ಈ ಆತ್ಮ ಪದೇ ಪದೇ ಬೆಡ್‌ರೂಮ್‌ಗೇ ಯಾಕೆ ಬರತ್ತೆ? ಗಂಡ- ಹೆಂಡತಿ ಸಂಸಾರ ಮಾಡೋದಾದ್ರೂ ಹೇಗಪ್ಪಾ? ಫ್ಯಾನ್ಸ್​ ಚಿಂತೆ

Published : Oct 15, 2025, 09:50 PM IST

ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ, ಅಂಬಿಕಾ ಆತ್ಮವು ತನ್ನ ತಂಗಿ ದುರ್ಗಾ ಮತ್ತು ಗಂಡ ಶರತ್‌ರನ್ನು ಒಂದು ಮಾಡಲು ಪ್ರಯತ್ನಿಸುತ್ತಿದೆ. ಆದ್ರೆ ಈ ಆತ್ಮ ಗಂಡ-ಹೆಂಡತಿ ಎಲ್ಲಿ ಹೋದ್ರೂ ಹಿಂಬಾಲಿಸತ್ತೆ, ಬೆಡ್​ರೂಮ್​ಗೂ ಹೋಗತ್ತೆ ಎನ್ನೋ ಬೇಸರ ಸೀರಿಯಲ್​ ಫ್ಯಾನ್ಸ್​ಗೆ. 

PREV
16
ಅಂಬಿಕಾ ಎನ್ನೋ ಕ್ಯೂಟ್‌ ಆತ್ಮ

ಕ್ಯೂಟ್‌ ಆತ್ಮ ಎಂದೇ ಫೇಮಸ್‌ ಆಗಿರೋದು ಎಂದರೆ ಅದು ಜೀ ಕನ್ನಡದ ನಾ ನಿನ್ನ ಬಿಡಲಾರೆ (Naa Ninna Bidalaare Serial) ಅಂಬಿಕಾ ಆತ್ಮ. ತನ್ನ ತಂಗಿಯನ್ನೇ ತನ್ನ ಗಂಡನ ಪತ್ನಿಯನ್ನಾಗಿ ಖುಷಿ ಪಡುತ್ತಿದೆ ಈ ಆತ್ಮ. ದೂರ ದೂರ ಆಗಿರೋ ಈ ದಂಪತಿಯನ್ನು ಒಂದು ಮಾಡುವುದೇ ಸದ್ಯ ಅಂಬಿಕಾ ಗುರಿ.

26
ಬೆಡ್‌ರೂಮ್‌ ವಿಷ್ಯ

ಅದೆಲ್ಲಾ ಸರಿ. ಆದರೂ ಈ ಆತ್ಮ ಪದೇ ಪದೇ ಬೆಡ್‌ರೂಮ್‌ಗೇ ಬರೋದು ಯಾಕೋ ವೀಕ್ಷಕರಿಗೆ ಅಷ್ಟೊಂದು ಸರಿ ಕಾಣಿಸ್ತಿಲ್ಲ. ಶರತ್‌ ಮತ್ತು ದುರ್ಗಾ ಒಟ್ಟಿಗೇ ಇರುವಾಗಲೆಲ್ಲಾ ಈ ಅಂಬಿಕಾ ಬಂದ್ರೆ ಅವರಿಬ್ಬರೂ ಸಂಸಾರ ಮಾಡೋದಾದ್ರೂ ಹೇಗೆ ಎಂದು ಅಂಬಿಕಾ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

36
ಸೀರಿಯಲ್‌ಗೆ ಟ್ವಿಸ್ಟ್‌

ಸದ್ಯ ಈ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಸಿಕ್ಕಿದ್ದು, ಮಾಳವಿಕಾಳ ತಾಂತ್ರಿಕ ಬುದ್ಧಿಯಿಂದಾಗಿ ಹಿತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಅವಳನ್ನು ಕಾಪಾಡುವುದು ಸದ್ಯ ದುರ್ಗಾಳ ಕೈಯಲ್ಲಿ ಇದೆ. ಇದೇ ಕಾರಣಕ್ಕೆ ಆಕೆ ದೊಡ್ಡ ಹೋರಾಟವನ್ನೇ ನಡೆಸಿದ್ದಾಳೆ.

