲ್ಲಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು. ಓರ್ವ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಂದು ಮಗ ಬೇರೆ ಕಡೆ ಇದ್ದಾರೆ. ಎರಡನೇ ಮಗ ಸಿದ್ದಾರೂಢ. ಸಿದ್ದಾರೂಢ ಕೂಡ ಮಲ್ಲಮ್ಮಳ ಜೊತೆಗೆ ಬ್ಯೂಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ದಾರೂಢ ಅವರು ಬೆಂಗಳೂರಿಗೆ ಬಂದು 13 ವರ್ಷಗಳಾಗಿವೆ.

46
ಮೊದಲ ಮಗ ಟೈಲರ್​

ಮಲ್ಲಮ್ಮ ಅವರ ಮೊದಲ ಮಗ ಯಮನೂರ್.‌ ಇವರು ಕೂಡ ಟೈಲರಿಂಗ್‌ ಕೆಲಸ ಮಾಡುತ್ತಿದ್ದಾರೆ. ಹಳ್ಳಿ ಹಾಗೂ ಸಿಟಿಯಲ್ಲಿ ಕೂಡ ಅವರು ಟೇಲರಿಂಗ್‌ ಕೆಲಸ ಮಾಡುತ್ತಿದ್ದಾರೆ. ಮಲ್ಲಮ್ಮ ಕೂಡ ಗಂಡನನ್ನು ಕಳೆದುಕೊಂಡು, ಮಕ್ಕಳನ್ನು ಸಾಕಿದ್ದು, ಮನೆ ಕೂಡ ಕಟ್ಟಿದ್ದಾರಂತೆ.

56
ಭಾವಿ ಸೊಸೆ ಹೇಗಿರಬೇಕು?

ಇದೀಗ ಮಲ್ಲಮ್ಮ ಅವರಿಗೆ ಭಾವಿ ಸೊಸೆಯ ಬಗ್ಗೆ ಪ್ರಶ್ನಿಸಿದಾಗ, ಅವರು, ನನ್ನ ಸೊಸೆ ಗುಣ ಚೆನ್ನಾಗಿರಬೇಕು. ಆದರೆ ಅವಳು ನೋಡಲು ಚೆನ್ನಾಗಿ ಇರಬಾರದು ಎಂದಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರೋ ಮಲ್ಲಮ್ಮ, ಚೆಂದ ಇದ್ದರೆ ಎಲ್ಲರೂ ಕಣ್ಣು ಹಾಕ್ತಾರೆ. ಆದ್ದರಿಂದ ಒಂದು ಸಲ ಅವಳನ್ನು ನೋಡಿದೋರು ಮತ್ತೊಮ್ಮೆ ತಿರುಗಿ ನೋಡಬಾರದು ಹಾಗೆ ಇರಬೇಕು ಎಂದಿದ್ದಾರೆ.

66
ಸಾಹುಕಾರನ ಕಥೆ ಹೇಳಿದ ಮಲ್ಲಮ್ಮ

ನಮ್ಮೂರಲ್ಲಿ ಒಬ್ಬ ಸಾವುಕಾರ ಇದ್ದ. ಎಂಥವಳನ್ನೋ ಮದುವೆ ಮಾಡಿಕೊಂಡು ಬಂದಿದ್ದ. ಆಮೇಲೆ ಅವ ಚೆಂದ ಇದ್ರೆ ಎಲ್ಲರೂ ಕಣ್ಣು ಹಾಕ್ತಾರೆ ಎಂದ. ಅದಕ್ಕೇ ನನಗೂ ಅದೇ ಸರಿ ಎನ್ನಿಸಿತು ಎಂದಿದ್ದಾರೆ. ಇದನ್ನು ಮಲ್ಲಮ್ಮ ಟಾಕ್ಸ್​ನಲ್ಲಿ ಶೇರ್​ ಮಾಡಲಾಗಿದೆ. 

Read more Photos on
click me!

Recommended Stories