Bigg Bossನಿಂದ ನರಕ ಅನುಭವಿಸಿದೆ, ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳಬೇಕು ಎನ್ನೋದಾ ಈ ಖ್ಯಾತ ನಟಿ?

Published : Nov 07, 2025, 10:33 PM IST

ತೆಲುಗು ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿರುವ ನಟಿ ವಿಷ್ಣುಪ್ರಿಯ, ಅದೊಂದು ನರಕದ ಅನುಭವ ಎಂದಿದ್ದಾರೆ. ನಿದ್ದೆ, ಊಟ, ಕಾಫಿ ಇಲ್ಲದೆ ಹಿಂಸೆ ಅನುಭವಿಸಿದ್ದಾಗಿ ಹೇಳಿದ್ದು, ಹೊಸ ಮನೆ ಖರೀದಿಸುವ ಆಸೆ ಈಡೇರದೇ, 'ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು' ಎಂದಿದ್ದಾರೆ.

PREV
18
ಬಿಗ್‌ಬಾಸ್‌ ಕನಸು

ಬಿಗ್‌ಬಾಸ್‌ Bigg Bossಗೆ ಒಮ್ಮೆಯಾದರೂ ಹೋಗಬೇಕು ಎಂದು ಕನಸು ಕಾಣುವ ಅದೆಷ್ಟೋ ಮಂದಿ ಇದ್ದಾರೆ. ಆದರೆ ಅಲ್ಲಿ ಅವಕಾಶ ಸಿಗುವುದು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ನೆಗೆಟಿವ್‌ಗಳಿಂದ ಹೆಚ್ಚು ಟ್ರೋಲ್‌ ಆದವರಿಗೆ, ಕಾಂಟ್ರವರ್ಸಿ ಮಾಡಿಕೊಂಡವರಿಗೆ, ಬಿಟ್ಟರೆ ಒಂದಿಬ್ಬರು ಒಳ್ಳೆಯ ರೀತಿಯಲ್ಲಿ ಫೇಮಸ್‌ ಆದ ಸೆಲೆಬ್ರಿಟಿಗಳಿಗೆ ಅಷ್ಟೇ.

28
ಸ್ಪರ್ಧಿಗಳಿಗೆ ಡಿಮಾಂಡ್‌

ಅದೇನೇ ಇದ್ದರೂ ಮುಂದಿನ ಬಿಗ್‌ಬಾಸ್‌ ಸೀಸನ್‌ ಬರುವವರಿಗೆ ಈ ವರ್ಷದ ಸ್ಪರ್ಧಿಗಳಿಗೆ ಡಿಮಾಂಡ್‌ ಇರುತ್ತದೆ, ಒಂದಿಷ್ಟು ಅದೃಷ್ಟವಂತರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಎನ್ನುವ ಕಾರಣಕ್ಕಾಗಿಯೇ ಒಳ್ಳೆಯ ರೀತಿಯಲ್ಲಿ ಹೆಸರು ಮಾಡಿಕೊಂಡಿರುವವರು ಈ ಷೋಗೆ ಹೋಗಲು ನಿರಾಕರಿಸುವುದು ಉಂಟು.

38
ಚಪ್ಪಲಿಯಿಂದ ಹೊಡೆದುಕೊಳ್ಳಬೇಕು

ಅದೇನೇ ಇದ್ದರೂ, ಇಲ್ಲೊಂದು ಖ್ಯಾತ ನಟಿ, ಬಿಗ್​​ಬಾಸ್‌ನಲ್ಲಿ ಪಾಲ್ಗೊಂಡಿರುವುದಕ್ಕೆ ನನ್ನ ಚಪ್ಪಲಿಯಲ್ಲಿ ನಾನು ಹೊಡೆದುಕೊಳ್ಳಬೇಕು ಅನಿಸಿದೆ’ ಎಂದಿದ್ದಾರೆ. ಆ ನಟಿಯೇ ನಿರೂಪಕಿಯೂ ಆಗಿರುವ ವಿಷ್ಣುಪ್ರಿಯ. ಇವರು ತೆಲುಗು ಬಿಗ್‌ಬಾಸ್‌ಗೆ ಹೋಗಿದ್ದರು. ಆದರೆ ಅದನ್ನೀಗ ಶಪಿಸುತ್ತಿದ್ದಾರೆ.

48
98 ದಿನಗಳ ಕಾಲ ಮನೆಯಲ್ಲಿದ್ದರು

ಬಿಗ್‌ಬಾಸ್‌ನಲ್ಲಿ ಅವರು, 98 ದಿನಗಳ ಕಾಲ ಮನೆಯಲ್ಲಿದ್ದರು, ಫಿನಾಲೆ ವಾರದ ಹಿಂದಿನ ವಾರ ಎಲಿಮಿನೇಟ್ ಆಗಿದ್ದವರು. ಹೀಗೆ ಹವಾ ಸೃಷ್ಟಿಸಿ ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದು ಫೇಮಸ್‌ ಆಗಿದ್ದರೂ, ಅವಕಾಶಗಳು ಗಿಟ್ಟಿಸಿಕೊಳ್ಳುತ್ತಿದ್ದರೂ, ಬಿಗ್‌ಬಾಸ್‌ ಅನ್ನು ಶಪಿಸುತ್ತಿದ್ದಾರೆ.

