ಸೀರಿಯಲ್‌ ಬಿಟ್ಟು ಹೋಗ್ತಿರೋ Bhagyalakshmi ಪೂಜಾಗೆ ಆ್ಯಕ್ಸಿಡೆಂಟ್‌ ಆಗೋಯ್ತು! ಇದ್ಯಾವ ನ್ಯಾಯ?

Published : Oct 15, 2025, 09:35 PM IST

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ಪೂಜಾ ಪಾತ್ರಧಾರಿ ಆಶಾ ಅಯ್ಯನಾರ್ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಕಥೆಯಲ್ಲಿ ಪೂಜಾಗೆ ಅಪಘಾತವಾಗುವ ಮೂಲಕ ಹೊಸ ಟ್ವಿಸ್ಟ್ ನೀಡಲಾಗಿದ್ದು, ಅನಿವಾರ್ಯ ಕಾರಣಗಳಿಂದ ಧಾರಾವಾಹಿ ತೊರೆಯುತ್ತಿರುವುದಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

PREV
17
ಟ್ವಿಸ್ಟ್‌ ಮೇಲೆ ಟ್ವಿಸ್ಟ್‌!

ಭಾಗ್ಯಲಕ್ಷ್ಮಿ (Bhagyalakshmi Serial) ಮೂರು ವರ್ಷ ಪೂರೈಸಿದ್ದು, ಇನ್ನೂ ನಾಲ್ಕೈದು ವರ್ಷಗಳು ಓಡಿದರೂ ಅಚ್ಚರಿಯೇನಿಲ್ಲ. ಕಥೆಯನ್ನು ಒಂದಕ್ಕೆ ಒಂದರಂತೆ ಜೋಡಿಸುತ್ತಾ, ಬೇರೆ ಬೇರೆ ಟ್ವಿಸ್ಟ್ ಕೊಡುತ್ತಾ, ಕ್ಷಣ ಕ್ಷಣವೂ ಭಾಗ್ಯ ಸವಾಲನ್ನು ಎದುರಿಸುತ್ತಾ ಇದ್ದಾಳೆ.

27
ಪದೇ ಪದೇ ಟಾರ್ಚರ್‌

ಭಾಗ್ಯಳಿಗೆ ಈ ಸೀರಿಯಲ್‌ನಲ್ಲಿ ಕೊಡುತ್ತಿರುವ ಕಿರುಕುಳವನ್ನು ನೋಡಿ ಒಂದು ಹಂತದಲ್ಲಿ ವೀಕ್ಷಕರು ರೋಸಿ ಕೂಡ ಹೋಗಿದ್ದಾರೆ. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿಯೇ ಮತ್ತೊಂದು ಬರಸಿಡಿಲು ಈಕೆಯ ಬಾಳಿನಲ್ಲಿ ಬರುತ್ತದೆ. ಅದೇ ಇನ್ನೊಂದೆಡೆ, ಈಕೆಯ ಪತಿ ತಾಂಡವ್‌ ಮತ್ತು ಸವತಿ ಶ್ರೇಷ್ಠಾ ಭಾಗ್ಯಳ ಏಳಿಗೆಯನ್ನು ಸಹಿಸದೇ ಪದೇ ಪದೇ ಹಿಂಸೆ ಕೊಡುವುದನ್ನು ನೋಡಿದರೆ, ಆ ಇಬ್ಬರೂ ಎಲ್ಲಿಯಾದರೂ ಸಿಕ್ಕರೆ ಕೊಂದೇ ಬಿಡುವಷ್ಟು ಸಿಟ್ಟು ವೀಕ್ಷಕರಿಗೂ ಇದೆ. ಈ ರೀತಿಯಾಗಿ ಸೀರಿಯಲ್ ಮುಂದುವರೆದಿದೆ.

37
ಸೀರಿಯಲ್‌ ಪಾರ್ಟ್ ಬದಲು

ಒಂದು ಸೀರಿಯಲ್‌ ಹಲವು ವರ್ಷಗಳು ನಡೆದರೆ, ಸಹಜವಾಗಿ ಒಂದೊಂದೇ ಪಾತ್ರಧಾರಿಗಳು ಕಳಚುತ್ತಾ ಬರುವುದು ಹೊಸ ವಿಷಯವೇನಲ್ಲ. ಹಾಗೆ ನೋಡಿದರೆ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಈ ಮೂರು ವರ್ಷಗಳು ಯಾವುದೇ ಪಾತ್ರ ಬದಲಾಗಿರಲಿಲ್ಲ. ಆದರೆ ಇದೀಗ ಪೂಜಾ ಪಾತ್ರ ಬದಲಾಗುತ್ತಿದೆ.

