ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಸಾಮಾನ್ಯವಾಗಿ ಸ್ಪರ್ಧಿಗಳ ನಡವಳಿಕೆ, ಅವರು ಮಾತನಾಡುವ ಸ್ಟೈಲ್, ಅವರ ಆ್ಯಟಿಟ್ಯೂಡ್ ಎಲ್ಲವೂ ಬದಲಾಗುವುದು ಸಾಮಾನ್ಯ. ಏನೋ ಸಾಧಿಸಿ ಬಂದವರಂತೆ ಅವರ ನಡವಳಿಕೆ ಇರುವುದು ಮಾಮೂಲು. ಆದರೆ, ಬಿಗ್ಬಾಸ್ ಮನೆಗೆ ಹೋಗಿ ಬಂದ ಮೇಲೆ ಮೊದಲಿನಂತೆಯೇ ಕೂಲ್ ಆಗಿ, ಧಿಮಾಕನ್ನು ನೆತ್ತಿಗೆ ಏರಿಸಿಕೊಳ್ಳದ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಮಲ್ಲಮ್ಮ ಕೂಡ ಒಬ್ಬರು.