46
ದೇವಿ ರೂಪದ ಅಜ್ಜಿ

ಅಲ್ಲಿ ದೇವಿ ರೂಪದ ಅಜ್ಜಿ ದುರ್ಗಾಳಿಗೆ ಎದುರಾಗುತ್ತಾಳೆ. ಆಗ ಆಕೆ ದುರ್ಗಾಪುರದ ಕಥೆ ಹೇಳುತ್ತಾಳೆ. ಸಾವಿರಾರು ವರ್ಷಗಳ ಹಿಂದಿನ ಕಥೆ ಅದು. ರಾಕ್ಷಸಿ ದುರ್ಗಾಪುರದ ಮೇಲೆ ದಾಳಿ ಮಾಡಿದ್ದಳು. ಆ ರಾಕ್ಷಸಿಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ದುರ್ಗಾಪುರ ನಾಶ ಮಾಡುವ ಉದ್ದೇಶ ಹೊಂದಿದ್ದಳು. ದೇವಿ ರಕ್ಷಕರೂ ಇದ್ದರು. ಅವರು ಇಲ್ಲಿಯ ರಾಜ ಮತ್ತು ಇಬ್ಬರು ಹೆಣ್ಣುಮಕ್ಕಳು. ಅವರ ದುರ್ಗಾಪುರದ ರಕ್ಷಣೆ ಮಾಡುತ್ತಾ ಜೀವ ಬಿಟ್ಟರು. ದೇವಿಯ ಮೂರ್ತಿಯನ್ನು ರಾಕ್ಷಸಿ ಕೊಂಡೊಯ್ದಳು ಎನ್ನುತ್ತ ಆ ಘಟನೆಯನ್ನುಹೇಳಿದ್ದಾಳೆ ಅಜ್ಜಿ.

56
ಹಿತಾ ಪ್ರಾಣ ಕಾಪಾಡಲು ಹೊರಟ ದುರ್ಗಾ

ಕೊನೆಗೆ, ಆ ರಾಕ್ಷಸಿ ದೇವಿಯ ಮೂರ್ತಿ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟಳು. ಆದರೆ ದೇವಿಯ ಬಳೆ ಮತ್ತು ಗೆಜ್ಜೆ ಎಲ್ಲಿದೆ ಎಂದು ತಿಳಿದಿಲ್ಲ. ದೇವಾಲಯದ ಪಕ್ಕದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂರ್ತಿ ಇದೆ. ಆದರೆ ಆ ಕಾಣೆಯಾದ ಬಳೆ ಮತ್ತು ಗೆಜ್ಜೆಯನ್ನು ತಂದರೆ ಮಾತ್ರ ಆ ಬಾಗಿಲು ತೆರೆಯುತ್ತದೆ. ಅವುಗಳನ್ನು ದೇವಿಯ ಹತ್ತಿರ ಇಟ್ಟರೆ, ಹಿತಾಳಿಗೆ ಎಚ್ಚರ ಆಗುತ್ತದೆ ಎಂದಿದ್ದಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವ ಗೊಂದಲ ದುರ್ಗಾಳಿಗೆ ಇದ್ದರೂ, ಹಿತಾಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ರೆಡಿಯಾಗಿದ್ದಾಳೆ.

66
ಬೆಡ್‌ರೂಮ್‌ಗೆ ಹೋಗಬೇಡಮ್ಮಾ

ಅವಳ ನೆರವಿಗೆ ಅಂಬಿಕಾ ಕೂಡ ಹೋಗಿದ್ದು, ಆ ಬಳೆ ಹುಡುಕಲು ಅವಳು ದುರ್ಗಾಗೆ ನೆರವಾಗಿದ್ದಾಳೆ. ಕೊನೆಗೆ ಆ ಬಳೆ ಸಿಕ್ಕಿದೆ. ಅದನ್ನು ಹುಡುಕುವ ಭರದಲ್ಲಿ ಸುಸ್ತಾಗಿದೆ. ಈಗ ಅವಳಿಗೆ ಇಂಜೆಕ್ಷನ್‌ ಕೊಡಲು ಶರತ್‌ ಬಂದಾಗ ಆಕೆ ಕೂಗಿಕೊಂಡಿದ್ದಾಳೆ. ಗಂಡ-ಹೆಂಡತಿಯ ಕೋಳಿ ಜಗಳ ಶುರುವಾಗಿದೆ. ಇದನ್ನು ನೋಡಿ ಅಂಬಿಕಾ ಖುಷಿ ಪಟ್ಟುಕೊಳ್ಳುತ್ತಿದ್ದಾಳೆ. ಆದ್ರೂ ಪದೇ ಪದೇ ಹೀಗೆ ಬೆಡ್‌ರೂಮ್‌ಗೆ ಬರಬೇಡ ಎನ್ನುತ್ತಿದ್ದಾರೆ ನೆಟ್ಟಿಗರು.

Read more Photos on
click me!

Recommended Stories