47
ಪೂಜಾ ಪಾತ್ರಧಾರಿ ಹೊರಕ್ಕೆ

ಇದಾಗಲೇ ಪೂಜಾ ಪಾತ್ರಧಾರಿ, ಆಶಾ ಅಯ್ಯನಾರ್‌ (Asha Ayyanar) ಹೊರಕ್ಕೆ ಬರುತ್ತಿದ್ದಾರೆ. ಇವರು ಬಿಗ್‌ಬಾಸ್‌‌ಗೆ (Bigg Boss) ವೈಲ್ಡ್‌ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ತಾವು ಏಕೆ ಈ ಸೀರಿಯಲ್‌ನಿಂದ ಹೊರಕ್ಕೆ ಬರುತ್ತಿದ್ದೇವೆ ಎನ್ನುವುದನ್ನು ನಟಿ ತಿಳಿಸಿಲ್ಲ. ಬದಲಿಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

57
ನಟಿ ಆಶಾ ಅಯ್ಯನಾರ್‌ ಮಾಹಿತಿ

‘‘ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಭಾಗ್ಯಲಕ್ಷ್ಮಿ ಪೂಜಾ. ಆದರೆ ಇನ್ಮುಂದೆ ಭಾಗ್ಯಲಕ್ಷ್ಮಿಯಲ್ಲಿ ಪೂಜಾ ಆಗಿ ಬರೋಲ್ಲ ಅಂತ ಹೇಳೋಕೆ ತುಂಬಾ ಬೇಸರ ಇದೆ. ಈ ಟೀಂ ನ ಬಿಡೋದು ಸುಲಭದ ಮಾತಾಗಿರಲಿಲ್ಲ ಅನಿವಾರ್ಯ ಕಾರಣಗಳಿಂದಾಗಿ ನಾನು ಭಾಗ್ಯಲಕ್ಷ್ಮಿನ ಬಿಡ್ತಾ ಇದೀನಿ. ಮೂರು ವರ್ಷ ಭಾಗ್ಯಲಕ್ಷ್ಮಿ ಟೀಂ ನನಗೆ ತುಂಬಾನೇ ಸಪೋರ್ಟ್ ಮಾಡಿದೆ ತುಂಬಾನೇ ಮೆಮೊರಿಸ್ ಕೊಟ್ಟಿದೆ ತುಂಬಾನೇ ಕಲಿಸಿದೆ ಅದನ್ನು ನಾನು ನನ್ನ ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳುತೀನಿ. ಇನ್ಮುಂದೆ ಬರುವಂತ ಪೂಜಾನ ಕೂಡ ಅಷ್ಟೇ ಪ್ರೀತಿ ಮಾಡಿ ಅಷ್ಟೇ ಬೆಂಬಲಿಸಿ ಎಂದು ಸುದೀರ್ಘ ಪತ್ರ ಬರೆದುಕೊಂಡಿದ್ದಾರೆ.

67
ಪೂಜಾಗೆ ಆ್ಯಕ್ಸಿಡೆಂಟ್‌!

ಪೂಜಾ ಪಾತ್ರ ಬದಲಾಗಲು ಹೊಸ ಟ್ವಿಸ್ಟ್‌ ನೀಡಲಾಗಿದೆ. ಪೂಜಾಳಿಗೆ ಆಕ್ಸಿಡೆಂಟ್‌ ಆದ ರೀತಿಯಲ್ಲಿ ತೋರಿಸಲಾಗಿದೆ. ಈಕೆ ಬದುಕುಳಿಯುವುದೇ ಕಷ್ಟ, ತುಂಬಾ ರಕ್ತ ಲಾಸ್‌ ಆಗಿದೆ ಎಂದು ವೈದ್ಯೆ ಹೇಳುತ್ತಾರೆ. ಇದನ್ನು ನೋಡಿದರೆ ಪೂಜಾ ಸಾಯುತ್ತಾಳೆಯೋ ಎನ್ನುವ ಡೌಟ್‌ ಬರುವುದು ಸಹಜ. ಆದರೆ ಆಶಾ ಅಯ್ಯನಾರ್‌ ಇನ್ನು ಮುಂದೆ ಬರುವ ಪೂಜಾಗೂ ಅಷ್ಟೇ ಪ್ರೀತಿ ಕೊಡಿ ಎಂದಿರುವ ಕಾರಣ, ಈಕೆಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಬಹುದು ಎನ್ನುತ್ತಿದ್ದಾರೆ ವೀಕ್ಷಕರು. ಮುಂದೆ ಬೇರೆ  ಪೂಜಾ ವೀಕ್ಷಕರ ಮುಂದೆ ಬರಲಿದ್ದಾಳೆ.

77
ಪೂಜಾ ಸಾಯಬಾರದು

ಒಟ್ಟಿನಲ್ಲಿ ಏಕಾಏಕಿ ಪಾತ್ರ ಬದಲಾಯಿಸುವ ಬದಲು ಪೂಜಾಗೆ ಅಪಘಾತ ಮಾಡಿಸಲಾಗಿದೆ. ಆದರೆ ರಿಯಾಲಿಟಿ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಪೂಜಾ ಪಾತ್ರವನ್ನು ಸಾಯಿಸಿಯೇ ಬಿಡುತ್ತಾರೆ ಎಂದುಕೊಂಡಿರುವ ನೆಟ್ಟಿಗರು, ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪೂಜಾ ಸಾಯಬಾರದು ಎನ್ನುತ್ತಿದ್ದಾರೆ. ಇದು ನ್ಯಾಯವಲ್ಲ ಎನ್ನುತ್ತಿದ್ದಾರೆ. 

Read more Photos on
click me!

Recommended Stories