58
ವಿಷ್ಣುಪ್ರಿಯ ಕೊಟ್ಟ ಕಾರಣ

ಅಷ್ಟಕ್ಕೂ ಅವರಿಗೆ ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ಅಂಥದ್ದೇನೂ ಸಮಸ್ಯೆ ಆಗಲಿಲ್ಲ. ಆದರೆ ಕೆಲವರಿಗೆ ಆಗಾಗ್ಗೆ ಹೇಳಿಕೆಗಳ ಮೂಲಕ ಪ್ರಚಲಿತದಲ್ಲಿರುವ ಖಯಾಲಿ. ಅದೇ ರೀತಿ ನಟಿ ವಿಷ್ಣುಪ್ರಿಯ ಇದಕ್ಕೆ ಕೊಟ್ಟಿರುವ ಕಾರಣ ಎಂದರೆ, ಬಿಗ್‌ಬಾಸ್‌ನಲ್ಲಿ ನಾನು ಬಹಳ ಹಿಂಸೆ ಅನುಭವಿಸಿದೆ. ನಿದ್ದೆ ಇಲ್ಲ, ಊಟ ಸರಿಯಿಲ್ಲ, ಸಮಯಕ್ಕೆ ಸರಿಯಾಗಿ ಕಾಫಿ, ಟೀಗಳು ಸಹ ಸಿಗುತ್ತಿರಲಿಲ್ಲ. ಒಟ್ಟಾರೆ ಬಹಳ ಕಷ್ಟಪಟ್ಟಿದ್ದೇನೆ’ ಎಂದಿದ್ದಾರೆ.

68
ಏನೆಲ್ಲಾ ಆಸೆಯಿತ್ತು

ನಾನು ಈ ಷೋಗೆ ಹೋಗಲು ಒಪ್ಪಿಕೊಂಡಿದ್ದು ಹೊಸ ಮನೆಯನ್ನು ಖರೀಸುವುದಕ್ಕಾಗಿ. ಇಲ್ಲಿ ಸಿಗುವ ಸಂಭಾವನೆ ನನಗೆ ಮುಖ್ಯವಾಗಿತ್ತು. ಅದು ಸಾಧ್ಯವೇ ಆಗಲಿಲ್ಲ. ಹಳೆಯ ಮನೆಯೇ ನನಗೆ ಗತಿಯಾಗಿದೆ ಎಂದಿದ್ದಾರೆ. ಅಲ್ಲಿಗೆ ಬಿಗ್‌ಬಾಸ್‌ನಿಂದ ಕೊಟ್ಟ ಹಣ ಏನಾಯಿತು ಎನ್ನುವುದನ್ನು ಹೇಳಲಿಲ್ಲ. ಅಷ್ಟಕ್ಕೂ ಬಿಗ್‌ಬಾಸ್‌ನಲ್ಲಿ ಕೋಟಿ ಕೋಟಿ ಹಣವನ್ನಂತೂ ಕೊಡುವುದಿಲ್ಲ ಎನ್ನುವುದೂ ದಿಟವೇ.

78
ಏನೂ ಸಿಗಲಿಲ್ಲ

ಆದರೂ ಈಕೆ ಅಂಥದ್ದನ್ನೆಲ್ಲಾ ಆಸೆ ಪಟ್ಟು ಹೋಗಿದ್ದರಂತೆ. ಇದ್ಯಾವುದೂ ಸಾಧ್ಯವಾಗಗಿದ್ದ ಕಾರಣ ಆಗಲೇ ಬೈಯೋಣ ಅಂದುಕೊಂಡಿದ್ದರಂತೆ. ಆದರೆ ಜನಪ್ರಿಯತೆ ಸಿಕ್ಕಿದ್ದರಿಂದ ಸುಮ್ಮನಾದೆ ಎಂದಿರೋ ವಿಷ್ಣುಪ್ರಿಯ ಈಗ ಬಿಗ್‌ಬಾಸ್‌ ಅನ್ನು ಬೈಯುತ್ತಿದ್ದಾರೆ!

88
ಬಾಡಿ ಮಸಾಜ್ ಇರಲಿಲ್ಲ

ಇದರ ಜೊತೆಗೆ, ಬಾಡಿ ಮಸಾಜ್ ಇರಲಿಲ್ಲ. ನನ್ನದು ಹೈ-ಫೈ ಜೀವನ. ಆದರೆ ಅಲ್ಲಿ ನರಕವಾಯ್ತು. ಮಸಾಜ್ ಇಲ್ಲ, ಕಾಫಿ-ಟೀ ಇಲ್ಲ. ಸರಿಯಾಗಿ ನಿದ್ದೆ ಇಲ್ಲ, ಹೊಟ್ಟೆ ತುಂಬ ಊಟ ಸಹ ಇರುತ್ತಿರಲಿಲ್ಲ’ ಎಂದಿದ್ದಾರೆ

Read more Photos on
click me!

Recommended Stories